HD Kumaraswamy on Bhagavad Gita in school: ದೇಶದಲ್ಲಿ ಒಂದು ರೀತಿಯ ಅಜಾಗರೂಕತೆ ವಾತಾವರಣ ಕಾಣುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ಹಿಂಸೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಪ್ರತಿ ಶಾಲೆಯಲ್ಲಿಯೂ ಭಗವದ್ಗೀತೆ ಅಧ್ಯಯನ ನಡೆಯಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ (ಡಿ.2): ದೇಶದಲ್ಲಿ ಒಂದು ರೀತಿಯ ಅಜಾಗರೂಕತೆ ವಾತಾವರಣ ಕಾಣುತ್ತಿದ್ದೇವೆ. ಹಲವಾರು ಕಡೆಗಳಲ್ಲಿ ಹಿಂಸೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಪ್ರತಿ ಶಾಲೆಯಲ್ಲಿಯೂ ಭಗವದ್ಗೀತೆ ಅಧ್ಯಯನ ನಡೆಯಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಭಗವದ್ಗೀತಾ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮ:

ಭಾನುವಾರ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಪ್ರಭಾ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದೆ ಶಾಲಾ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತದ ಪಠ್ಯಗಳು ಇರುತ್ತಿದ್ದವು. ಈಗ ಅದೆಲ್ಲಾ ಮರೆತೇಹೋದ ಸ್ಥಿತಿ ಇದೆ. ಸಮಾಜ ಆಧುನಿಕತೆ ವೇಗದಲ್ಲಿ ಸಾಗುತ್ತಿದೆ. ಅದಕ್ಕೆ ನಿಯಂತ್ರಣ ಬೇಕಾಗಿದೆ ಎಂದರು.

ದೇಶದಲ್ಲಿ ಸನಾತನ ಹಿಂದೂ ಧರ್ಮ ಉಳಿಯಲು ಪೂಜ್ಯರು ಕಾರಣ:

ದೇಶದಲ್ಲಿ ಅಲ್ಪ ಸ್ವಲ್ಪ ಸನಾತನ ಹಿಂದು ಧರ್ಮ ಉಳಿದಿದ್ದರೆ ಅದಕ್ಕೆ ಪೂಜ್ಯರುಗಳೇ ಕಾರಣರು. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೇ 10 ಶ್ಲೋಕಗಳನ್ನು ಪಠಣ ಮಾಡಿದ್ದಾರೆ. ಅವರು ದೇಶ ಮುನ್ನಡೆಸಲು ಮಾತ್ರವಲ್ಲ, ಧರ್ಮದ ಉಳಿವಿನ ಬದ್ಧತೆಯನ್ನೂ ಹೊಂದಿದ್ದಾರೆ. ದೇಶವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ರೂಪಿಸಿದ್ದಾರೆ ಎಂದು ತಿಳಿಸಿದರು.