ಮಧುರೈ ರೈಲು ನಿಲ್ದಾಣದಲ್ಲಿ ಹೊತ್ತಿ ಉರಿದ ಬೋಗಿ, ಕನಿಷ್ಠ 10 ಮಂದಿ ಸಾವು

ತಮಿಳುನಾಡಿನ ಮಧುರೈ ರೈಲು ನಿಲ್ದಾಣದಲ್ಲಿದ್ದ ರೈಲಿನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿ  20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

Many dead after fire breaks out in tourist train near Madurai station gow

ಮಧುರೈ (ಆ.26): ತಮಿಳುನಾಡಿನ ಮಧುರೈ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಸಂಭವಿಸಿದ ದೊಡ್ಡ ಅಗ್ನಿ ಅನಾಹುತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿ  20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮಧುರೈ ಯಾರ್ಡ್‌ನಲ್ಲಿ ರೈಲು ನಿಂತಿದ್ದಾಗ ಖಾಸಗಿ ಕೋಚ್‌ನಲ್ಲಿ ಸುಮಾರು 5:15 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಸಾವು ಕಂಡ 10 ಮಂದಿ ಕೂಡ ಉತ್ತರ ಪ್ರದೇಶದವರು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಈ ರೈಲು ಉತ್ತರ ಪ್ರದೇಶದ ಲಕ್ನೋದಿಂದ ಆಗಮಿಸಿದ್ದು, 65 ಪ್ರಯಾಣಿಕರಿದ್ದ ಖಾಸಗಿ ಕೋಚ್‌ ಆಗಿದ್ದು ಬೆಳಗ್ಗೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ. ಇವರೆಲ್ಲರೂ ಆಗಸ್ಟ್ 17 ರಂದು ಲಕ್ನೋದಿಂದ ರಾಮೇಶ್ವರಂಗೆ ತೀರ್ಥಯಾತ್ರೆ ಆರಂಭಿಸಿದ್ದರು. ಈ ರೈಲು ಭಾನುವಾರ ಚೆನ್ನೈಗೆ ತಲುಪುವುದಿತ್ತು ಮತ್ತು ಬಳಿಕ ಅಲ್ಲಿಂದ ಲಕ್ನೋಗೆ ಹಿಂತಿರುಗಲು ನಿರ್ಧರಿಸಲಾಗಿತ್ತು ಎಂದು ತಿಳಿದುಬಂದಿದೆ. ಈ ದುರ್ಘಟನೆ  ಸಂಭವಿಸಿದಾಗ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಿ  ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇರಿಸಲಾಗಿತ್ತು.

ಮಂಗಳೂರು: ಪಡ್ಡಂಗಡಿಯಲ್ಲಿ ಖಾಸಗಿ ಬಸ್ ಪಲ್ಟಿ: 8 ಜನರಿಗೆ ಗಾಯ

ತಕ್ಷಣ ಅಗ್ನಿಶಾಮಕ ಟೆಂಡರ್‌ಗಳನ್ನು ಕರೆಸಿ ಸುಮಾರು 7 ಗಂಟೆಗೆ ಬೆಂಕಿಯನ್ನು ನಂದಿಸಿದ್ದರಿಂದ ರೈಲಿನ  ಅಕ್ಕ ಪಕ್ಕದ ಬೋಗಿಗಳಿಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಇನ್ನಷ್ಟು ಸಾವು ನೋವಾಗುವ ಘಟನೆ ಅದೃಷ್ಟವಶಾತ್ ತಪ್ಪಿದೆ.  ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಧುರೈ ಜಿಲ್ಲಾಧಿಕಾರಿ ಎಂ.ಎಸ್.ಸಂಗೀತಾ, ಇಂದು ಮುಂಜಾನೆ 5.30 ರ ಸುಮಾರಿಗೆ ಮಧುರೈ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿ ಉತ್ತರ ಪ್ರದೇಶದಿಂದ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳು ಇದ್ದರು. ಕಾಫಿ, ಟೀ ತಯಾರಿಸಲು ಗ್ಯಾಸ್ ಸ್ಟೌವ್ ಹೊತ್ತಿಸಿದರು. ಈ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸದ್ಯಕ್ಕೆ ಮೃತ ಶವಗಳನ್ನು ಪಡೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ

ಈ ಖಾಸಗಿ  ಕೋಚ್ ಆಗಸ್ಟ್ 17 ರಂದು ಲಕ್ನೋದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು ಮತ್ತು ಭಾನುವಾರದ ವೇಳೆಗೆ ಚೆನ್ನೈ ತಲುಪಲಿತ್ತು ಎಂದು ತಿಳಿದುಬಂದಿದೆ. ಅಗ್ನಿ ಅವಘಡ ಮತ್ತು ದುರಂತಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು: 9360552608, 8015681915.

ಖಾಸಗಿ ಕೋಚ್‌ನಲ್ಲಿದ್ದ ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಅಕ್ರಮವಾಗಿ ಸಾಗಿಸಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ದಕ್ಷಿಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಗುಗನೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ನಾಗರ್‌ಕೋಯಿಲ್ ಜಂಕ್ಷನ್‌ನಲ್ಲಿ ಪುನಲೂರ್-ಮಧುರೈ ಎಕ್ಸ್‌ಪ್ರೆಸ್‌ನಲ್ಲಿ ಕೋಚ್ ಅನ್ನು ಜೋಡಿಸಲಾಯಿತು ಮತ್ತು ಮಧುರೈಗೆ ಬಂದ ನಂತರ ಅದನ್ನು ಬೇರ್ಪಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಶ್ರೀಲಂಕಾ ಪಾತಕಿಗಳಿಗೆ ನೆರವಾದ ಇಬ್ಬರ ಬಂಧನ..!

ಇದು ಖಾಸಗಿ ಪಾರ್ಟಿ ಕೋಚ್ ಆಗಿದ್ದು,  ಆಗಸ್ಟ್ 25ರಂದು ರೈಲು ನಂ. 16730ನ ಪುನಲೂರ್-ಮಧುರೈ ಎಕ್ಸ್‌ಪ್ರೆಸ್‌ಗೆ  ನಾಗರಕೋಯಿಲ್ ಜಂಕ್ಷನ್‌ನಲ್ಲಿ ಅಳವಡಿಸಲಾಗಿತ್ತು. ಬಳಿಕ ಈ ಕೋಚ್‌ ಅನ್ನು ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇರಿಸಲಾಗಿತ್ತು. ಖಾಸಗಿ ಕೋಚ್‌ನಲ್ಲಿದ್ದ ಪ್ರಯಾಣಿಕರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಾಟ ಮಾಡಿ ಕಾಫಿ, ಟೀ ಮಾಡಲು ಹೋದಾಗ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಅನೇಕ ಪ್ರಯಾಣಿಕರು ಕೋಚ್‌ನಿಂದ ಹೊರಬಂದಿದ್ದಾರೆ. ಕೆಲವು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿಯೇ ಇಳಿದರು ಎಂದು ಪ್ರಕಟಣೆ ತಿಳಿಸಿದೆ.

ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್‌ಗಳು, ಆಸಿಡ್, ಸೀಮೆಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್ ಮತ್ತು ಸ್ಟೌ ಮತ್ತು ಸ್ಫೋಟಕಗಳಂತಹ ಬೆಂಕಿಯಿಡುವ ವಸ್ತುಗಳನ್ನು ಸಾಗಿಸುವುದು 1989 ರ ರೈಲ್ವೆ ಕಾಯಿದೆಯ ಸೆಕ್ಷನ್ 67,164 ಮತ್ತು 165 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

 

Latest Videos
Follow Us:
Download App:
  • android
  • ios