ಟ್ರಾಫಿಕ್ ನಿಯಮ ಉಲ್ಲಂಘನೆ: 50% ರಿಯಾಯಿತಿಯಡಿ ದಂಡ ಕಟ್ಟಲು ಇಂದು ಕೊನೆ ದಿನ
ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ (ಸೆ.9) ಅಂತ್ಯವಾಗಲಿದೆ.

ಬೆಂಗಳೂರು (ಸೆ.9): ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50ರಷ್ಟುರಿಯಾಯಿತಿ ಸೌಲಭ್ಯ ಶನಿವಾರ (ಸೆ.9) ಅಂತ್ಯವಾಗಲಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(State Legal Services Authority)ದ ಸಭೆಯ ತೀರ್ಮಾನದಂತೆ ಫೆ.11ರೊಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ(Traffic violation case bengaluru)ಗಳಿಗೆ ಅನ್ವಯವಾಗುವಂತೆ ಬಾಕಿ ದಂಡದ ಮೊತ್ತ ಪಾವತಿಗೆ ರಾಜ್ಯ ಸರ್ಕಾರ ಜು.6ರಿಂದ ಎರಡನೇ ಬಾರಿ ಶೇ.50ರಷ್ಟುರಿಯಾಯಿತಿ ಸೌಲಭ್ಯ ಕಲ್ಪಿಸಿತ್ತು. ಅದರಂತೆ ಬೆಂಗಳೂರು ನಗರದಲ್ಲಿ ಜು.6ರಿಂದ ಸೆ.8ರ ವರೆಗೆ 2.53 ಲಕ್ಷ ಪ್ರಕರಣಗಳಿಂದ 8.07 ಕೋಟಿ ರು. ಬಾಕಿ ದಂಡ ಸಂಗ್ರಹವಾಗಿದೆ.
ಬ್ರ್ಯಾಂಡ್ ಬೆಂಗಳೂರು: ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ದಟ್ಟಣೆ ಶುಲ್ಕ ವಸೂಲಿ!
ಸಾರ್ವಜನಿಕರು ತಮ್ಮ ವಾಹನದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡ ಪಾವತಿಸಲು ಕರ್ನಾಟಕ ಸ್ಟೇಟ್ ಪೊಲೀಸ್(ಕೆಎಸ್‌ಪಿ) ಆ್ಯಪ್, ಕರ್ನಾಟಕ ಒನ್, ಬೆಂಗಳೂರು ಒನ್ ವೆಬ್‌ಸೈಟ್‌ಗಳು, ಸಮೀಪದ ಸಂಚಾರ ಪೊಲೀಸ್ ಠಾಣೆಗಳು, ನಗರ ಸಂಚಾರ ಪೊಲೀಸರ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ಕೌಂಟರ್‌ನಲ್ಲಿ ಅವಕಾಶ ನೀಡಲಾಗಿದೆ.