Asianet Suvarna News Asianet Suvarna News

ಶಿವಮೊಗ್ಗದಲ್ಲಿ ಗಲಭೆ ಹೇಳಿಕೆಯ ಬಗ್ಗೆ ಉಲ್ಟಾ ಹೊಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಶಿವಮೊಗ್ಗ ನಗರದಲ್ಲಿ ಬಿಜೆಪಿಯರೇ ವೇಷ ಮರೆಸಿಕೊಂಡು ಗಲಭೆ ಮಾಡಿದ್ದಾರೆ ಹೇಳಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೆಲವೇ ಗಂಟೆಗಳಲ್ಲಿ ಉಲ್ಟಾ ಹೊಡೆದಿದ್ದಾರೆ.

Transport Minister Ramalinga Reddy withdraws on Shivamogga riots statement sat
Author
First Published Oct 4, 2023, 4:29 PM IST

ಮಂಗಳೂರು (ಅ.04): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಬಿಜೆಪಿಯರೇ ವೇಷ ಮರೆಸಿಕೊಂಡು ಗಲಭೆ ಮಾಡಿದ್ದಾರೆ ಹೇಳಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಲವೇ ಗಂಟೆಗಳಲ್ಲಿ ಉಲ್ಟಾ ಹೊಡೆದಿದ್ದಾರೆ. ನಾನು ಆ ರೀತಿ ನಾನು ಹೇಳಿಲ್ಲ, ಬಿಜೆಪಿಯವರು ಸಾಮಾನ್ಯವಾಗಿ ಯಾವ ರೀತಿ ಮಾಡ್ತಾರೆ ಅಂತ ಹೇಳಿದ್ದೆ ಅಷ್ಟೇ ಎಂದು ಯೂಟರ್ನ್‌ ಹೊಡೆದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಶಿವಮೊಗ್ಗ ಘಟನೆ ಆಧರಿಸಿ ಈ ರೀತಿ ಹೇಳಿಲ್ಲ, ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ. ಬಿಜೆಪಿಯವರು ಜನರಲ್ ಆಗಿ ಯಾವ ರೀತಿ ಮಾಡ್ತಾರೆ ಅಂತ ಹೇಳಿದ್ದೆ ಅಷ್ಟೇ. ಅವರು ಸಾಮಾನ್ಯವಾಗಿ ಆ ರೀತಿ ಮಾಡ್ತಾರೆ ಎಂದಿದ್ದೇನೆ. ಬಿಜೆಪಿ ವೇಷ ಮರೆಸಿ ಮಾಡುತ್ತೆ ಅಂದಿದ್ದು ಹಳೆಯ ಘಟನೆಗಳ ಬಗ್ಗೆ. ಶಿವಮೊಗ್ಗ ಮತ್ತು ನನ್ನ ಹೇಳಿಕೆಗೆ ಯಾವುದೇ ಸಂಬಂಧ ಇಲ್ಲ. ಕಾನೂನಿನಿಗಿಂತ ದೊಡ್ಡವರು ಯಾರೂ ಇಲ್ಲ, ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ ಎಂದು ಹೇಳಿದರು.

ನಮ್ಮಲ್ಲಿರೋ ಚಾಕು ಚೂರಿ ಉಳ್ಳಾಗಡ್ಡಿ ಕಟ್ ಮಾಡೋಕೆ ಇರೋದಲ್ಲ‌: ಎಚ್ಚರಿಕೆ ರವಾನಿಸಿದ ಯತ್ನಾಳ್

ಆಸ್ತಿ-ಪಾಸ್ತಿ ನಷ್ಟ ಮಾಡದ, ಪೊಲೀಸರ ಮೇಲೆ ಹಲ್ಲೆ ಮಾಡದವರ ಕೇಸ್‌ ವಾಪಸ್:  ಈ ಹಿಂದೆ ಬೆಂಗಳೂರಿನ ಪುಲಿಕೇಶಿ ನಗರ ಗಲಾಟೆಯಲ್ಲೂ ನಾನು ಅದೇ ಹೇಳಿದ್ದೆನು. ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ? ರೈತರು, ಕನ್ನಡಪರ ಹೋರಾಟಗಾರು ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಕೇಸ್ ವಾಪಾಸ್ ಪಡೀತಿವಿ. ಆಸ್ತಿ ಪಾಸ್ತಿ ನಷ್ಟ ಆಗಿರಬಾರದು, ಪೊಲೀಸರ ಮೇಲೆ ಹಲ್ಲೆ ಆಗದ ಕೇಸ್ ಗಳು, ಇಂಥವುಗಳನ್ನು ಮಾತ್ರ ನಾವು ವಾಪಸ್ ಪಡೆಯಲು ಶಿಫಾರಸ್ಸು ಮಾಡ್ತೇವೆ. ಅದು ಬಿಟ್ಟರೆ ಕೋಮು ಗಲಭೆ ಕೇಸ್ ಗಳಲ್ಲಿ ಶಿಫಾರಸ್ಸು ಮಾಡಲ್ಲ ಎಂದು ಹೇಳಿದರು.

ನಾವು ಕೆಳಮಟ್ಟಕ್ಕೆ ಇಳಿಯೋಕಾಗಲ್ಲ:  ಶಿವಮೊಗ್ಗ ಶಾಸಕ ಚನ್ನಬಸಪ್ಪ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನನಗೆ ತಾಕತ್ತಿದ್ಯೋ ಇಲ್ವೋ ಅಂಥ ಅವನಿಗೆ ಏನ್ ಗೊತ್ತು? ನನಗೆ ಏಕವಚನದಲ್ಲಿ ಬೈಯ್ಯೋಕೆ ಗೊತ್ತಿಲ್ಬಾ? ಆದ್ರೆ ನಾನು ಬೈಯ್ಯೋಕೆ ಆಗಲ್ಲ. ಮಾತಿನ ಗೌರವ, ರೀತಿ ವಿಧಾನ ಗೊತ್ತಿಲ್ಲಾಂದ್ರೆ ನಾನು ಹಾಗೆ ಮಾಡಲು ಆಗಲ್ಲ. ಅವರ ಮಟ್ಟಕ್ಕೆ ನಾವು ಇಳಿಯೋಕೆ ಆಗಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಗಿಗುಡ್ಡ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ಶಿವಮೊಗ್ಗ (ಅ.04): ಗಣಪತಿ ಮತ್ತು ಈದ್ ಮಿಲಾದ್ ಮೆರವಣಿಗೆಗಳು ಎರಡೂ ಶಾಂತಿಯುತವಾಗಿ ನಡೆದಿವೆ. ಆದರೆ, ಕೊನೆ ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ಕಹಿ ಘಟನೆ ನಡೆದಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಮೆಗ್ಗಾನ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ರಾಗಿಗುಡ್ಡ ಗಲಭೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಗಿಗುಡ್ಡ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ

ಘಟನೆ ವೇಳೆ ಅನೇಕ ಮನೆಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಮನೆಯ ಕಿಟಕಿಗಳ ಗ್ಲಾಸ್‌ಗಳು ಒಡೆದು ಹೋಗಿದ್ದು, ಹಲವರಿಗೆ ಗಾಯಗಳಾಗಿವೆ ಎಂದರು. ಈ ಬಗ್ಗೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರೆಲ್ಲರಿಗೂ ಸಮಾಧಾನ ಮಾಡಿದ್ದೇನೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು. ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್‍ಮಿಲಾದ್ ಹಬ್ಬಗಳು ಸಂಭ್ರಮದಿಂದ ನಡೆದಿವೆ. 

Follow Us:
Download App:
  • android
  • ios