HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕದ ಬಿಗ್‌ ಅಪ್ಡೇಟ್ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

ರಾಜ್ಯದಲ್ಲಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17 ಕೊನೆಯ ದಿನಾಂಕವಿದ್ದು, ಈಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ದಿನಾಂಕ ವಿಸ್ತರಣೆ ಬಗ್ಗೆ ಸುಳಿವು ನೀಡಿದ್ದಾರೆ.

Transport Minister Ramalinga Reddy gives big update on HSRP number plate sat

ಬೆಂಗಳೂರು (ಫೆ.11): ಹೈಸೆಕ್ಯೂರಿಟಿ ನಂಬರ್ ಪ್ಲೇಟ್ (High Security number plate-HSRP) ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನವಾಗಿದೆ. ಆದರೂ, ಜನರು ಕೊನೇ ಅವಧಿಯಲ್ಲಿ ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಅಪ್ಲೋಡ್ ಸಮಸ್ಯೆಯಾಗಲಿದೆ. ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಾರಿಗೆ ಇಲಾಖೆ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ಇಲಾಖೆಗಳನ್ನ ಸಿಎಂ ಸಭೆ ಕರೆದಿದ್ದರು. ಅದೇ ರೀತಿ ಸಾರಿಗೆ ಇಲಾಖೆಯವರು ಕೂಡ  ಭಾಗಿಯಾಗಿದ್ದರು. ಆಟೋ ಟ್ಯಾಕ್ಸಿ, ಲಾರಿ  ಅಸೋಷಿಯಷನ್ ಅವರು ಎಲ್ಲಾ ಬಂದಿದ್ದರು. ಅವರ ಬೇಡಿಕೆಗಳನ್ನ ಕೂಡ ಇಟ್ಟಿದ್ದಾರೆ. ಜೊತೆಗೆ, ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಬೇಡಿಕೆ ಈಡೇರಿಸಿದ್ದೇವೆ ಎಂದರು. ಇಂದು ಹೊಸ ಬೇಡಿಕೆಗಳನ್ನೂ ಸಹ ಇಟ್ಟಿದ್ದಾರೆ. ಮುಂದಿನದ್ದು ಬಜೆಟ್  ದಿನ ನೋಡೋಣ ಎಂದು ಹೇಳಿದ್ದೇವೆ ಎಂದು ಹೇಳಿದರು.

ಇನ್ನು ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಮಾಡಿಸಲು ಫೆ.17ನೇ ತಾರೀಕು ಲಾಸ್ಟ ಡೇಟ್ ಇದೆ. ಹಿಂದೆ ಒಂದು ಸರಿ ಮುಂದಕ್ಕೆ ಹಾಕಿದ್ದೆವು. ಈಗ ಮತ್ತೆ ಮುಂದಕ್ಕೆ ಹಾಕಿ ಅಂತಾ ಹೇಳ್ತ ಇದಾರೆ. ಇನ್ನು ಒಂದುವಾರ ಸಮಯ ಇದೆ. ಎಲ್ಲಾ ಕೊನೇನಲ್ಲಿ ಅರ್ಜಿ ಹಾಕೋಕೆ ಬರ್ತಾರೆ. ಒತ್ತಡ ಜಾಸ್ತಿ ಆಗಿ ಅಪ್ಲೋಡ್ ಆಗೋಲ್ಲ ಅದೊಂದು ಸಮಸ್ಯೆ ಇದೆ. ಇನ್ನು ಟೈಮ್ ಇದೆ ನೋಡೋಣ ಎಂದು ಸಾರಿಗೆ ಸಚೊವ ರಾಮಲಿಂಗಾರೆಡ್ಡಿ ಅವರು ಬಿಗ್ ಅಪ್ಡೇಟ್ ನೀಡಿದರು.

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನ. ಬಳಿಕ ದುಬಾರಿ ದಂಡ ಪಾವತಿ ತಲೆನೋವು ಶುರುವಾಗಲಿದೆ. ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಸೇರಿದಂತೆ ಹಲವು ಕಾರಣಗಳಿಂದ  ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದೆ. ಈ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮದ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. 2019ರ ಎಪ್ರಿಲ್ ಬಳಿಕ ರಿಜಿಸ್ಟ್ರೇಶನ್ ಆಗಿರುವ ವಾಹನಗಳಿಗೆ ಹಾಕಲಾಗಿರುವ ನಂಬರ್ ಪ್ಲೇಟ್ HSRP ಆಗಿದೆ. ಹೀಗಾಗಿ ಯಾರ ವಾಹನ ಎಪ್ರಿಲ್ 2019ರ ಮೊದಲ ರಿಜಿಸ್ಟ್ರೇಶನ್ ಆಗಿದೆಯೋ ಆ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. HSRP ನಂಬರ್ ಪ್ಲೇಟ್ ಬುಕಿಂಗ್‌ನಲ್ಲಿ ನಗದು ವ್ಯವಹಾರವಿಲ್ಲ. ಆನ್‌ಲೈನ್ ಮೂಲಕವೇ ಬುಕಿಂಗ್, ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು. ಕರ್ನಾಟಕದಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕ್ ಮಾಡಲು ಅನುಸರಿಸಬೇಕಾದ ವಿಧಾನ ಇಲ್ಲಿದೆ

ಇಲ್ಲಿದೆ ನೋಡಿ ಹಂತ ಹಂತದ ಮಾಹಿತಿ:

  • https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.
  • Book HSRP ಕ್ಲಿಕ್ ಮಾಡಿ.
  • ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ
  • ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ
  • ನಿಮ್ಮ ಹತ್ತಿರದ ಅಥವಾ ನಿಮ್ಮ  ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ
  • HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ
  • ಮೊಬೈಲ್ ನಂಬರ್‌ಗೆ ಬರವು ಒಟಿಪಿಯನ್ನು ನಮೂದಿಸಿ
  • HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ
Latest Videos
Follow Us:
Download App:
  • android
  • ios