Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ 36 ಪೊಲೀಸ್‌ ಇನ್ಸ್‌ಪೆಕ್ಟರ್‌ ವರ್ಗಾವಣೆ

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 36 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
 

Transfer Of 36 Police Inspectors In Karnataka
Author
Bengaluru, First Published Oct 5, 2018, 11:48 AM IST

ಬೆಂಗಳೂರು :  ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 36 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ತವರು ಜಿಲ್ಲೆಯ ಹಾಸನದ ಸಕಲೇಶಪುರಕ್ಕೆ ಹಿಂದೆ ವರ್ಗಾವಣೆ ಮಾಡಿದ್ದನ್ನು ತಡೆದು ಇದೀಗ ಎಸ್‌.ಎಚ್‌.ವಸಂತ್‌ ಎಂಬುವರನ್ನು ಸಕಲೇಶಪುರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ಪಟ್ಟಿ: ವೀರೇಂದ್ರ ಪ್ರಸಾದ್‌- ಬ್ಯಾಟರಾಯನಪುರ, ಎಂ.ಬಿ.ರಾಮಕೃಷ್ಣ ರೆಡ್ಡಿ- ಯಲಹಂಕ, ಧರ್ಮಪ್ಪ- ಪೀಣ್ಯ ಸಂಚಾರ ಠಾಣೆ, ಸಿರಾಜುದ್ದೀನ್‌- ಹೈಗ್ರೌಂಡ್ಸ್‌, ಅನಿಲ್‌ ಕುಮಾರ್‌- ನೆಲಮಂಗಲ ವೃತ್ತ, ಎಚ್‌.ವಿ.ಸುದರ್ಶನ್‌ - ಚಿಕ್ಕಬಳ್ಳಾಪುರ ವೃತ್ತ, ಬಿ.ಜಿ.ಕುಮಾರ್‌- ವಿಜಯನಗರ (ಮೈಸೂರು ನಗರ), ಪ್ರಸನ್ನ ಕುಮಾರ್‌- ದೇವರಾಜ ಠಾಣೆ (ಮೈಸೂರು), ಮಹೇಶ್‌ ಪ್ರಸಾದ್‌- ಕಾಪು ವೃತ್ತ, ಅನೂಪ್‌ ಮಾಡಪ್ಪ.ಪಿ- ಮಡಿಕೇರಿ ಟೌನ್‌ ವೃತ್ತ, ಪ್ರಶಾಂತ್‌ ಎಸ್‌.ನಾಯಕ್‌-ಧಾರವಾಡ ಸಂಚಾರ, ಲೋಕೇಶ್‌-ಬೇಲೂರು ವೃತ್ತ (ಹಾಸನ), ಸಂದೀಪ್‌ ಸಿಂಗ್‌ ಪಿ.ಮುರುಗೋಡ- ಹೆಸ್ಕಾಂ (ಚಿಕ್ಕೋಡಿ), ಜಿ.ಕೆ.ಮಧುಸೂದನ್‌ - ತುಮಕೂರು ಗ್ರಾಮಾಂತರ ವೃತ್ತ, ಕೆ.ಎಂ.ಯೋಗೇಶ್‌- ಭದ್ರಾವತಿ ವೃತ್ತ (ಶಿವಮೊಗ್ಗ), ಧೀರಜ್‌ ಬಿ.ಶಿಂಧೆ- ಖಡೆ ಬಜಾರ್‌ (ಬೆಳಗಾವಿ ನಗರ), ಸಂಜೀವ್‌ ಎಸ್‌.ಬಳಿಗಾರ್‌- ಹುನಗುಂದ (ಬಾಗಲಕೋಟೆ), ಚಿದಾನಂದ- ಬ್ಯಾಡಗಿ ವೃತ್ತ (ಹಾವೇರಿ), ಮಲ್ಲಯ್ಯ ಜಿ.ಮಠಪತಿ- ಹೆಸ್ಕಾಂ (ವಿಜಯಪುರ), ಬಿ.ಎಸ್‌.ಲೋಕಾಪುರ್‌- ಹಳಿಯಾಳ ವೃತ್ತ (ಉತ್ತರ ಕನ್ನಡ), ರಮೇಶ್‌ ಎಸ್‌.ಹೂಗಾರ್‌- ಜೋಯಿಡಾ ವೃತ್ತ (ಉತ್ತರ ಕನ್ನಡ), ಎನ್‌.ಜಯಕುಮಾರ್‌- ಮೈಸೂರು ರೈಲ್ವೆ, ಸುರೇಶ್‌ ಸಗರಿ- ರಾಣೆಬೆನ್ನೂರು (ಹಾವೇರಿ), ರಮೇಶ್‌ ಚಂದ್ರಪ್ಪ ಮೇಟಿ- ರೋಜಾ (ಕಲ್ಬುರ್ಗಿ), ನೇಮಿರಾಜ್‌- ಮಂಡ್ಯ ಗ್ರಾಮಾಂತರ ವೃತ್ತ, ರಾಘವೇಂದ್ರ- ಕಲ್ಬುರ್ಗಿ ಗ್ರಾಮಾಂತರ ವೃತ್ತ, ಮಹಾಂತೇಶ್‌ ಬಿ.ಪಾಟೀಲ್‌- ಅಫ್ಜಲ್‌ಪುರ ವೃತ್ತ (ಕಲ್ಬುರ್ಗಿ), ಮಹಾದೇವಯ್ಯ- ಚೆಸ್ಕಾಂ (ಚಾಮರಾಜನಗರ) ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Follow Us:
Download App:
  • android
  • ios