ತುಮಕೂರು ಜಿಲ್ಲೆಗೆ ನೀರಿನ ಹಂಚಿಕೆ ವಿಚಾರದಲ್ಲಿ ಹೇಮಾವತಿ ಲಿಂಕ್ ಕಾಲುವೆ ಯೋಜನೆಯನ್ನು ಶಾಸಕ ಬಿ. ಸುರೇಶ್‌ಗೌಡ ವಿರೋಧಿಸಿದ್ದಾರೆ. ರಾಮನಗರಕ್ಕೆ ನೀರು ಹರಿಸಿದರೆ ತುಮಕೂರಿಗೆ ಒಂದು ಹನಿಯೂ ನೀರು ಸಿಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಐಐಎಸ್‌ಸಿ ತಜ್ಞರಿಂದ ಸಮೀಕ್ಷೆ ನಡೆಸಿ.
ತುಮಕೂರು (ಜೂ.01): ನನ್ನ ಮಕ್ಕಳ ಮೇಲಾಣೆ ಹೇಮಾವತಿ ಲಿಂಕ್ ಕಾಲುವೆ ಯೋಜನೆ ವಿಚಾರದಲ್ಲಿ ಶೇ.1 ರಾಜಕೀಯ ಮಾಡ್ತಿಲ್ಲ. ರಾಮನಗರಕ್ಕೆ ನೀರು ಹರಿಸಿದರೆ ತುಮಕೂರಿಗೆ ಒಂದು ಹನಿಯೂ ನೀರು ಸಿಗೊಲ್ಲ. ಈ ಕೆನಾಲ್ ನಿರ್ಮಾಣಕ್ಕೆ ಖಾಲಿ ಪೋಲಿಗಳು ಸೇರಿ ಕೆಲವರ ರಾಜಕೀಯ ಲಾಭಕ್ಕೆ ಹೇಳಿದಂತೆ ವರದಿ ಸಿದ್ಧಪಡಿಸಿ ಕೊಟ್ಟಿದ್ದಾರೆ. ಈ ವರದಿ ಕಸಕ್ಕೆ ಹಾಕಿ ಐಐಎಸ್‌ಸಿ ತಜ್ಞರನ್ನೊಳಗೊಂಡ ಸಮೀಕ್ಷೆ ಮಾಡಿಸಿ ಎಂದು ಶಾಸಕ ಬಿ. ಸುರೇಶ್‌ಗೌಡ ಮನವಿ ಮಾಡಿದ್ದಾರೆ.
ಹೇಮಾವತಿ ಲಿಂಕ್ ಕೆನಾಲ್ ನಿರ್ಮಾಣ ವಿರೋಧಿಸಿ ಕೈಗೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಸುರೇಶ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಮತ್ತೊಮ್ಮೆ ವಿನಂತಿ ಮಾಡ್ತಿವಿ, ಸಮೀಕ್ಷೆ ಮಾಡಿ, ಇದರಲ್ಲಿ ನಾವ್ಯಾರು ರಾಜಕೀಯ ಮಾಡ್ತಿಲ್ಲ. ಕೆಡಿಪಿ ಮೀಟಿಂಗ್ ನಲ್ಲಿ ನೀವೆ ಹೇಳಿದ್ದೀರಿ, ಕ್ಯಾಬಿನೆಟ್‌ನಲ್ಲಿ ವಿರೋಧ ಮಾಡಿದಿವಿ ಹಾಗಾಗಿ ಈ ಯೋಜನೆ ವಿರುದ್ಧ ನಾವು ಇದ್ದಿವಿ ಅಂತ. ಕೆಡಿಪಿ ಮೀಟಿಂಗ್ ಸಭೆಯಲ್ಲಿ ರೆಸ್ಯೂಲಿಶನ್ ಪಾಸ್ ಮಾಡಿದ್ದೀರಾ. ಟೆಕ್ನಿಕಲ್ ಕಮಿಟಿ ಅಂತ ಮಾಡಿದ್ರಿ. ಅದರಲ್ಲಿ ನಾನು ತುರುವೇಕೆರೆ ಶಾಸಕ ಕೃಷ್ಣಪ್ಪ, ಪರಮೇಶ್ವರ್ ಎಲ್ಲ ಬಂದಿದ್ದರು. ಆ ಕಮಿಟಿಯಲ್ಲಿ ಖಾಲಿ ಪೋಲಿಗಳನ್ನ ಟೆಕ್ನಿಕಲ್ ಕಮಿಟಿ ಮೆಂಬರ್ ಮಾಡಿದ್ದಾರೆ. ಸರ್ಕಾರ ಮತ್ತು ಮಂತ್ರಿಗಳ ಚೇಲಾ ಗಳನ್ನ ಕಮಿಟಿ ಮೆಂಬರ್ ಆಗಿ ಮಾಡಿದ್ದೀರಾ. ಯಾರಾದರೂ ಒಬ್ಬರನ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಸದಸ್ಯರನ್ನು ಮಾಡಿದ್ದೀರಾ.? ನೀವು ಒಬ್ಬರೇ ಒಬ್ಬರು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆಯವರನ್ನ ಸದಸ್ಯರನ್ನಾಗಿ ಮಾಡಿದ್ದರೆ, ನಾನೇ ನಿಮ್ಮನ್ನ ಪ್ರಶಂಸೆ ಮಾಡ್ತಿದ್ದೆ. ಇದು ಅವರು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ ಕೆನಾಲ್‌ಗೆ ನೀರು ಬಿಟ್ಟರೆ ತುಮಕೂರಿಗೆ 1 ಹನಿ ನೀರು ಬರೊಲ್ಲ:
ರೈತರೇ ಈ ದೇಶದ ಬೆನ್ನೆಲುಬು. ಇದೀಗ ಹೇಮಾವತಿ ಲಿಂಕ್ ಕೆನಾಲ್ ಮಾಡಬಾರದು ಎಂದು ರೈತರೇ ಹೇಳ್ತಿದ್ದಾರೆ. ಒಂದು ಎಸ್ಕೇಪ್ ಎತ್ತಿದ್ರೆ ಒಂದೇ ಒಂದು ಡ್ರಾಪ್ ನೀರು ತುಮಕೂರಿಗೆ ಬರಲ್ಲ. ಅದನ್ನ ನಾವು ಹೇಳ್ತಿಲ್ಲ ರೈತರು ಹೇಳ್ತಿರೋದು. ನಾವು ಯಾವ ಜನರನ್ನು ದುಡ್ಡು ಕೊಟ್ಟು ಕರೆದುಕೊಂಡು ಬಂದಿಲ್ಲ. ಟ್ರ್ಯಾಕ್ಟರ್, ಬಸ್‌ನಲ್ಲಿ ಕರೆದುಕೊಂಡು ಬಂದಿಲ್ಲ. ಇದು ಗೃಹ ಸಚಿವರ ಕ್ಷೇತ್ರ ಕಟ್ಟದನ್ನು ಮಾಡಬೇಡಿ ಎಂದಿ ಬೆಡಿಕೊಂಡಿದ್ದೇವೆ. ಸರ್ಕಾರಕ್ಕೆ ಪರಮೇಶ್ವರ್ ಕೆಟ್ಟ ಹೆಸರು ಬರೋದು ಬೇಡ ಅಂತ ನಾವು ನಿಮ್ಮನ್ನ ರಕ್ಷಣೆ ಮಾಡಿದ್ದೇವೆ. ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿ ರೈತರನ್ನ ಸಭೆ ಕರೆಯಿರಿ. ನೀವೇ ಗುಬ್ಬಿಗೆ ಬಂದು ಖುದ್ದಾಗಿ ನೋಡಿ ರೈತರ ಬಳಿ ಮಾತನಾಡಿ ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.
ನನ್ನ ಮಕ್ಕಳ ಮೇಲಾಣೆ ರಾಜಕೀಯ ಮಾಡ್ತಿಲ್ಲ; ನಾಲೆ ಕಾಮಗಾರಿ ನಿಲ್ಲಿಸಿ
ನಾನು ನನ್ನ ಎರಡು ಮಕ್ಕಳ ಮೇಲೆ ಆಣೆ ಇಟ್ಟು ಹೇಳ್ತಿನಿ. ನೀರಿನ ವಿಚಾರಕ್ಕೆ ಯಾರು ರಾಜಕೀಯ ಮಾಡಿಲ್ಲ. ನಾನು ಇಲ್ಲಿ 1% ರಾಜಕೀಯ ಮಾಡಲ್ಲ. ನೀವು ಸರ್ಕಾರದಲ್ಲಿ ಹತ್ತಿರ ಇದ್ದೀರಾ. ಮುಖ್ಯಮಂತ್ರಿಗಳಿಗೆ ಹತ್ತಿರ ಇದ್ದೀರಾ. ನಿಮಗೆ ತುಮಕೂರು ಜಿಲ್ಲೆ ರಾಜಕೀಯ ಭಿಕ್ಷೆ ಕೊಟ್ಟಿದೆ. ತುಮಕೂರು ಜಿಲ್ಲೆ ರಕ್ಷಣೆ ಮಾಡೋ ಜವಾಬ್ದಾರಿ ನಿಮ್ಮ ಮೇಲಿದೆ. ಪೊಲೀಸರು ಬಹಳ ಜವಾಬ್ದಾರಿಯುತವಾಗಿ ರೈತರ ಬಳಿ ನಡೆದು ಕೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗೆ ನಾನು ಧನ್ಯವಾದ ಹೇಳ್ತಿನಿ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನಮಗೆ ಎರಡು ಕಣ್ಣಿದ್ದಾಗೆ. ಸರ್ಕಾರಕ್ಕೆ ಈ ಬಗ್ಗೆ ವರದಿ ಕೊಡಬೇಕು. ಈ ಬಗ್ಗೆ ಟೆಕ್ನಿಕಲ್ ತಂಡ ಮಾಡಿದ ವರದಿ ಅವೈಜ್ಞಾನಿಕವಾಗಿದೆ ಎಂದು ಸಮೀಕ್ಷೆ ಮಾಡಿ ಸರ್ಕಾರಕ್ಕೆ ಮತ್ತೊಂದು ಸತ್ಯಾಂಶದ ವರದಿ ಕೊಡಬೇಕು ಎಂದು ಮನವಿ ಮಾಡಿದರು.
ಐಐಎಸ್ಸಿಯ ಸದಸ್ಯರಿಂದ ಟೆಕ್ನಿಕಲ್ ವರದಿ ಮಾಡಿಸಿ:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಚೇಲಾಗಳನ್ನ ಬಿಸಾಕಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಅವರನ್ನ ಆಯ್ಕೆ ಮಾಡಿಕೊಳ್ಳಿ. ಇಡೀ ಯೋಜನೆ ಹಾಳು ಮಾಡಿರುವಂತಹ ಕೆಲವೇ ಕೇಲವು ಅಯೋಗ್ಯ ಅಧಿಕಾರಿಗಳು ಹೇಮಾವತಿಯಲ್ಲಿದ್ದಾರೆ. ಅವರನ್ನ ವಾಶ್ ಔಟ್ ಮಾಡಬೇಕು. ಜಯಚಂದ್ರ ಮಂತ್ರಿಯಾದರೇ ಶಿರಾಕ್ಕೆ ನೀರು ತಗೊಂಡು ಹೋಗ್ತಾರೆ. ಸುರೇಶ್ ಗೌಡ ಆದರೆ ಒಂದು ಯೋಜನೆ ಮಾಡಿಸ್ತಾರೆ. ಈಗ ರಂಗನಾಥ್ ಒಂದು ಯೋಜನೆ ಮಾಡಿಸ್ತಾರೆ. ಯಾವ್ಯಾವನೋ ಸರ್ಕಾರದ ಅಧಿಕಾರದಲ್ಲಿದ್ದಾಗ ಯವ್ಯಾವೋ ಯೋಜನೆಗಳನ್ನ ಮಾಡಿಸಿಕೊಳ್ತಾನೆ. ಅಂತವರೆಲ್ಲಾ ನೀರಾವರಿ ಯೋಜನೆ ಮಾಡಿದರೆ ನೀರಾವರಿ ಯೋಜನೆಗಳು ಉಳಿಯುತ್ತಾ. ನೀವು ದಿ ಬೆಸ್ಟ್ ನೀರಾವರಿ ಎಕ್ಸಪರ್ಟ್‌ಗಳನ್ನ ಇಟ್ಟುಕೊಂಡರೆ ಮಾತ್ರ ಇದು ಉಳಿಯುತ್ತದೆ ಎಂದು ಶಾಸಕ ಸುರೇಶ್‌ಗೌಡ ತಿಳಿಸಿದರು.
