Asianet Suvarna News Asianet Suvarna News

ಭರವಸೆ ಪತ್ರದಲ್ಲಿ ಗೊಂದಲ: ದಿಢೀರ್ ಕೋಡಿಹಳ್ಳಿಗೆ ಸವದಿ ಪೋನ್, ಮಹತ್ವದ ಮಾತುಕತೆ

ಸರ್ಕಾರ ಕೊಟ್ಟಿರುವ ಭರವಸೆ ಲಿಖಿತ ಪತ್ರದಲ್ಲಿ ಗೊಂಡಲ ಉಂಟಾಗಿದೆ. ಇದರ ಬೆನ್ನಲ್ಲೇ ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಕರೆ ಮಾಡಿದ್ದಾರೆ. ಅದರ ಮಾತುತೆ ಇಂತಿದೆ

Transportation Strike Laxman Savadi Phone Call To Kodihalli chandrashekar rbj
Author
Bengaluru, First Published Dec 14, 2020, 3:57 PM IST

ಬೆಂಗಳೂರು, (ಡಿ.14): ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸರ್ಕಾರದ ಪ್ರತಿನಿಧಿಯಾಗಿ ಮುಷ್ಕರ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಸರ್ಕಾರ 10 ಬೇಡಿಕೆಗಳ ಪೈಕಿ 9 ಬೇಡಿಕೆಗಳಿಗೆ ಒಪ್ಪಿರುವ ಲಿಖಿತ ರೂಪದ ಪತ್ರವನ್ನು ಕೋಡಿಹಳ್ಳಿಯವರಿಗೆ ನೀಡಿದರು.

ಬೇಡಿಕೆಗಳಿಗೆ ಸರ್ಕಾರ ಒಪ್ಪಿದ ಪತ್ರವನ್ನು ಪರಿಶೀಲಿಸಿದ ಕೋಡಿಹಳ್ಳಿ ಚಂದ್ರಶೇಖರ್ ನಂತರ ನೌಕರರನ್ನುದ್ದೇಶಿಸಿ ಮಾತನಾಡಿ, ನಮ್ಮ 10 ಬೇಡಿಕೆಗಳಲ್ಲಿ 8 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ 6 ನೇ ವೇತನ ಆಯೋಗದ ಕುರಿತು ಗೊಂದಲವಿದೆ, ಬೇಡಿಕೆಗಳನ್ನು ಪರಿಹರಿಸುವಲ್ಲಿ ಸ್ಪಷ್ಟತೆ ಇಲ್ಲ ಎಂದರು.

ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಭರವಸೆಗಳೇನು? ಇಲ್ಲಿದೆ ಡಿಟೇಲ್ಸ್

ಅಲ್ಲದೇ 10 ನಿಮಿಷಗಳ ಕಾಲ ಸಮಯ ತೆಗೆದುಕೊಳ್ಳುತ್ತೇನೆ. ಈ ಸಮಯದಲ್ಲಿ ನನಗೆ ಗೊತ್ತಿರುವ ರಾಜಕೀಯ ಪ್ರಮುಖರ ಜೊತೆ ಈ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದರು.

ಕೋಡಿಹಳ್ಳಿ ಚಂದ್ರಶೇಖರ್ ಪತ್ರವನ್ನ ಓದುವ ಸಮಯದಲ್ಲಿ ನೌಕರರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮುಷ್ಕರ ಕೈ ಬಿಡದಿರುವಂತೆ ಕೂಗಿದ ಘಟನೆಯೂ ನಡೆಯಿತು. 

ಕೋಡಿಹಳ್ಳಿಗೆ ಸವದಿ ಫೋನ್
ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಪ್ರತಿಷ್ಠೆಯನ್ನು ಬಿಟ್ಟು ಕೊನೆಗೂ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಕರೆ ಮಾಡಿದ್ದಾರೆ.

ಹೋರಾಟದಲ್ಲಿ ನಾವು ಗೆದ್ದಂತಲ್ಲ, ನೀವು ಸೋತಂತಲ್ಲ, ಮುಷ್ಕರವನ್ನು ಇನ್ನೂ ಮುಂದುವರೆಸುವುದು ಬೇಡ. ನಿನ್ನೆ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಚಾರಗಳನ್ನು ಜಾರಿಗೆ ತರಲು ಸಿದ್ಧ. 6ನೇ ವೇತನ ಆಯೋಗದ ಬಗ್ಗೆ ಇಂದು ನೀಡಿದ ಲಿಖಿತ ಆದೇಶ ಪತ್ರದಲ್ಲಿಲ್ಲ ಎಂದು ಗೊಂದಲಕ್ಕೀಡಾಗುವುದು ಬೇಡ. ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios