ನಿರಂತರ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡದ ಮಣ್ಣು ಕುಸಿದು ಮಹಿಳೆಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದಿದೆ. ಅಂಬಾ(55), ಮೃತ ದುರ್ದೈವಿ.

ಉಡುಪಿ (ಜು.4): ನಿರಂತರ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡದ ಮಣ್ಣು ಕುಸಿದು ಮಹಿಳೆಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದಿದೆ.

ಅಂಬಾ(55), ಮೃತ ದುರ್ದೈವಿ. ಹಳ್ಳಿಬೇರು ನಿವಾಸಿಯಾಗಿರುವ ಮೃತ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೂಲಿ ಕೆಲಸ ಮುಗಿಸಿ ಮನೆಯಲ್ಲಿದ್ದ ವೇಳೆ ಏಕಾಏಕಿ ಗುಡ್ಡದ ಮಣ್ಣು ಕುಸಿದಿದ್ದರಿಂದ ಮಣ್ಣಿನ ರಾಶಿಯಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟ ಮಹಿಳೆ. 

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ 

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ: 4 ಜನ ಬಲಿ, ಇಂದೂ ಕೂಡ ರೆಡ್‌ ಅಲರ್ಟ್‌..!

ಉತ್ತರ ಕನ್ನಡ, ಕಾರವಾರಕ್ಕೆ ಎನ್‌ಡಿಆರ್‌ಆಫ್ ತಂಡ ರವಾನೆ

ಉತ್ತರ ಕನ್ನಡ, ಕುಮಟಾ, ಅಂಕೋಲಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ಎನ್‌ಡಿಆರ್‌ಎಫ್(NDRF) ತಂಡ ರವಾನಿಸಲಾಗಿದೆ.

ತಲಾ 35 ಜನರಿರುವ ಎರಡು ತಂಡ ರಚನೆ ಮಾಡಿದ್ದು, ಉತ್ತರಕನ್ನಡ ಜಿಲ್ಲೆಯ ಕರಾವಳಿ ವ್ಯಾಪ್ತಿಗೆ ರವಾನಿಸಲಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಳಿಯಲಿರುವ ಎನ್‌ಡಿಆರ್‌ಎಫ್ ತಂಡ