ಇಲ್ಲಿ ಆಸ್ತಿ ಮಾಡೋಕೆ ಅಲ್ಲಾ ಏನು ಭಾರತದವನಾ? ನೋಟೀಸ್ ಕೊಡೋಕೆ ಇವರಪ್ಪನ ಮನೆ ಆಸ್ತೀನಾ? ಪ್ರಹ್ಲಾದ್ ಜೋಶಿ!
ಹಿಂದೂಗಳಿಗೆ ಇರೋದೇ ಭಾರತ ಒಂದು ದೇಶ. ಇಲ್ಲಿನ ಜನರ ಆಸ್ತಿನೇ ಕಸಿದುಕೊಂಡ್ರೆ ಹೇಗೆ? ಇಲ್ಲಿ ಆಸ್ತಿ ಮಾಡುವುದಕ್ಕೆ ಅಲ್ಲಾ ಭಾರತದವನಾ.? ಎಂದು ರೈತರಿಗೆ ನೋಟಿಸ್ ನೀಡುತ್ತಿರುವ ವಕ್ಫ್ ಮಂಡಳಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ (ಅ.28): ಹಿಂದೂಗಳಿಗೆ ಇರೋದೇ ಭಾರತ ಒಂದು ದೇಶ. ಇಲ್ಲಿನ ಜನರ ಆಸ್ತಿನೇ ಕಸಿದುಕೊಂಡ್ರೆ ಹೇಗೆ? ಇಲ್ಲಿ ಆಸ್ತಿ ಮಾಡುವುದಕ್ಕೆ ಅಲ್ಲಾ ಭಾರತದವನಾ.? 40-50 ವರ್ಷಗಳಿಂದ ಉಳಿಮೆ ಮಾಡುವ ರೈತರಿಗೆ ನೋಟಿಸ್ ಕೊಡೋಕೆ ಇದೇನು ಇವರಪ್ಪನ ಮನೆ ಆಸ್ತಿನಾ.? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರ ಹಾಗೂ ವಕ್ಫ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಗಳ ಮೇಲೆ ವಕ್ಫ್ ನಮೂದಿಸುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ಇಲ್ಲಿ ಆಸ್ತಿ ಮಾಡೋಕೆ ಅಲ್ಲಾ ಭಾರತದವನಾ..? ಅಧಿಕಾರ ಕಡಿಮೆ ಆಗುತ್ತೆ ಅನ್ನೋ ಭಯದಿಂದ ಇರುವ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ಗಟ್ಟಿ ಹೇಳಿಕೆ ಬರದೇ ಹೋಗಿದ್ದರೆ, ಉಪಚುನಾವಣೆ ಇರದೇ ಹೋಗಿದ್ದರೆ ಇದು ಹೀಗೆಯೇ ಮುಂದುವರಿಯುತ್ತಿತ್ತು. ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಹಿಂದೆ ತೆಗೆದುಕೊಳ್ಳುತ್ತೇವೆ ಅಂತ ಬಾಯಿಂದ ಹೇಳುತ್ತಿದ್ದಾರೆ. ಅಂದರೆ, ನೋಟೀಸ್ ಕೊಡಲಿಕ್ಕೆ ಇವರು ಯಾರು? ಎಂದು ಕಿಡಿಕಾರಿದರು.
ಇದನ್ನೂ ಓದಿ: ದೇವಸ್ಥಾನಕ್ಕೂ ವಕ್ಫ್ ಮಂಡಳಿ ನೋಟಿಸ್ ನೀಡ್ತಾರೆ: ಶಾಸಕ ಬಸನಗೌಡ ಯತ್ನಾಳ
ರಾಜ್ಯದಲ್ಲಿ ಕಳೆದ 40-50 ವರ್ಷಗಳಿಂದ ಉಳಿಮೆ ಮಾಡುವ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಹೀಗೆ ರಾಜ್ಯದ ರೈತರಿಗೆ ನೋಟಿಸ್ ಕೊಡೋಕೆ ಇದೇನು ಇವರಪ್ಪನ ಮನೆ ಆಸ್ತಿನಾ.? ಹೇಳೋರು ಕೇಳೋರು ಯಾರು ಇಲ್ಲಾ ಅನ್ಕೊಂಡಿದ್ದಾರಾ? ಮುಸ್ಲಿಂ ಮತಾಂಧ ತುಷ್ಟಿಕರಣ ಎಷ್ಟಿದೆ ಅಂತ ಇದರಿಂದ ಸ್ಪಷ್ಟ ಆಗುತ್ತಿದೆ. ದೇವಸ್ಥಾನಕ್ಕೂ ನೋಟೀಸ್ ಕೊಟ್ಟಿದ್ದಾರೆ, ಇವರ್ಯಾರು ಕೊಡೋಕೆ? 2013ರ ಒಳಗೆ ಅನೇಕರ ವಿರೋಧದ ನಡುವೆ ವಕ್ಫ್ ಕಮಿಟಿಗೆ ಅಪರಮಿತ ಅಧಿಕಾರ ಕೊಟ್ಟಿದ್ದಾರೆ. ಅಳ್ನಾವರದಲ್ಲಿ ಪೊಲೀಸ್ ಠಾಣೆ ಕಾಪೌಂಡ್ ಹಾಕಿಕ್ಕೋಳೋಕೆ ಬಿಟ್ಟಿಲ್ಲ. ಪೊಲೀಸರು ಇಷ್ಟು ಅಸಹಾಯಕರಾಗಿದ್ದಾರೆ. ಬೆಂಗಳೂರಿನ ವಿಲ್ಸನ್ ಹೋಟೆಲ್‌ಗೆ ನೋಟೀಸ್ ಕೊಟ್ಟಿದ್ದಾರೆ. ಬಿಜಾಪುರದಲ್ಲಿ ದೊಡ್ಡ ಹಾವಳಿ ನಡೆದಿದೆ. ಉಪ್ಪಿನ ಬೆಟಗೇರಿ ಡ್ಯಾಮನೂರಿನಲ್ಲಿ ನೋಟೀಸ್ ಕೊಟ್ಟಿದ್ದಾರೆ ಎಂದು ಹೇಳಿದರು.
ಹಿಂದೂಗಳಿಗೆ ಇರೋದೇ ಭಾರತ ಒಂದು ದೇಶ. ಇಲ್ಲಿನ ಜನರ ಆಸ್ತಿನೇ ಕಸಿದುಕೊಂಡ್ರೆ ಹೇಗೆ? ಅದರಲ್ಲಿ ಬಡ ಮುಸಲ್ಮಾನರೂ ಇದ್ದಾರೆ. ಕಾಂಗ್ರೆಸ್ ಕಟ್ಟುನಿಟ್ಟಾಗಿ ಹೇಳಬೇಕಿತ್ತು. ಈ ರೀತಿ ಪ್ರಕರಣ ಬರುತ್ತಿರುವುದರಿಂದ ಕೇಂದ್ರದಲ್ಲಿ ನಾವು ಕಾನೂನು ತಿದ್ದುಪಡಿಗೆ ತರುವುದನ್ನು ಬೆಂಬಲಿಸ್ತೀವಿ ಅಂತ ಹೇಳಬೇಕಿತ್ತು. ಆದರೆ, ಕಾಂಗ್ರೆಸ್ ನಾಯಕರು ಯಾಕೆ ಬೆಂಬಲಿಸುತ್ತಿಲ್ಲ. ಸಾಬರಿಗೆ ಏನು ಬೇಕಾದರೂ ಮಾಡಬೇಕು ಅನ್ನೋ ಮನಸ್ಥಿತಿ ವಕ್ಫ ಕಮಿಟಿಯದ್ದು, ಇದಕ್ಕೆ ರಾಜ್ಯ ಸರ್ಕಾರದ ಬೆಂಬಲವಿದೆ. ಯಾವುದೇ ರೈತರಿಗೆ ನೋಟೀಸ್ ಕೊಡುವಂತಿಲ್ಲ ಅಂತ ವಕ್ಫ ಕಮಿಟಿಗೆ ರಾಜ್ಯ ಸರಕಾರ ಆದೇಶ ಕೊಡಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರ ಕೂಡ ಇದರಲ್ಲಿ ಭಾಗಿ ಇದೆ ಅಂತ ಭಾವಿಸಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ವಕ್ಫ್ ಆಸ್ತಿ ನೋಟಿಸ್: ದೀಪಾವಳಿ ಆಚರಿಸದಿರಲು ವಿಜಯಪುರ ರೈತರ ನಿರ್ಧಾರ
ವಕ್ಫ್ ಸಮಿತಿಯಿಂದ ಕೊಡಲಾದ ನೊಟೀಸ್‌ನ ವಿರುದ್ಧ ತೀವ್ರ ಹೋರಾಟ ರೂಪಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಅಲ್ಲಾ ಹೆಸರು ಹೇಳೋದೆಲ್ಲ ಬೋಗಸ್, ಇವರು ಬೇಕಂತಲೇ ಹೇಳ್ತಾರೆ. ನಾವೇನು ಅಲ್ಲಾನ ವಿರುದ್ಧ ಇಲ್ಲ. ಅಲ್ಲಾನ ವಿರುದ್ಧ ಭದ್ಮಾಶ್‌ಗಿರಿ ಮಾಡೋರ ವಿರುದ್ಧ ನಾವಿದ್ದೇವೆ. ಆಸ್ತಿ ಮಾಡೋಕೆ ಅಲ್ಲಾ ಭಾರತದವನಾ? ಹುಚ್ಚರಂತೆ ಮಾತನಾಡ್ತಾರೆ. ಹೋರಾಟಕ್ಕೆ ನಾವು ಎಲ್ಲಾ ರೀತಿಯಾಗಿ ಸಿದ್ದ ಮಾಡ್ತೇವೆ. ಹೈಕಮಾಂಡ್ ಮಟ್ಟದಲ್ಲಿ ಹೋರಾಟ ಮಾಡಲು ಚರ್ಚೆ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.