Asianet Suvarna News Asianet Suvarna News

ಏನ್ ಅದೃಷ್ಟ ಗುರು ಈ ಶಿಕ್ಷಕನದು; ಇನ್ನೇನು ಸತ್ತೇಹೋದ ಅನ್ನುವಷ್ಟರಲ್ಲಿ ನಡೀತು ಪವಾಡ!

ನಗರದ ರೈಲ್ವೆ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿದೆ, ಶಿಕ್ಷಕರೊಬ್ಬರು ಗೂಡ್ಸ್ ರೈಲಿನಡಿ ಸಿಲುಕಿ ಪ್ರಾಣ ಉಳಿಸಿಕೊಂಡಿರುವ ಘಟನೆ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬಿ.ದುರ್ಗದಲ್ಲಿ ಮುಖ್ಯಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ.

Tragedy at Railway track crossing teacher trapped under locomotive at davanagere rav
Author
First Published Sep 14, 2023, 4:13 PM IST

- ವರದರಾಜ್ 

ದಾವಣಗೆರೆ (ಸೆ.14): ನಗರದ ರೈಲ್ವೆ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿದೆ, ಶಿಕ್ಷಕರೊಬ್ಬರು ಗೂಡ್ಸ್ ರೈಲಿನಡಿ ಸಿಲುಕಿ ಪ್ರಾಣ ಉಳಿಸಿಕೊಂಡಿರುವ ಘಟನೆ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬಿ.ದುರ್ಗದಲ್ಲಿ ಮುಖ್ಯಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ.

 ಇಂದು ರೈಲಿನ ಮೂಲಕ ಶಾಲೆಗೆ ತೆರಳಲು ದಾವಣಗೆರೆ ರೈಲು ನಿಲ್ಧಾಣಕ್ಕೆ ಆಗಮಿಸಿದ್ದ  ಶಿಕ್ಷಕ ಶಿವಕುಮಾರ್ ರವರು ನಿಲ್ದಾಣದ ಪ್ಲಾಟ್ ಫಾರಂ 1 ರಿಂದ ಪ್ಲಾಟ್ ಫಾರಂ 2 ಕ್ಕೆ ಹೋಗಲು ಫ್ಲೈ ಓವರ್ ಮೂಲಕ ಕ್ರಮಿಸಿ ಹಳಿ ದಾಟುವ ಬದಲು ರೈಲ್ವೆ ಹಳಿ ದಾಟುವ ಸಾಹಸಕ್ಕೆ ಮುಂದಾಗಿದ್ದರು. 

ಮಧುರೈ ರೈಲು ನಿಲ್ದಾಣದಲ್ಲಿ ಹೊತ್ತಿ ಉರಿದ ಬೋಗಿ, ಕನಿಷ್ಠ 10 ಮಂದಿ ಸಾವು

ಈ ವೇಳೆ ವೇಗವಾಗಿ ಗೂಡ್ಸ್ ರೈಲು ಬರುವುದನ್ನು ಶಿಕ್ಷಕ ಗಮನಿಸಿಲ್ಲ. ಶಿಕ್ಷಕ ಶಿವಕುಮಾರ್ ರವರು ಹಳಿ ದಾಟುವಾಗ ಏಕಾಏಕಿ ಗೂಡ್ಸ್ ರೈಲು ಹಳಿ ಮೇಲೆ ಬಂದಿದೆ. ದಿಕ್ಕೆ ತೋಚದಂತಾದ ಶಿಕ್ಷಕ ಅದೇ ಗೂಡ್ಸ್ ರೈಲು  ಸಾಗ್ತಿದ್ದಾ ಹಳಿಯ ನಡುವೆ ಮಲಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ. 

ಇನ್ನು ಶಿಕ್ಷಕ ರೈಲಿನಡಿ ಇದ್ದಿದ್ದು ಗಮನಿಸಿದ ರೈಲ್ವೆ ಇಲಾಖೆ ಸಿಬ್ಬಂದಿ‌ ಅಲರ್ಟ್ ಆಗಿ  ತಕ್ಷಣ ರೈಲನ್ನು ನಿಲ್ಲಿಸಿದ್ದುರಿಂದ ಬಡಜೀವ ಉಳಿದಿದೆ.‌ ಬಳಿಕ ಗೂಡ್ಸ್ ರೈಲಿನ ಕೆಳಗೆ ಸಿಲುಕಿದ  ಶಿಕ್ಷಕನನ್ನು ಆರ್ಪಿಎಫ್ ಪೊಲೀಸರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.   

ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ; ಬೋಗಿ ಗಾಜು ಪುಡಿಪುಡಿ!

ಶಿಕ್ಷಕ ಶಿವಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೇನು ಜೀವ ಹೋಯಿತು ಎಂದು ಭಾವಿಸಿದ ಶಿಕ್ಷಕ ಪವಾಡ ಸಾದೃಶ ರೀತಿಯಲ್ಲಿ ಜೀವ ಉಳಿಸಿಕೊಂಡು ಪಾರಾಗಿದ್ದು ಮರು ಜೀವ ಬಂದಂತಾಗಿದೆ.

Follow Us:
Download App:
  • android
  • ios