Asianet Suvarna News Asianet Suvarna News

ಪಾಲಿಕೆಯಿಂದ ಪಾಲಿಕೆಗೆ ಅನಧಿಕೃತ 34,541 ಕೋಟಿ ರೂ. ಫಲಕ ತೆರವು

ನಗರದಲ್ಲಿ ಕಳೆದ ಮಾಚ್‌ರ್‍ನಿಂದ ಮೇ 25ರವರೆಗೆ ಅಳವಡಿಸಲಾಗಿದ್ದ ಒಟ್ಟು 35,137 ಅನಧಿಕೃತ ಜಾಹಿರಾತು ಫಲಕಗಳನ್ನು ಗುರುತಿಸಲಾಗಿದ್ದು, ಆ ಪೈಕಿ 34,541 ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು  ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.

Unauthorized clearance of 34,541 plates from corporation to corporation rav
Author
First Published May 31, 2023, 4:48 AM IST

ಬೆಂಗಳೂರ (ಮೇ.26) ನಗರದಲ್ಲಿ ಕಳೆದ ಮಾಚ್‌ರ್‍ನಿಂದ ಮೇ 25ರವರೆಗೆ ಅಳವಡಿಸಲಾಗಿದ್ದ ಒಟ್ಟು 35,137 ಅನಧಿಕೃತ ಜಾಹಿರಾತು ಫಲಕಗಳನ್ನು ಗುರುತಿಸಲಾಗಿದ್ದು, ಆ ಪೈಕಿ 34,541 ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.

ನಗರದಲ್ಲಿ ಅಳವಡಿಸಿರುವ ಅನಧಿಕೃತ ಜಾಹಿರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೆ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಿಗದಿಯಾಗಿತ್ತು. ಕಾಲಾವಕಾಶದ ಕೊರತೆಯಿಂದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಿಲ್ಲ ಆದರೆ, ಹೈಕೋರ್ಚ್‌ ಈ ಹಿಂದೆ ನೀಡಿದ್ದ ನಿರ್ದೇಶನದ ಅನ್ವಯ ನಗರದಲ್ಲಿ ಜಾಹೀರಾತು ಅಳವಡಿಕೆಯನ್ನು ತಡೆಯುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಶ್ರೀಧರ್‌ ಮೂರ್ತಿ ಅನುಪಾಲನಾ ವರದಿ ಸಲ್ಲಿಸಿದ್ದಾರೆ.

ಮಹದಾಯಿ, ಮೇಕೆದಾಟು ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಡಿಕೆಶಿ ತಾಕೀತು

2023ರ ಮಾಚ್‌ರ್‍ನಿಂದ ಮೇ 25ರವರೆಗೆ ನಗರದ ಎಂಟು ವಲಯಗಳಲ್ಲಿ ಅನಧಿಕೃತ ಜಾಹೀರಾತು ಅಳವಡಿಕೆ ಸಂಬಂಧ ಒಟ್ಟು 37 ದೂರುಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ 40 ಎಫ್‌ಐಆರ್‌ಗಳನ್ನು ದಾಖಲಿಸ ಲಾಗಿದೆ. ತೆರವುಗೊಳಿಸಲಾಗಿರುವ ಫಲಕಗಳನ್ನು ವಾರ್ಡ್‌ ಕಚೇರಿಗಳಲ್ಲಿ ಸಂಗ್ರಹಿಸಿಡಲಾಗಿದೆ. ಜಾಹೀರಾತು ಫಲಕಗಳಿಗೆ ಬಳಕೆ ಮಾಡಲಾದ ಮರದ ಕಟ್ಟಿಗೆ ಹಾಗೂ ಇತರೆ ವಸ್ತುಗಳನ್ನು ಸುಡುವ ಮೂಲಕ ವಿಲೇವಾರಿ ಮಾಡಬಹುದು. ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಜೊತೆ ಸಮಾಲೋಚಿಸಿ ಜಾಹೀರಾತುಗಳಿಗೆ ಬಳಸಿದ ಪ್ಲಾಸ್ಟಿಕ್‌ ವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು. ಅನಧಿಕೃತ ಜಾಹೀ ರಾತು ಅಳವಡಿಕೆ ಸಂಬಂಧ ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ವಾರ್ಡ್‌ವಾರು ಸಂಬಂಧಪಟ್ಟಅಧಿಕಾರಿ ಹೆಸರು ಹಾಗೂ ಫೋನ್‌ ನಂಬರ್‌ ಅನ್ನು ಪಾಲಿಕೆಯ ವೆಬ್‌ಸೈಟ್‌ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ತಿಳಿಸಲಾಗಿದೆ.

DK Shivakumar: 6 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಡಿಸಿಎಂ ಡಿಕೆಶಿ

ವಲಯವಾರು ಅನಧಿಕೃತ ಜಾಹೀರಾತು ತೆರವು

ವಲಯ (ಮಾಚ್‌ರ್‍ನಿಂದ ಮೇ 5ರವರೆಗೆ) ಜಾಹೀರಾತುಗಳ ಗುರುತು ತೆರವುಗೊಳಿಸಿದ ಜಾಹೀರಾತುಗಳು ದಂಡ ದೂರು ದಾಖಲು ಎಫ್‌ಐಆರ್‌ ದಾಖಲು

  • ಪೂರ್ವ 11309 10734 0 11 6
  • ಪಶ್ವಿಮ 9961 9961 0 4 4
  • ದಕ್ಷಿಣ 4809 4809 0 2 3
  • ಬೊಮ್ಮನಹಳ್ಳಿ 225 225 0 0 0
  • ಮಹದೇವಪುರ 879 879 0 0 0
  • ಯಲಹಂಕ 609 609 0 0 26
  • ದಾಸರಹಳ್ಳಿ 1497 1476 0 0 0
  • ರಾಜರಾಜೇಶ್ವರಿ ನಗರ 5848 5848 0 20 1
  • ಒಟ್ಟು 35137 34541 0 37 40
Follow Us:
Download App:
  • android
  • ios