ಅಪ್ರಾಪ್ತ ಯುವಕನಿಗೆ ದ್ವಿಚಕ್ರ ವಾಹನ ಕೊಟ್ಟಿದ್ದ ಪರ್ವಿನ್ ಎಂಬ ಮಹಿಳೆಗೆ 4ನೇ ಎಂಎಂಟಿಸಿ ನ್ಯಾಯಾಲಯ 26ಸಾವಿರ ದಂಡ ವಿಧಿಸಿದೆ. ವಾಹನಕ್ಕೆ ಇನ್ಶುರೆನ್ಸ್ ಇಲ್ಲದಿದ್ದರೂ ಅಪ್ರಾಪ್ತನಿಗೆ ವಾಹನ ನೀಡಿದ್ದ ಮಹಿಳೆ. ಈ ಪ್ರಕರಣ ಸಂಬಂಧ ಜಯನಗರ ಸಂಚಾರ ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.
ಬೆಂಗಳೂರು (ಡಿ.14) : ಅಪ್ರಾಪ್ತ ಯುವಕನಿಗೆ ದ್ವಿಚಕ್ರ ವಾಹನ ಕೊಟ್ಟಿದ್ದಕ್ಕೆ ಮಹಿಳೆಗೆ 4ನೇ ಎಂಎಂಟಿಸಿ ನ್ಯಾಯಾಲಯ 26ಸಾವಿರ ದಂಡ ವಿಧಿಸಿದೆ.
ಪರ್ವಿನ್ ಎಂಬ ಮಹಿಳೆಗೆ ದಂಡ. ಅಪ್ರಾಪ್ತರಿಗೆ ದ್ವಿಚಕ್ರ ವಾಹನ ಕೊಡುವುದ ಅಪರಾಧ ಅಲ್ಲದೇ ಈ ಪ್ರಕರಣದಲ್ಲಿ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಹೀಗಿದ್ದು ಯುವಕನಿಗೆ ದ್ವಿಚಕ್ರ ವಾಹನ ನೀಡಿದ್ದ ಪರ್ವಿನ್. ದ್ವಿಚಕ್ರ ವಾಹನಕ್ಕೆ ಇನ್ಶುರೆನ್ಸ್ ಸಹ ಇರಲಿಲ್ಲ. ಇನ್ಶುರೆನ್ಸ್ ಇಲ್ಲದ ವಾಹನ ಓಡಿಸಿ ಅಪಘಾತಕ್ಕೀಡಾಗಿದ್ದ ಬಾಲಕ.ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸಿದ್ದ ಜಯನಗರ ಸಂಚಾರಿ ಪೊಲೀಸರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಮಹಿಳೆ ತಪ್ಪಿಸ್ಥಳು ಎಂಬುದು ಸಾಬೀತಾದ ಹಿನ್ನೆಲೆ 26 ಸಾವಿರ ದಂಢ ವಿಧಿಸಿದ 4ನೇ ಎಮ್ ಎಮ್ ಟಿಸಿ ನ್ಯಾಯಾಲಯ.
ಬೆಂಗಳೂರಿನಲ್ಲಿ ಅಪ್ರಾಪ್ತರು ವಾಹನ ಓಡಿಸುವುದು, ವೀಲಿಂಗ್ ಮಾಡುವ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಬಗ್ಗೆ ವಾಹನ ಮಾಲೀಕರಿಗೆ ಸಂಚಾರಿ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ಕಡಿಮೆ ಆಗುತ್ತಿಲ್ಲ. ಈ ಹಿನ್ನೆಲೆ ಕಠಿಣ ಕ್ರಮಕ್ಕೆ ಮುಂದಾಗಿರೋ ಪೊಲೀಸರು.
ಬೆಂಗಳೂರು ವಾಹನ ಸವಾರರ ಮೇಲೆ 68 ಲಕ್ಷ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಕೇಸ್ ಹಾಕಿದ ಸಂಚಾರಿ ಪೊಲೀಸರು!
