ಉಡುಪಿ(ಏ.22): ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಇಂದು  ಶಿಷ್ಯ ಸ್ವೀಕಾರ ಮಾಡಿದ್ದು, ಈ ಮೂಲಕ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡಿದ್ದಾರೆ.  

29 ವರ್ಷದ ಪ್ರಶಾಂತ್ ಆಚಾರ್ಯ ಅವರಿಗೆ ಸನ್ಯಾಸ ದೀಕ್ಷೆ ನೀಡಿ, ಅವರಿಗೆ ಶ್ರೀ ಸುಶ್ರೀಂದ್ರ ತೀರ್ಥರೆಂದು ಮರುನಾಮಕರಣ ಮಾಡಲಾಗಿದೆ. 

ಪ್ರಶಾಂತ್ ಆಚಾರ್ಯ ಅವರನ್ನು ಮಠದ  ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡಲಾಗಿದ್ದು, ಶಾಸ್ತ್ರಾಭ್ಯಾಸಕ್ಕೆ ಚಾಲನೆ ನೀಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

12 ವರ್ಷಗಳ ಕಾಲ ಶಾಸ್ತ್ರಾಭ್ಯಾಸ, ಕಠಿಣ ಸನ್ಯಾಸ ಧರ್ಮ ಪಾಲನೆ, ಮಠದ ವ್ಯವಹಾರದಲ್ಲಿ ಗುರುಗಳೊಂದಿಗೆ ಸಮನ್ವಯತೆ ಸಾಧಿಸಲು ಪರಿಶ್ರಮ ಪಡಬೇಕು ಎಂದು ಸುಗುಣೇಂದ್ರ ತೀರ್ಥರು ತಮ್ಮ ಶಿಷ್ಯನಿಗೆ ಸೂಚನೆ ನೀಡಿದ್ದಾರೆ.

ಪ್ರಶಾಂತ್ ಆಚಾರ್ಯ ಇಂಜಿನಿಯರಿಂಗ್ ಪದವೀಧರರಾಗಿದ್ದು, ಎರಿಕ್ಸನ್ ಕಂಪನಿಯಲ್ಲಿ ಲಕ್ಷಾಂತರ ರೂ. ಸಂಬಳದ ಉದ್ಯೋಗ ಬಿಟ್ಟು ಸನ್ಯಾಸ ಸ್ವೀಕರಿಸಿದ್ದಾರೆ.