ಅನಧಿಕೃತ ನೀರು ಪೂರೈಕೆ ವಿರುದ್ಧ ಪ್ರತಿಭಟನೆ; 595 ನೀರಿನ ಟ್ಯಾಂಕರ್‌ಗಳ ಮೇಲೆ ಕೇಸ್ !
ಅನಧಿಕೃತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಖಾಸಗಿ ಶಾಲಾ ವಾಹನಗಳ ಬಳಿಕ ನೀರಿನ ಟ್ಯಾಂಕರ್‌ಗಳಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದು, ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ಕಾನೂನು ಉಲ್ಲಂಘಿಸಿದ ನೀರಿನ ಟ್ಯಾಂಕರ್‌ಗಳ ಮೇಲೆ 595 ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು (ಫೆ.1): ಅನಧಿಕೃತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಖಾಸಗಿ ಶಾಲಾ ವಾಹನಗಳ ಬಳಿಕ ನೀರಿನ ಟ್ಯಾಂಕರ್‌ಗಳಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದು, ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ಕಾನೂನು ಉಲ್ಲಂಘಿಸಿದ ನೀರಿನ ಟ್ಯಾಂಕರ್‌ಗಳ ಮೇಲೆ 595 ಪ್ರಕರಣ ದಾಖಲಿಸಿದ್ದಾರೆ.
ನಗರದ ಎಲ್ಲ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಈ ವಿಶೇಷ ಕಾರ್ಯಾಚರಣೆ ನಡೆದಿದ್ದು, ಟ್ಯಾಂಕರ್‌ಗಳ ಮೇಲೆ 595 ಪ್ರಕರಣ ದಾಖಲಿಸಿ 3,33,500 ರು ದಂಡವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಖಾಸಗಿ ಶಾಲಾ ವಾಹನಗಳ ವಿರುದ್ಧ ಸಹ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ಬಿಬಿಎಂಪಿ 2024-25ನೇ ಸಾಲಿನ ಬಜೆಟ್ ಸಿದ್ಧತೆ; ಈಗ್ಲಾದ್ರೂ ನೆರವೇರುತ್ತಾ ವಿವಿಧ ಇಲಾಖೆಗಳ ಸಮನ್ವಯತೆ!
ಕೇಸ್ ಹಾಗೂ ದಂಡದ ವಿವರ ಉಲ್ಲಂಘನೆಪ್ರಕರಣದಂಡ (₹)ಸಮವಸ್ತ್ರ ಧರಿಸದಿರುವುದು 2521, 26,000ಸೀಟ್ ಬೆಲ್ಟ್ ಹಾಕದಿರುವುದು 402000 ನೋ ಎಂಟ್ರಿ 13467000ದೋಷಪೂರಿತ ಸಂಖ್ಯಾ ಫಲಕ 4824000 ಪಥ ಶಿಸ್ತು ಉಲ್ಲಂಘನೆ 63000, ನಿಲುಗಡೆ ನಿಷೇಧ6464000, ಪುಟ್‌ಪಾತ್ ಪಾರ್ಕಿಂಗ್ 44000, ಕರ್ಕಶ ಹಾರ್ನ್ 136500, ಪಾನಮತ್ತ ಚಾಲನೆ 1 ಕೋರ್ಟ್‌ನಲ್ಲಿ ದಂಡ ಇತರೆ ಪ್ರಕರಣ3319000 ಸೇರಿ ಒಟ್ಟು 5953,33,500 ವಸೂಲಿ ಮಾಡಲಾಗಿದೆ.
ಮೂಕಖಾಂಬಿಕ ಲೇಔಟ್ ನಿವಾಸಿಗಳು ಪ್ರತಿಭಟನೆ:
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಹಾಗಾಗಿ, ಟ್ಯಾಂಕರ್ ನೀರು ಸರಬರಾಜು ನಿಲ್ಲಿಸುವಂತೆ ಆಗ್ರಹಿಸಿ ಕೆಂಗೇರಿಯ ಮೂಕಾಬಿಂಕಾ ಲೇಔಟ್ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಅನಧಿಕೃತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಹಾಗೂ ಬಿಬಿಎಂಪಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬುಧವಾರ ನೀರಿನ ಟ್ಯಾಂಕರ್‌ಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಮೈಲಸಂದ್ರ ಟ್ಯಾಂಕರ್ ಹಾಗೂ ಕೊಳವೆ ಬಾವಿ ಮಾಲೀಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿ ದಿನ 70ಕ್ಕೂ ಅಧಿಕ ಟ್ಯಾಂಕರ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ತೆಗೆದು ಅಪಾರ್ಟ್‌ಮೆಂಟ್, ಪಿಜಿ, ಹಾಸ್ಟಲ್, ಟೆಕ್ ಪಾರ್ಕ್, ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಹಣ ಮಾಡಲಾಗುತ್ತಿದೆ. ಇದರಿಂದ ಮೂಕಾಂಬಿಕಾ ಲೇಔಟ್‌ನ 30ಕ್ಕೂ ಅಧಿಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕಳೆದ ಒಂದು ತಿಂಗಳಿನಿಂದ ಲೇಔಟ್‌ನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ.
ಬೆಂಗಳೂರು ಪಿ.ಜಿ.ಗಳಿಗೆ ಹೊಸ ಮಾರ್ಗಸೂಚಿ ಪ್ರಕಟ: ಪೊಲೀಸ್ ಇಲಾಖೆಯಿಂದ ಕಠಿಣ ನಿಯಮ
ಲೇಔಟ್‌ನ ನಾಗರಿಕರಿಗಾಗಿ, ಬಿಬಿಎಂಪಿ ಕೊರೆಸಿದ ಕೊಳವೆ ಬಾವಿ ಸಹ ಬತ್ತಿ ಹೋಗಿದೆ. ಹೀಗಾಗಿ, ಟ್ಯಾಂಕರ್ ನೀರು ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸ್ಥಳೀಯರು ಆಗ್ರಹಿಸಿದರು. ಈ ವೇಳೆ ಟ್ಯಾಂಕರ್ ಮಾಲೀಕರು ಮತ್ತು ನಾಗರಿಕರ ನಡುವೆ ವಾಗ್ವಾದ ಉಂಟಾಯಿತು. ಈ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.