ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ 42ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ರಾಜ್ಯದ ರೈತರ ಸಹ ಬೆಂಬಲ ಸೂಚಿಸಿದ್ದಾರೆ.
ಕೋಲಾರ, (ಜ.16): ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸತತ ಪ್ರತಭಟನೆ ನಡೆಸುತ್ತಿರುವ ರೈತರು ದೆಹಲಿಯ ಪ್ರಮುಖ ನಾಲ್ಕು ಗಡಿ ಭಾಗಗಳಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಿದ್ದಾರೆ.
ಅಲ್ಲದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಸಹ ಟ್ರಾಕ್ಟರ್ ಮೆರವಣಿಗೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಇದಕ್ಕೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರಾಕ್ಟರ್ ಮೆರವಣಿಗೆ ಮಾಡಲು ಮುಂದಾಗಿವೆ.
ಈ ಬಗ್ಗೆ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಕೋಲಾರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿಯೂ ಟ್ರಾಕ್ಟರ್ ಮೆರವಣಿಗೆ ಇರುತ್ತದೆ. ದೆಹಲಿ ರೈತರಿಗೆ ಬೆಂಬಲಿಸಿ ನಾವು ಕೂಡ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ವಿವಿದೆಡೆಯಿಂದ ಟ್ರ್ಯಾಕ್ಟರ್‌ಗಳು ಅಂದು ಬೆಂಗಳೂರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದರು.
ರೈತರ ಜೊತೆಗಿನ 9ನೇ ಸುತ್ತಿನ ಮಾತುಕತೆ ವಿಫಲ; ಮತ್ತೆ ಸಭೆ ಯಾವಾಗ?
ರೈಲು, ಬಸ್, ವಿಮಾನ, ಬಂದರು ಸೇರಿದಂತೆ ಹಲವು ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ನೀಡಲಾಗುತ್ತಿದೆ. ಅದಾನಿ, ಅಂಬಾನಿಗಳು ದೇಶಾದ್ಯಂತ ಗೋಡೋನ್‌ಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಅದಾನಿ, ಅಂಬಾನಿಗಳು ಪ್ರದಾನಿಯವರ ಅತ್ತೆಮಕ್ಕಳಾ? ಚಿಕ್ಕಪ್ಪನ ಮಕ್ಕಳಾ ?ಅಥವಾ ಮಾವನ ಮಕ್ಕಳಾ? ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದರು.
ಕೆಲವರು ಮಾತ್ರವೇ ದೇಶದ ವಾರಸುದಾರರಾಗಿ ಇರಲು ಹುನ್ನಾರ ನಡೆಯುತ್ತಿದೆ. ದೇಶದ ಜನರನ್ನ ನಿರ್ಗತಿಕರನ್ನಾಗಿ ಮಾಡಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ತಳಬುಡ ಇಲ್ಲದ ಕಾನೂನುಗಳನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದರು.
ಇನ್ನು ಇದೇ ವೇಳೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇ ಕಾನೂನು ಇಂದಿನದ್ದಲ್ಲ. ಅದು ಅಶೋಕನ ಕಾಲದಲ್ಲಿಯೂ ಇತ್ತು. ನೆಹರು ಕಾಲದಲ್ಲಿಯೂ ಇತ್ತು. ಕಾಲಕಾಲಕ್ಕೆ ಅದನ್ನು ಮಾರ್ಪಾಟು ಮಾಡಲಾಗಿದೆ. ರೈತರ ಮನೆ ಹಾಳು ಮಾಡಲು ಗೋ ಹತ್ಯೆಯನ್ನ ಜಾರಿಗೆ ತರಲಾಗಿದೆ ಎಂದು ಕಿಡಿಕಾರಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 16, 2021, 6:42 PM IST