Kolar: ಪತಿಯನ್ನು MLA ಮಾಡುವಂತೆ ದೇವರ ರಥಕ್ಕೆ ಬಾಳೆಹಣ್ಣು ಎಸೆದ ಪತ್ನಿ!
ಚುನಾವಣೆ ಸಮೀಪಿಸುತ್ತಿದಂತೆ ಕೆಲವರು ಈ ಬಾರಿ ಶತಾಯಗತಾಯ ಶಾಸಕರಾಗಲೇಬೇಕು ಎಂದು ಕಸರತ್ತು ಮಾಡುತ್ತಲೇ ಇದ್ದಾರೆ. ಮತದಾರರಿಗೆ ವಿವಿಧ ಭರವಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದರು, ಮತ್ತೆ ಕೆಲವರು ದೇವರ ಮೊರೆ ಹೋಗ್ತಿದ್ದಾರೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಜ.28): ಚುನಾವಣೆ ಸಮೀಪಿಸುತ್ತಿದಂತೆ ಕೆಲವರು ಈ ಬಾರಿ ಶತಾಯಗತಾಯ ಶಾಸಕರಾಗಲೇಬೇಕು ಎಂದು ಕಸರತ್ತು ಮಾಡುತ್ತಲೇ ಇದ್ದಾರೆ. ಮತದಾರರಿಗೆ ವಿವಿಧ ಭರವಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದರು, ಮತ್ತೆ ಕೆಲವರು ದೇವರ ಮೊರೆ ಹೋಗ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ಕೋಲಾರ ಜಿಲ್ಲೆಯ ಮಾಲೂರು ವಿಧಾನ ಕ್ಷೇತ್ರದಲ್ಲಿ ನಡೆದ ಬಸವಣ್ಣನ ಜಾತ್ರೆಯಲ್ಲಿ ಒಂದು ಘಟನೆ ನಡೆದಿದೆ.
ಹೌದು! ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಪ್ರಬಲ ಸಂಭಾವ್ಯ ಅಭ್ಯರ್ಥಿ ಆಗಿ ಗುರುತಿಸಿಕೊಂಡಿರುವ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಇಂದು ಸೊಣಪನಹಟ್ಟಿಯಲ್ಲಿ ನಡೆದ ಬಸವಣ್ಣನ ಜಾತ್ರೆಗೆ ಭೇಟಿ ಕೊಟ್ಟು ದೇವರಿಗೆ ವಿಶೇಷವಾದ ಹರಕೆ ಕಟ್ಟಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಬಸವಣ್ಣನ ಜಾತ್ರಾ ಮಹೋತ್ಸವದಲ್ಲಿ ಒಂದು ವಿಶೇಷವಾದ ಪದ್ದತಿ ನಡೆದುಕೊಂಡು ಬಂದಿದೆ.
ಯಾರಾದ್ರೂ ಭಕ್ತಿಯಿಂದ ತಮ್ಮ ಮನದ ಆಸೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಅಥವಾ ಮನಸ್ಸಿನಲ್ಲಿ ಹರಕೆ ಕಟ್ಟಿಕೊಂಡು ದೇವರ ರಥದ ಮೇಲೆ ಬಾಳೆಹಣ್ಣು ಎಸೆದರೆ ಬರುವ ಜಾತ್ರೆಯ ಹೊತ್ತಿಗೆ ಹರಕೆ ಫಲಿಸುತ್ತೆ ಅನ್ನೋ ನಂಬಿಕೆ ನಡೆದುಕೊಂಡು ಬಂದಿದೆ.ಈಗಾಗಿ ಇದೆ ದಿನಕ್ಕಾಗಿ ಕಾಯುವ ಸುತ್ತಮುತ್ತಲಿನ ಗ್ರಾಮದವರು ಹಾಗೂ ರಾಜ್ಯದ ಬೇರೆ ಬೇರೆ ಭಾಗಗದ ಜನರು ಜಾತ್ರೆಗೆ ಭೇಟಿ ಕೊಟ್ಟು ಬಸವಣ್ಣ ದೇವರ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತಾರೆ.
ಗುಮ್ಮಟನಗರಿಯಲ್ಲಿ ಹೋರಿಗೂ ಬರ್ತಡೇ: ಊರಿಗೆ ಊಟ ಹಾಕಿದ ಅನ್ನದಾತ!
ಇನ್ನು ವಿಷಯ ತಿಳಿದು ಜಾತ್ರೆಗೆ ಬಂದ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಮೊದಲು ರಾಸುಗಳಿಗೆ ಮೇವಿನ ವ್ಯವಸ್ಥೆ ಮಾಡಿ, ಬಸವಣ್ಣನ ಆಶೀರ್ವಾದ ಪಡೆದು ಬಳಿಕ ನನ್ನ ಪತಿ ವಿಜಯ್ ಕುಮಾರ್‌ರನ್ನು ಈ ಬಾರಿ ಶಾಸಕರನ್ನಾಗಿ ಮಾಡು ಎಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದು ಹರಕೆ ಕಟ್ಟಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿದೆ.