Udupi: SDPI ಅಧ್ಯಕ್ಷನ ಅಕ್ರಮ ಕಟ್ಟಡ ತೆರವು, ನಗರಸಭೆಯಿಂದ ಸ್ಷಷ್ಟನೆ

ಎಸ್‌ಡಿಪಿಐ (SDPI)ರಾಜಕೀಯ ಪಕ್ಷದ ಜಿಲ್ಲಾ ಅಧ್ಯಕ್ಷರ ಅನಧಿಕೃತ ಕಟ್ಟಡವನ್ನು ಉಡುಪಿ (Udupi)ನಗರಸಭೆ ತೆರವುಗೊಳಿಸಿದೆ. ನಗರದ ಜಾಮಿಯ ಮಸೀದಿ (Jamia Masjid) ಆವರಣದಲ್ಲಿದ್ದ ಈ ಕಟ್ಟಡ ಅಕ್ರಮ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿತ್ತು. 

Udupi City Council Demolishes Building owned by SDPI District President hls

ಉಡುಪಿ (ಮಾ. 27): ಎಸ್‌ಡಿಪಿಐ (SDPI)ರಾಜಕೀಯ ಪಕ್ಷದ ಜಿಲ್ಲಾ ಅಧ್ಯಕ್ಷರ ಅನಧಿಕೃತ ಕಟ್ಟಡವನ್ನು ಉಡುಪಿ (Udupi)ನಗರಸಭೆ ತೆರವುಗೊಳಿಸಿದೆ.  ನಗರದ ಜಾಮಿಯ ಮಸೀದಿ (Jamia Masjid) ಆವರಣದಲ್ಲಿದ್ದ ಈ ಕಟ್ಟಡ ಅಕ್ರಮ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿತ್ತು. ಆದರೆ ತಾನು ಹಿಜಾಬ್ ಹೋರಾಟದಲ್ಲಿ ನೀಡಿರುವ ಹೇಳಿಕೆಗಳಿಂದ ಮುಜುಗರ ಅನುಭವಿಸಿರುವ ಬಿಜೆಪಿ ರಾಜಕೀಯ ಪ್ರೇರಿತವಾಗಿ ತನ್ನ ಕಟ್ಟಡವನ್ನು ತೆರವು ಮಾಡಿದೆ ಎಂದು ಎಸ್ಡಿಪಿಐ ಅಧ್ಯಕ್ಷ ನಜೀರ್ ಹೇಳಿದ್ದಾರೆ.

ಏನಿದು ಕಟ್ಟಡ? ಯಾಕೆ ಅಕ್ರಮ?

ನಗರದ ಜಾಮಿಯಾ ಮಸೀದಿ ಆವರಣದಲ್ಲಿ ವಕ್ಫ್ ಮಂಡಳಿಗೆ ಸೇರಿದ ಸ್ಥಳದಲ್ಲಿ ಝರಾ ಹೆಸರಿನ ಹೊಟೇಲು ಕಾರ್ಯಾಚರಿಸುತ್ತಿತ್ತು. ಎಸ್ಡಿಪಿಐ ಪಕ್ಷದ ಜಿಲ್ಲಾ ಅಧ್ಯಕ್ಷ ನಝೀರ್ ಮತ್ತು ಅವರ ಸಹೋದರ ಈ ಹೊಟೇಲು ನಡೆಸುತ್ತಿದ್ದರು. ಕಟ್ಟಡದ ಒಂದು ಭಾಗಕ್ಕೆ ಡೋರ್ ನಂಬರ್ ಇದ್ದು, ಅನಧಿಕೃತವಾಗಿ ಕಟ್ಟಡವನ್ನು ವಿಸ್ತರಣೆ ಗೊಳಿಸಲಾಗಿತ್ತು. ಅನಧಿಕೃತವಾಗಿ ಕಟ್ಟಿದ ಭಾಗಕ್ಕೆ ಅನುಮತಿ ಕೋರಿ  ನಗರಸಭೆಗೆ ಪತ್ರವನ್ನು ಕೂಡ ಬರೆದಿದ್ದರು. ಆದರೆ ಅನುಮತಿ ಸಿಕ್ಕಿರಲಿಲ್ಲ.

ತಾಯಿ ಮೂಕಾಂಬಿಕೆಗೆ 'ಸಲಾಂ' ಬೇಡ ಆರತಿ ಸಾಕು, ಹೆಸರು ಬದಲಿಸಲು ವಿಹಿಂಪ ಮನವಿ

ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ಕೂಡ ನಡೆದಿತ್ತು. ಫೆಬ್ರವರಿ ತಿಂಗಳಲ್ಲಿ ನಡೆದ ಸಭೆಯಲ್ಲಿ ಈ ಕಟ್ಟಡವನ್ನು ತೆರುವುಗೊಳಿಸುವಂತೆ ಆದೇಶಿಸಲಾಗಿತ್ತು. 2018ರಲ್ಲಿ ಈ ಕಟ್ಟಡವನ್ನು ತೆರಲು ಮಾಡಲು ನ್ಯಾಯಾಲಯ ಆದೇಶಿಸಿತ್ತು. ಈ ಆದೇಶಕ್ಕೆ ಹೋಟೆಲ್ ಮಾಲೀಕರು ತಡೆಯಾಜ್ಞೆ ತಂದಿದ್ದರು. ಸದ್ಯ ತಡೆಯಾಜ್ಞೆ ತೆರವುಗೊಂಡಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ನಗರಸಭೆ ಕಾರ್ಯಾಚರಣೆಗೆ ಇಳಿದಿದೆ.

ಎಸ್ ಡಿ‌ಪಿ‌ಐ ಅಧ್ಯಕ್ಷ ಹೇಳಿದ್ದೇನು?

ಹಿಜಬ್ ಹೋರಾಟದಲ್ಲಿ ವಿದ್ಯಾರ್ಥಿನಿಯರನ್ನು ಬೆಂಬಲಿಸಿದ್ದೇ ಈ ಬೆಳವಣಿಗೆಗೆ ಕಾರಣವಾಗಿದೆ. ಸಂವಿಧಾನ ಬದ್ಧ ಹೋರಾಟಕ್ಕೆ ಮುಂದೆಯೂ ಬೆಂಬಲಿಸುವುದಾಗಿ ಉಡುಪಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಹೇಳಿದ್ದಾರೆ.  ಮಾಡಿದ್ದಾರೆ.  ಅಂಗಡಿ ತೆರವುಗೊಳಿಸಿರಬಹುದು, ನಮ್ಮ ಹೋರಾಟ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮನ್ನು ಹದ್ದುಬಸ್ತಿನಲ್ಲಿಡುವ ವ್ಯವಸ್ಥೆಯಾಗುತ್ತಿದೆ. ಬಿಜೆಪಿಯ ವಿರುದ್ಧ ಹೋದದ್ದಕ್ಕೆ ಅಂಗಡಿ ತೆರವು ಮಾಡಿದ್ದಾರೆ. ಕರ್ನಾಟಕ ಬಂದ್ ಇವರ ನಿದ್ದೆಗೆಡಿಸಿರಬೇಕು. ನಿರಂತರ ಬಂದ್ ಮಾಡಿಸುವ ಪ್ಲ್ಯಾನ್ ಇರಬಹುದು ಎಂದರು.

ತಿಂಗಳಿಗೆ 2 ಲಕ್ಷ ರುಪಾಯಿ ಬಾಡಿಗೆಯನ್ನು ಮಸೀದಿಗೆ ಕೊಡುತ್ತಿದ್ದೆವು. ಸರಕಾರಕ್ಕೆ 37 ಸಾವಿರ ರುಪಾಯಿ ಜಿಎಸ್ ಟಿ ಕಟ್ಟುತ್ತಿದ್ದೆವು. ಪರವಾನಿಗೆ ಪಡೆಯಲು ಕಡತಗಳಿಗೆ ಹಣ ಖರ್ಚು ಮಾಡಿದ್ದೇವೆ. ಹಿಜಬ್ ಹೋರಾಟದಲ್ಲಿ ಮಕ್ಕಳಿಗೆ ಸಂವಿಧಾನಬದ್ಧ ಹಕ್ಕು ಸಿಗಲೇಬೇಕು. ನಾವಾಗಿಯೇ ವಿವಾದ ಸೃಷ್ಟಿ ಮಾಡಿಲ್ಲ. ಸಂವಿಧಾನಬದ್ಧ ಹಕ್ಕು ಒದಗಿಸಲು ನಾವು ಸಹಾಯ ಮಾಡಿಯೇ ಮಾಡುತ್ತೇವೆ. ನಗರಸಭೆ ಅಧಿಕಾರಿಗಳಿಗೆ ಬಿಜೆಪಿಯವರ ಒತ್ತಡ ಇದೆ. ನಗರಸಭೆಯ ಮೀಟಿಂಗ್ನಲ್ಲಿ ಬಗ್ಗೆ ಚರ್ಚೆಯಾಗಿದೆ.

ಉಡುಪಿಯಲ್ಲಿ ಹಲವಾರು ಅಕ್ರಮ ಕಟ್ಟಡಗಳು ಇವೆ. ಎಲ್ಲಾ ಕಟ್ಟಡಗಳನ್ನು ತರವು ಮಾಡುತ್ತಾರಾ? ನ್ಯಾಯ ಅಂತ ಹೇಳಿದ ಮೇಲೆ ಎಲ್ಲರಿಗೂ ಒಂದೇ ಕಾನೂನು ಜಾರಿಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಅಂಗಡಿಗೆ ಡೋರ್ ನಂಬರ್ ಇದೆ ಇನ್ನೊಂದಕ್ಕೆ ಇಲ್ಲ.  ಅಂಗಡಿ ಪರವಾನಿಗೆಗೆ ನಾವು ಓಡಾಡುತ್ತಿದ್ದೆವು ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ ಹೇಳಿದ್ದೇನು?

ಇದೊಂದು ಅನಧಿಕೃತ ಕಟ್ಟಡ. ಯಾವುದೇ ಪರವಾನಿಗೆಯನ್ನು ತೆಗೆದುಕೊಂಡಿಲ್ಲ. ನಗರಸಭೆಯಿಂದ ತೆರವುಗೊಳಿಸಲು ಬಂದಾಗ ಕಟ್ಟಡದ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಪರವಾನಿಗೆ ಇರುವ ಯಾವ ಅಂಗಡಿಗಳು ಇಲ್ಲ. ಉಡುಪಿಯಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ಲೈಸನ್ಸ್ ಇಲ್ಲದೆ ಕಟ್ಟಿರುವ ಏಕೈಕ ಕಟ್ಟಡ ಇದು. ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದ ಕಟ್ಟಡ ಇದೊಂದೇ ಕೋರ್ಟ್ ನಲ್ಲಿ ಸ್ಟೇ ಆರ್ಡರ್ ತೆರವು ಆಗಿರುವುದರಿಂದ ನಾವು ಕ್ರಮವನ್ನು ಕೈಗೊಂಡಿದ್ದೇವೆ ಎಂದರು.

Latest Videos
Follow Us:
Download App:
  • android
  • ios