Dharwad: ದಕ್ಷಿಣ ಭಾರತದ ಪ್ರಥಮ ಫಾರೆನ್ಸಿಕ್ ವಿವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಡಿಗಲ್ಲು
ದೇಶದಲ್ಲಿ ಅಪರಾಧಿ ಕೃತ್ಯ ಏರುಗತಿಯಲ್ಲಿದೆ. ಇದರ ಕಡಿವಾಣಕ್ಕೆ ನಾವು ಎರಡು ಹೆಜ್ಜೆ ಮುಂದಿಡಬೇಕು. ಹೀಗಾಗಿ, ಅಪರಾಧಿಗಳಿಗೆ ಶಿಕ್ಷೆ ನೀಡುವ ನ್ಯಾಯದಾನ ಕ್ಷೇತ್ರದಲ್ಲಿ ವಿಧಿ ವಿಜ್ಞಾನದ ಸಾಕ್ಷ್ಯಾಧಾರಗಳನ್ನು ಕಡ್ಡಾಯವಾಗಿ ಪರಿಗಣಿಸುವ ನಿಟ್ಟಿನಲ್ಲಿ ಐಪಿಸಿ, ಸಿಆರ್‌ಪಿಸಿಗಳಲ್ಲಿ ಬದಲಾವಣೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಧಾರವಾಡ (ಜ.29): ದೇಶದಲ್ಲಿ ಅಪರಾಧಿ ಕೃತ್ಯ ಏರುಗತಿಯಲ್ಲಿದೆ. ಇದರ ಕಡಿವಾಣಕ್ಕೆ ನಾವು ಎರಡು ಹೆಜ್ಜೆ ಮುಂದಿಡಬೇಕು. ಹೀಗಾಗಿ, ಅಪರಾಧಿಗಳಿಗೆ ಶಿಕ್ಷೆ ನೀಡುವ ನ್ಯಾಯದಾನ ಕ್ಷೇತ್ರದಲ್ಲಿ ವಿಧಿ ವಿಜ್ಞಾನದ ಸಾಕ್ಷ್ಯಾಧಾರಗಳನ್ನು ಕಡ್ಡಾಯವಾಗಿ ಪರಿಗಣಿಸುವ ನಿಟ್ಟಿನಲ್ಲಿ ಐಪಿಸಿ, ಸಿಆರ್‌ಪಿಸಿಗಳಲ್ಲಿ ಬದಲಾವಣೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿಧಿ-ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್‌ಗೆ (ಕರ್ನಾಟಕ ಕ್ಯಾಂಪಸ್), ದಕ್ಷಿಣ ಭಾರತದ ಮೊದಲ ವಿಧಿ-ವಿಜ್ಞಾನ ವಿವಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಪರಾಧ ನಡೆದ ಸ್ಥಳಗಳಲ್ಲಿ ತಕ್ಷಣವೇ ವಿಧಿ-ವಿಜ್ಞಾನ ಅಧಿಕಾರಿಗಳು ಭೇಟಿ ನೀಡುವಲ್ಲಿ ಕರ್ನಾಟಕ ಹಾಗೂ ದೆಹಲಿ ಮುಂಚೂಣಿ ಸ್ಥಾನದಲ್ಲಿವೆ. ಆರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗುವ ಅಪರಾಧಗಳಲ್ಲಿ ವಿಧಿ-ವಿಜ್ಞಾನ ತನಿಖೆ ಕಡ್ಡಾಯವಾಗಿದೆ ಎಂದರು.
ದೇವೇಗೌಡರ ಬದುಕು ಮುಖ್ಯ ನನಗೆ: ಮಾಜಿ ಸಿಎಂ ಕುಮಾರಸ್ವಾಮಿ ಭಾವನಾತ್ಮಕ ಮಾತು
ವಿಧಿ-ವಿಜ್ಞಾನ ಕ್ಷೇತ್ರದಲ್ಲಿ ಶಿಕ್ಷಣ ಪಡೆದುಕೊಂಡಲ್ಲಿ ಶೇ.100ರಷ್ಟುಉದ್ಯೋಗ ಖಚಿತವಾಗಿ ಸಿಗಲಿದೆ. ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಕಾರ್ಯಾರಂಭದಿಂದ ಉತ್ತರ ಕರ್ನಾಟಕದಲ್ಲಿ ಯುವ ಜನಾಂಗಕ್ಕೆ ಉದ್ಯೋಗಾವಕಾಶ ಸಿಗುತ್ತದೆ. ಕ್ಯಾಂಪಸ್‌ನಿಂದ ಕೇವಲ ರಾಜ್ಯಕ್ಕಷ್ಟೇ ಅಲ್ಲದೆ, ನೆರೆಹೊರೆಯ ರಾಜ್ಯಗಳಿಗೂ ಇದರ ಲಾಭ ದೊರೆಯಲಿದೆ. ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಅಪರಾಧ, ಡಿಎನ್‌ಎ ವಿಧಿ ವಿಜ್ಞಾನ, ಆಹಾರ ಹಾಗೂ ಕೃಷಿ ವಿಧಿ ವಿಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶೈಕ್ಷಣಿಕ ವಿಷಯಗಳಲ್ಲಿ ಉನ್ನತ ಜ್ಞಾನ ನೀಡಲಾಗುವುದು. ಇಡೀ ಜಗತ್ತಿನಲ್ಲಿಯೇ ಹೆಚ್ಚಿನ ವಿಧಿ ವಿಜ್ಞಾನ ಪರಿಣಿತರನ್ನು ಭಾರತದಲ್ಲಿ ಹೊರತರಲಾಗುವುದು ಎಂದರು.
ಬೆನ್ನು ಹತ್ತಿದ್ದ ಜೋಶಿ: ಈ ಕ್ಯಾಂಪಸ್ ಧಾರವಾಡದಲ್ಲಿಯೇ ನಿರ್ಮಿಸಲು ಸ್ನೇಹಿತ ಪ್ರಹ್ಲಾದ ಜೋಶಿ ನನ್ನ ಬೆನ್ನು ಬಿದ್ದಿದ್ದರು. ಅವರನ್ನು ಕಾಡಿಸಬೇಕು ಅಂತ ಜಾಗವೇ ಇಲ್ಲ, ಹೇಗೆ ಕೊಡಲಿ ಎಂದು ಕೇಳಿದ್ದೆ. ಆದರೆ, ಒಂದೇ ದಿನದಲ್ಲಿ ಐವತ್ತು ಎಕರೆ ಜಾಗ ಕೊಟ್ಟಿದ್ದಾರೆ. ಆಗ ನನಗೆ ಬೇರೆ ದಾರಿಯೇ ಇರಲಿಲ್ಲ. ಕ್ಯಾಂಪಸ್ ಮಂಜೂರು ಮಾಡಿದೆ ಎಂದು ಅಮಿತ್ ಶಾ ಹೇಳಿದರು.
Kolar: ಪತಿಯನ್ನು MLA ಮಾಡುವಂತೆ ದೇವರ ರಥಕ್ಕೆ ಬಾಳೆಹಣ್ಣು ಎಸೆದ ಪತ್ನಿ!
ದ.ಭಾರತದ ಮೊದಲ ಕ್ಯಾಂಪಸ್: ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಹದಿನೈದು ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಇದರ ವಿಶೇಷ. ಅಪರಾಧಗಳ ಪತ್ತೆ ಹಚ್ಚುವಲ್ಲಿ ವಿಧಿ ವಿಜ್ಞಾನ ಶಾಸ್ತ್ರದ ಮಹತ್ವ ಬಹಳಷ್ಟಿದೆ. ಇದನ್ನು ಶಾಸ್ತ್ರಬದ್ಧವಾಗಿ ಅಧ್ಯಯನ ಮಾಡಲು ದಕ್ಷಿಣ ಭಾರತದಲ್ಲಿ ವಿವಿಗಳು ಇರಲಿಲ್ಲ. ಇದೀಗ ಧಾರವಾಡದಲ್ಲಿ ಸ್ಥಾಪನೆಯಾಗುತ್ತಿರುವುದು ಮೊದಲನೆಯದು. ದೇಶದ 9ನೆಯ ವಿವಿ ಇದಾಗಲಿದೆ. ಸದ್ಯ ಗುಜರಾತ್‌ನ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಕ್ಯಾಂಪಸ್ ಇದಾಗಿದ್ದು, ಪೂರ್ಣ ಪ್ರಮಾಣದಲ್ಲಿ ವಿವಿ ಪ್ರಾರಂಭವಾದ ಮೇಲೆ ಪ್ರತ್ಯೇಕ ವಿವಿಯಾಗಿ ಇದು ಮಾರ್ಪಡಲಿದೆ. ಕೃಷಿ ವಿವಿಯ ಕ್ಯಾಂಪಸ್‌ನಲ್ಲಿಯೇ 50 ಎಕರೆ ಜಾಗದಲ್ಲಿ ಈ ವಿವಿ ಸ್ಥಾಪನೆಯಾಗಲಿದೆ.