U Digital Network: ಯು ಡಿಜಿಟಲ್‌ನ 'ಯು ಸ್ಟ್ರೀಮ್‌ ಒಟಿಟಿ' ಲೋಕಾರ್ಪಣೆ

ರಾಜ್ಯದ ಮೊದಲ ಮಲ್ಟಿ ಸರ್ವೀಸ್ ಆಪರೇಟರ್‌ ಆಗಿರುವ ಮೈಸೂರು ಮೂಲದ ‘ಯು ಡಿಜಿಟಲ್’ ಸಂಸ್ಥೆಯು ನೂತನವಾಗಿ ‘ಯು ಸ್ಟ್ರೀಮ್‌’ ಓವರ್‌ ದಿ ಟಾಪ್‌(ಒಟಿಟಿ) ಅನ್ನು ಪರಿಚಯಿಸುತ್ತಿದೆ.

U Digital Second Year Celebration at Mysuru gvd

ಮೈಸೂರು (ಮಾ.06): ರಾಜ್ಯದ (Karnataka) ಮೊದಲ ಮಲ್ಟಿ ಸರ್ವೀಸ್ ಆಪರೇಟರ್‌ ಆಗಿರುವ ಮೈಸೂರು ಮೂಲದ ‘ಯು ಡಿಜಿಟಲ್’ (U Digital) ಸಂಸ್ಥೆಯು ನೂತನವಾಗಿ ‘ಯು ಸ್ಟ್ರೀಮ್‌’ (U Stream) ಓವರ್‌ ದಿ ಟಾಪ್‌(ಒಟಿಟಿ) ಅನ್ನು ಪರಿಚಯಿಸುತ್ತಿದೆ. ಕೇಬಲ್‌ನಲ್ಲಿ ಸಿಗುವ ಎಲ್ಲ ಚಾನಲ್‌ಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಒಟಿಟಿಯ ವಿಶೇಷತೆಯಾಗಿದೆ. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಶನಿವಾರ ಸಂಜೆ ನಡೆದ ಯು ಡಿಜಿಟಲ್‌ ಸಂಸ್ಥೆಯ ಎರಡನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಈ ಒಟಿಟಿಯನ್ನು (OTT) ಲೋಕಾರ್ಪಣೆ ಮಾಡಲಾಯಿತು.

ಈಗಾಗಲೇ 12 ಜಿಲ್ಲೆಗಳಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ‘ಯು ಡಿಜಿಟಲ್‌’ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಸೇವೆ ವಿಸ್ತರಿಸುವ ಉದ್ದೇಶ ಹೊಂದಿದ್ದು ಇದೀಗ ಎರಡನೇ ವರ್ಷದ ಸಂಭ್ರಮದಲ್ಲಿ ಯು ಸ್ಟ್ರೀಮ್ ಓಟಿಟಿ ಬಿಡುಗಡೆಗೊಳಿಸಲಾಗಿದೆ. ಕನ್ನಡದ ನ್ಯೂಸ್‌, ಮನರಂಜನೆ, ಸಿನಿಮಾ ಸೇರಿದಂತೆ ಕೇಬಲ್‌ನಲ್ಲಿ ಅಳವಡಿಸಲಾಗುವ ಎಲ್ಲ ಚಾನಲ್‌ಗಳನ್ನೂ ಈ ಒಟಿಟಿಯಲ್ಲಿ ಅಳವಡಿಸಲಾಗಿದೆ. ಹೀಗಾಗಿ ಎಲ್ಲ ಚ್ಯಾನೆಲ್‌ಗಳೂ ಈ ಒಂದೇ ಆ್ಯಪ್‌ನಲ್ಲಿ ಲಭ್ಯವಾಗಲಿದೆ.

BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣೆ

ಸಂಸ್ಥೆಯ 2ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ರವಿ ಹೆಗಡೆ (Ravi Hegde), ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಎಚ್‌.ಆರ್‌.ರಂಗನಾಥ್‌ (HR Ranganath), ನ್ಯೂಸ್‌ ಫಸ್ಟ್‌ ಮುಖ್ಯಸ್ಥರಾದ ಎಸ್‌. ರವಿಕುಮಾರ್‌ (S Ravikumar) ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಶಾಸಕ ತನ್ವೀರ್‌ಸೇಠ್‌ (Tanveer Sait) ಮಾತನಾಡಿ, ಕೋವಿಡ್‌ನಂತ ಕಷ್ಟಕರ ಪರಿಸ್ಥಿತಿಯಲ್ಲಿ ಆರಂಭವಾದ ಯು ಡಿಜಿಟಲ್ ಎರಡನೇ ವರ್ಷ ಪೂರೈಸಿ. ಮೂರನೇ ವರ್ಷಕ್ಕೆ ಕಾಲಿಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮಾಧ್ಯಮ ಲೋಕದ ನೈಜ ಸುದ್ದಿಯನ್ನ ಮನೆ ಮನೆಗೆ ತಲುಪಿಸುವ ಕೆಲಸವನ್ನ ಯು ಡಿಜಿಟಲ್ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್‌ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮಾತನಾಡಿ, ಮಾಧ್ಯಮಗಳಿಗೆ ಆಧಾರಸ್ತಂಭವೇ ಕೇಬಲ್‌ ಆಪರೇಟರ್‌ಗಳು. ಕೇಬಲ್ ಆಪರೇಟರ್‌ಗಳಿಲ್ಲದಿದ್ದರೆ ಸುದ್ದಿಗಳು ಸ್ಟುಡಿಯೋಗೆ ಸೀಮಿತವಾಗುತ್ತಿದ್ದವು. ಕೋವಿಡ್‌ನಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆರಂಭಿಸಿ ಸಾಧನೆ ಮಾಡಿರುವ ನಿಮಗೆ ಹ್ಯಾಟ್ಸ್‌ಆಫ್‌. ಮೂರು ಲಕ್ಷ ಸೆಟ್‌ಟಾಪ್‌ ಬಾಕ್ಸ್‌ಗಳನ್ನ ಹೊಂದುವುದು ಸುಲಭದ ಮಾತಲ್ಲ. ಮುಂದೊಮ್ಮೆ ಡಿಜಿಟಲ್ ಇಡೀ ಕರ್ನಾಟಕವನ್ನ ಆವರಿಸಿಕೊಳ್ಳುತ್ತೆ. ಯು ಡಿಜಿಟಲ್‌ ಕೇವಲ ನೆಟ್‌ವರ್ಕ್ ಅಷ್ಟೇ ಅಲ್ಲ, ಓಟಿಟಿ ಪ್ಲಾಟ್‌ಫಾಮ್‌ರ್‍ಗೆ ಹೋಗಿರುವುದು ಸಾಧನೀಯ. ಓಟಿಟಿಯಲ್ಲಿ ಕನ್ನಡ ಸುದ್ದಿ ಮಾಧ್ಯಮಗಳನ್ನ ಹೆಚ್ಚು ಪ್ರಸಾರ ಮಾಡಿ ಎಂದು ಹೇಳಿದರು. ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಎಚ್‌.ಆರ್‌. ರಂಗನಾಥ್‌ ಮಾತನಾಡಿ, ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಸಣ್ಣ ಪುಟ್ಟಸಮಸ್ಯೆಗಳನ್ನು ಬಗೆಹರಿಸಿಕೊಂಡು ಜವಾಬ್ದಾರಿಯಿಂದ ಮುಂದೆ ಸಾಗಿದರೆ ಯಶಸ್ಸು ಸಾಧ್ಯ ಎಂದರು.

Karnataka Film Chamber Of Commerce: ಬೇಡಿಕೆಗಳಿಗೆ ಸಮ್ಮತಿಸಿದ ಸಿಎಂಗೆ ಚಿತ್ರರಂಗದಿಂದ ಧನ್ಯವಾದ

ಸಾಧಕರಿಗೆ ಸನ್ಮಾನ: ಮೈಸೂರು ಜಿಪಂ ಸಿಇಒ ಬಿ.ಆರ್‌.ಪೂರ್ಣಿಮಾ, ಟಿವಿಯ ನಿರೂಪಕರಾದ ಹರಿಪ್ರಸಾದ್‌ (ಟಿವಿ 9), ಭಾವನ ನಾಗಯ್ಯ (ಏಷ್ಯಾನೆಟ್‌ ಸುವರ್ಣನ್ಯೂಸ್‌), ಅರುಣ್‌ ಬಡಿಗೇರ್‌ (ಪಬ್ಲಿಕ್‌ ಟಿವಿ), ನಿಖಿಲ್‌ ಜೋಶಿ (ನ್ಯೂಸ್‌ ಫಸ್ಟ್‌), ರಕ್ಷತ್‌ ಶೆಟ್ಟಿ (ದಿಗ್ವಿಜಯ ನ್ಯೂಸ್‌), ಮನೋಜ್‌ಕುಮಾರ್‌ (ಕಸ್ತೂರಿ ನ್ಯೂಸ್‌) ಅವರನ್ನು ಸನ್ಮಾನಿಸಲಾಯಿತು. ನಂತರ ಜೀ ಕನ್ನಡ, ಕಲರ್ಸ್‌ ಕನ್ನಡ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಯು ಡಿಜಿಟಲ್‌ ಮುಖ್ಯಸ್ಥರಾದ ಮಂಜುನಾಥ್‌ ಇದ್ದರು.

Latest Videos
Follow Us:
Download App:
  • android
  • ios