ಉಡುಪಿ ಡಿಸಿ ಜಗದೀಶ್‌ ಸಿಎಂ ಜಂಟಿ ಕಾರ್ಯದರ್ಶಿಯಾಗಿ ನೇಮಕ

  • ಕಳೆದರೆಡು ವರ್ಷಗಳಿಂದ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗ
  • ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮ ರಾವ್‌ ನೇಮಕ
Udupi DC jagadish appointed as CM joint secretary snr

  ಉಡುಪಿ (ಆ.30): ಕಳೆದರೆಡು ವರ್ಷಗಳಿಂದ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಇದೀಗ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮ ರಾವ್‌ ನೇಮಕಗೊಂಡಿದ್ದಾರೆ. ಇದಕ್ಕೆ ಮೊದಲು ಅವರು ಕಲಬುರ್ಗಿಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಜಿ.ಜಗದೀಶ್‌ ಉಡುಪಿಗೆ ಜಿಲ್ಲಾಧಿಕಾರಿಯಾಗಿ ಆಗಮಿಸುತಿದ್ದಂತೆ ಅದೇ ಹೊತ್ತಿಗೆ ವಿಶ್ವಾದ್ಯಂತ ಕೋವಿಡ್‌ ಸಮಸ್ಯೆ ಆರಂಭವಾಗಿತ್ತು. ಜಿಲ್ಲೆಯ ಕೋವಿಡ್‌ ಸಮಸ್ಯೆಯಲ್ಲಿ ಸಮರ್ಥವಾಗಿ ನಿರ್ವಹಿಸಿ ಜಗದೀಶ್‌ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದರು.

ಲಾಕ್ ಡೌನ್ ಇಲ್ಲವಾದರೆ ಏನಾತು? ಫೀಲ್ಡಿಗಿಳಿದ ಡಿಸಿ ಕಂಡು ಕಾಲ್ಕಿತ್ತವರ ನೋಡಿ!

ಅವರು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ. ಆಡಳಿತಕ್ಕೊಳಪಟ್ಟಡಾ.ಟಿ.ಎಂ.ಪೈ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, ಖಾಸಗಿ ಆಸ್ಪತ್ರೆಯನ್ನು ಸರ್ಕಾರದ ಕೋವಿಡ್‌ ಚಿಕಿತ್ಸೆಗೆ ಬಳಸಿದ್ದು ದೇಶದಲ್ಲಿಯೇ ಪ್ರಥಮ ಪ್ರಯೋಗವಾಗಿತ್ತು. ಜೊತೆಗೆ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್‌ ಹಾಸಿಗೆಗಳ, ಆಕ್ಸಿಜನ್‌ ಪ್ಲಾಂಟ್‌, ವೆಂಟಿಲೇಟರ್‌, ಕೋವಿಡ್‌ ಕೇರ್‌ ಸೆಂಟರ್‌ ವ್ಯವಸ್ಥೆಗಳನ್ನು ಮಾಡಿ, ಕೋವಿಡ್‌ ಸಮಸ್ಯೆ ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

Latest Videos
Follow Us:
Download App:
  • android
  • ios