ಇಡಗುಂಜಿ ಯಕ್ಷಗಾನ ಮೇಳಕ್ಕೆ ಯುನೆಸ್ಕೋ ಮಾನ್ಯತೆ: ಕರಾವಳಿಯ ಅನನ್ಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ವಿಶ್ವಮಾನ್ಯತೆ

ಒಟ್ಟು 15 ಕಲಾವಿದರ ತಂಡ ದೇಶ-ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತ ಮುನ್ನಡೆದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಈ ಮಂಡಳಿ ವಹಿಸಿದ ಪಾತ್ರ ಚರಿತ್ರೆಯಲ್ಲೂ ದಾಖಲಾಗಿದೆ. ಈವರೆಗೆ ಮಂಡಳಿಯು ಸುಮಾರು 9000ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ನೀಡಿದೆ.
 

UNESCO recognition for Idagunji Yakshagana Mela grg

ವಸಂತಕುಮಾರ್ ಕತಗಾಲ 

ಕಾರವಾರ(ಅ.01): ರಾಮನಗರದಲ್ಲಿರುವ ಜಾನಪದ ಪರಿಷತ್ ಜತೆ ಯಲ್ಲೇ ಇದೀಗ ಯಕ್ಷರಂಗದಲ್ಲಿ ಹಲವು ಪ್ರಥಮ ಗಳ ಇತಿಹಾಸ ನಿರ್ಮಿಸಿದ, ಹಲವು ದಿಗ್ಗಜ ಯಕ್ಷ ಕಲಾವಿದರನ್ನು ನಾಡಿಗೆ ಪರಿಚಯಿಸಿದ ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ಕೆರೆಮನೆಗೆ ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ) ಮಾನ್ಯತೆ ದೊರೆತಿದೆ. ಈ ಮೂಲಕ ಕರಾವಳಿಯ ಈ ಅನನ್ಯ ಸಾಂಪ್ರದಾಯಿಕ ಕಲೆ ಮಾತ್ರವಲ್ಲದೆ, ಪ್ರಸಿದ್ದ ಇಡಗುಂಜಿ ಮೇಳಕ್ಕೂ ವಿಶ್ವಮಾನ್ಯತೆ ಸಿಕ್ಕಂತಾಗಿರುವುದು ಯಕ್ಷ ಕಲಾವಿದರು, ಪ್ರೋತ್ಸಾಹಕರಲ್ಲಿ ಸಂತಸ ಮೂಡಿಸಿದೆ.

ಯುನೆಸ್ಕೋದಿಂದ ಸಿಕ್ಕ ಮಾನ್ಯತೆಯಿಂದಾಗಿ ಎಶ್ವದ 58 ರಾಷ್ಟ್ರೀಯ ಸಂಸ್ಥೆಗಳ ಪೈಕಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ಒಂದು ಎಂದು ಪರಿಗಣಿಸಲ್ಪಡುತ್ತದೆ. ಜೂನ್ ತಿಂಗಳಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಈ ಮಾನ್ಯತೆ ಘೋಷಿಸಲಾಗಿದೆ. 

ಶಿರಸಿ: ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ವಿಶ್ವದಾಖಲೆಯ ಪಟ್ಟಿಗೆ ಸೇರ್ಪಡೆ

ಯುನೆಸ್ಕೋ 2003ರ ಅಮೂರ್ತ ಸಾಂಸ್ಕೃ ತಿಕ ಪರಂಪರೆ, ಸಂರಕ್ಷಣೆ, ಅಂತರಿಕ ಸಮಿತಿಗೆ ಸಲಹೆ ಮಾಡಲು ಇನ್ನು ಇಡಗುಂಜಿ ಯಕ್ಷಗಾನ ಮಂಡಳಿ ಮಾನ್ಯತೆ ಪಡೆದಿದೆ. 1934ರಲ್ಲಿ ಸ್ಥಾಪನೆಯಾದ ಇಡಗುಂಜಿ ಮೇಳ 90 ವರ್ಷಗಳ ವರ್ಣರಂಜಿತ ಕಲಾ ಇತಿಹಾಸದ ಜೊತೆಗೆ ಇಂದು ಎಲ್ಲರ ಗಮನ ಸೆಳೆಯುತ್ತಿದೆ. 

ಉತ್ತರಕನ್ನಡದ ಹೊನ್ನಾವರದ ಗುಣವಂತೆ ಬಳಿ ಮಂಡಳಿಯ ಕೇಂದ್ರ ಸ್ನಾನವಿದೆ. ಯಕ್ಷಗಾನದ ಯುಗಪುರುಷದಿ.ಕೆರೆಮನೆ ಶಿವರಾಮ ಹೆಗಡೆಯವರಿಂದ ಸ್ಥಾಪಿಸಲ್ಪಟ್ಟ ಈ ಮಂಡಳಿ, ಅವರ ಪುತ್ರ ಮೇರುಕಲಾವಿದೆ ದಿ. ಕೆರೆಮನೆ ಶಂಭು ಹೆಗಡೆ ಅವರ ಮುಂದಾಳತ್ವದಲ್ಲಿ ಮತ್ತಷ್ಟು ಉತ್ತುಂಗಕ್ಕೇರಿ ಇಂದು ಅವರ ಮೊಮ್ಮಗ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಅನೇಕ ದಾಖಲೆಗಳನ್ನು ಮಾಡಿ ಮುನ್ನಡೆಯುತ್ತಿದೆ. ಅಲ್ಲದೆ, ಶಿವಾನಂದ ಹೆಗಡೆಯವರ ಮಗ ಕೆರೆಮನೆ ಶ್ರೀಧರ ಹೆಗಡೆ ಕೂಡಾ ತಮ್ಮ ಉನ್ನತ ವ್ಯಾಸಂಗ ಮುಗಿಸಿ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ ಥೀಮ್‌ ಮೊದಲ ಅಂಚೆ ಚೀಟಿ ಬಿಡುಗಡೆಗೆ ಸಿದ್ಧ!

ಒಟ್ಟು 15 ಕಲಾವಿದರ ತಂಡ ದೇಶ-ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತ ಮುನ್ನಡೆದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಈ ಮಂಡಳಿ ವಹಿಸಿದ ಪಾತ್ರ ಚರಿತ್ರೆಯಲ್ಲೂ ದಾಖಲಾಗಿದೆ. ಈವರೆಗೆ ಮಂಡಳಿಯು ಸುಮಾರು 9000ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ನೀಡಿದೆ.

1934ರಲ್ಲಿ ಸ್ಥಾಪನೆ ಯಾದ ಮಂಡಳಿಗೆ ಈಗ 90ನೇ ವರ್ಷದ ಸಂಭ್ರಮ. ಇದೇ ಸಂದರ್ಭದಲ್ಲಿ ಸಂಸ್ಥೆಗೆ ವಿಶ್ವಮನ್ನಣೆ ದೊರಕಿದ್ದು  ಸಂತೋಷದ ಸಂಗತಿ: ಕೆರೆಮನೆ ಶಿವಾನಂದ ಹೆಗಡೆ,  ನಿರ್ದೇಶಕರು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ

Latest Videos
Follow Us:
Download App:
  • android
  • ios