Asianet Suvarna News Asianet Suvarna News

ತುಂಗಭದ್ರಾ ಜಲಾಶಯ ಚೈನ್‌ಲಿಂಕ್ ದುರಸ್ತಿಗೆ ಇನ್ನೂ 4-5 ದಿನಗಳು ಬೇಕು; ಡಿಸಿಎಂ ಡಿ.ಕೆ. ಶಿವಕುಮಾರ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟಿನ ಚೈನ್ ಲಿಂಕ್ ದುರಸ್ತಿಗೆ ಇನ್ನೂ ನಾಲ್ಕೈದು ದಿನಗಳಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Tungabhadra Reservoir Chainlink Repair takes five more days says Deputy CM  DK Sivakumar sat
Author
First Published Aug 12, 2024, 11:34 AM IST | Last Updated Aug 12, 2024, 11:34 AM IST

ಬೆಂಗಳೂರು (ಆ.12): ಮಧ್ಯ ಕರ್ನಾಟಕದ ಪ್ರಮುಖ ಜೀವನದಿ ಆಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟಿನ ಸರಪಳಿ ತುಂಡಾಗಿದ್ದು, ಯಾರೂ ಗಾಬರಿಪಡಬೇಕಿಲ್ಲ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೂಡ ತುಂಗಭದ್ರಾ (ಟಿಬಿ ಡ್ಯಾಮ್) ಜಲಾಶಯಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ಅಲ್ಲಿ ಆಗಿರುವ ಸಮಸ್ಯೆಯನ್ನು ದುರಸ್ತಿಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಜಲಾಶಯ ನಿರ್ಮಾಣ ಮಾಡುವಂತಹ ಎಲ್ಲಾ ಗುತ್ತಿಗೆದಾರರ ಜೊತೆ ಮಾತಾಡಿದ್ದೇನೆ. ಟಿಬಿ ಡ್ಯಾಮ್‌ಗೆ ಸಂಬಂಧಪಟ್ಟಂತಹ ಡಿಸೈನ್‌ಗಳನ್ನು ಅವರಿಗೆ ಕಳುಹಿಸಿಕೊಟ್ಟಿದ್ದು, ಕೂಡಲೇ ದುರಸ್ತಿಗೆ ಯೋಜನೆ ರೂಪಿಸಿಕೊಂಡು ಇನ್ನೊಂದು ನಾಲ್ಕೈದು ದಿನಗಳಲ್ಲಿ ರಿಪೇರಿ ಮಾಡುವಂತದ್ದು ಆಗಲಿದೆ ಎಂದು ತಿಳಿಸಿದರು.

ಸರ್ಕಾರದ ನಿರ್ಲಕ್ಯದಿಂದ ಟಿಬಿ ಡ್ಯಾಮ್ ಸಮಸ್ಯೆ, ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ: ಬಸವರಾಜ ಬೊಮ್ಮಾಯಿ

ನಾವು ತುಂಗಭದ್ರಾ ಜಲಾಶಯದ ನೀರಾವರಿ ಪ್ರದೇಶಗಳ ರೈತರ ಬೆಳೆಗಳನ್ನು ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅಲ್ಲಿಗೆ ಹೋಗುತ್ತಿದ್ದಾರೆ. ನಾನು ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇನೆ. ಯಾರು ಗಾಬರಿ ಪಡಬೇಕಿಲ್ಲ, ಬಹಳ ಡೇಂಜರ್ ಅಂತೂ ಇತ್ತು. ಜಲಾಶಯ ನಿರ್ಮಾಣ ಮಾಡಿದ ನಂತರ ಕಳೆದ 70 ವರ್ಷದಲ್ಲಿ ಇದೇ ಮೊದಲ ಬಾರಿಗೆ ಹೀಗೆ ಆಗಿದೆ. ಸೇಫ್ಟಿಗಾಗಿ ಒಂದು ಟೀಮ್ ಮಾಡಿ ಎಲ್ಲಾ ಡ್ಯಾಮ್‌ಗಳಿಗೂ ಕಳಿಸಿಕೊಡುತ್ತಿದ್ದೇವೆ. ನಾಳೆ ನಾಡಿದ್ದು ತಜ್ಞರ ಸಮಿತಿ ರಚನೆ ಮಾಡ್ತೇವೆ. ಆ ಸಮಿತಿ ಎಲ್ಲಾ ಡ್ಯಾಮ್‌ಗಳಿಗೂ ವಿಸಿಟ್ ಮಾಡುತ್ತದೆ ಎಂದು ಹೇಳಿದರು.

ರಾಜ್ಯದ ಎಲ್ಲ ಜಲಾಶಯನಗಳಲ್ಲಿ ನೀರಿನ ಗೇಟ್‌ಗಳಲ್ಲಿ ಯಾವುದೇ ದುರಸ್ತಿ ಆದರೂ ಅದನ್ನು ಸರಿಪಡಿಸಲು ಡಬಲ್ ಆಪ್ಷನ್ಸ್ ಇದೆ. ಅಂದರೆ, ಬೇರೆ ಬೇರೆ ಜಲಾಶಯಗಳಲ್ಲಿ ನೀರು ಹರಿಬಿಡುವ ಒಂದು ಗೇಟ್‌ಗೆ ಎರಡು ಚೈನ್‌ ಲಿಂಕ್ ಇದ್ದಾವೆ.  ಆದರೆ, ಟಿಬಿ ಡ್ಯಾಮ್‌ನಲ್ಲಿ ಒಂದೇ ಒಂದು ಚೈನ್ ಇದ್ದು, ಇದು ಈಗ ಕಟ್ ಆಗಿದೆ. ಜಲಾಶಯದಿಂದ ನಿರು ಹರಿದು ಹೋಗುವುದನ್ನು ನೋಡಿದರೆ ಸ್ವಲ್ಪ ಸಮಸ್ಯೆಯಿತ್ತು. ಆದರೆ, ಈಗ ನೀರು ಉಳಿಸಬಹುದು. ಜಲಾಶಯದಲ್ಲಿ 55 ರಿಂದ 60 ಟಿಎಂಸಿ (TMC) ನೀರು ಉಳಿಸುವ ವ್ಯವಸ್ಥೆ ಆಗುತ್ತಿದೆ. ಇನ್ನು ನೀರಿನ್ನು ಉಳಿಸಲು ತಕ್ಷಣ ಆದೇಶ ನೀಡಲಾಗಿದೆ. ಜೊತೆಗೆ, JSWಗೂ ಮಾತಾಡಿದ್ದೇನೆ. ಈ ಹಿಂದೆ ಜಲಾಶಯದ ದುರಸ್ತಿ ಮಾಡಿದವರಿಗೆ ಜಲಾಶಯದ ಡಿಸೈನ್ ಕೊಟ್ಟಿದ್ದೇವೆ. ನಾಲ್ಕೈದು ದಿನದಲ್ಲಿ ದುರಸ್ತಿ ಆಗಲಿದೆ ಎಂದು ನಮಗೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಡ್ಯಾಂ ನ್ಯಾಗ್‌ ನೀರ್‌ ಇಲ್ಲಂದ್ರ ಮುಂದೆ ನಮ್ಮ ಗತಿ ಹೆಂಗ? ತುಂಗಭದ್ರಾ ಕ್ರಸ್ಟ್‌ ಗೇಟ್ ಕಳಚಿದ್ದಕ್ಕೆ ರೈತರು ಕಣ್ಣೀರು!

ಮಂತ್ರಾಲಯದ ರಾಯರ ಮಠದ ಬಳಿ ತುಂಗಭದ್ರಾ ನದಿ ನೀರಿನ ಪ್ರವಾಹ:
ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟಿನ ಚೈನ್ದ ಲಿಂಕ್ ಮುರಿದ ಹಿನ್ನೆಲೆಯಲ್ಲಿ ‌ನದಿಗೆ ಹೆಚ್ಚುವರಿ ನೀರು ಬಿಡುಗಡೆ ಆಗುತ್ತಿದೆ. ಆದ್ದರಿಂದ ಮಂತ್ರಾಲಯದ ರಾಯರ ಮಠದ ಬಳಿ ಹೈ ಅಲರ್ಟ್ ನೀಡಲಾಗಿದೆ. ತುಂಗಭದ್ರಾ ನದಿ ತೀರದಲ್ಲಿರುವ ರಾಯರ ಮಠದಲ್ಲಿ ಭಕ್ತರು ಪುಣ್ಯ ಸ್ನಾನಕ್ಕೆ ಮುಂದಾಗಿದ್ದು, ಅವರನ್ನು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗುತ್ತಿದೆ. ಇನ್ನು ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರೂ, ಕೆಲವರು ನದಿಯಲ್ಲಿ ಹುಚ್ಚಾಟ, ಮೋಜು-ಮಸ್ತಿ ಮುಂದುವರೆಸಿದ್ದಾರೆ. ಕ್ಷಣ ಕ್ಷಣಕ್ಕೂ ನದಿಯಲ್ಲಿನ ನೀರಿನ ಹರಿವು ಹೆಚ್ಚಾಗಿತ್ತಿದ್ದು, ಸ್ನಾನಕ್ಕೆ ಹೋಗುವ ಭಕ್ತರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಬಳಿ ಪೊಲೀಸರು, ಮಂತ್ರಾಲಯ ಮಠದ ಸೆಕ್ಯುರಿಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Latest Videos
Follow Us:
Download App:
  • android
  • ios