ಬೆಂಗಳೂರು (ಫೆ.27): ಕರ್ನಾಟಕ ವಿಧಾನಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತು ಮೂಡಿಸುವ ಸಲುವಾಗಿ ಸಮವಸ್ತ್ರ ಕಡ್ಡಾಯ ಸೇರಿದಂತೆ ವಿವಿಧ ಸೂಚನೆಗಳನ್ನು ನೀಡಿ ವಿಧಾನಪರಿಷತ್‌ ಸಚಿವಾಲಯ ಆದೇಶ ಹೊರಡಿಸಿದೆ.

ಮಾ.1 ರಿಂದ ಸಚಿವಾಲಯದ ಪ್ರತಿಯೊಬ್ಬ ಸಿಬ್ಬಂದಿಗೂ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ, ಮಾ.15ರಿಂದ ಕಡ್ಡಾಯವಾಗಿ ‘ಡಿ’ ಗ್ರೂಪ್‌ ನೌಕರರ ವರ್ಗದ ಪುರುಷರು ಬಿಳಿ ಬಣ್ಣ ಹಾಗೂ ಮಹಿಳೆಯರು ಕಂದು ಕೆಂಪು ಬಣ್ಣದ ಸಮವಸ್ತ್ರ ಧರಿಸಬೇಕು. ವಾಹನ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಲಾಗಿದೆ.

HALನಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾರಿಡಾರ್‌ನಲ್ಲಿ ಗುಂಪು ಸೇರುವುದು ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಲ್ಲುವುದನ್ನು ನಿಷೇಧಿಸಲಾಗಿದೆ. ಎಲ್ಲ ಶಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಚಲನ-ವಲನ (ಮೂವ್‌ಮೆಂಟ್‌ ರಿಜಿಸ್ಟರ್‌) ಪುಸ್ತಕವನ್ನು ನಿರ್ವಹಿಸಬೇಕು. ಸಚಿವಾಲಯದ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ನೌಕರರಿಗೆ ಅಧಿಕೃತವಾಗಿ ಕೆಲಸ ಕಾರ್ಯಗಳಿಗೆ ಮಾತ್ರ ಕಚೇರಿಯಿಂದ ಹೊರಗಡೆ ಹೋಗಲು ಅನುಮತಿ ನೀಡಬೇಕು ಎಂದು ಕರ್ನಾಟಕ ವಿಧಾನಪರಿಷತ್‌ ಅಧೀನ ಕಾರ್ಯದರ್ಶಿ ಎನ್‌. ಜಯಂತಿ ಆದೇಶದಲ್ಲಿ ತಿಳಿಸಿದ್ದಾರೆ.