ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದ್ದು, ಪೋಷಕರು ಜೀವಕ್ಕೆ ಸಂಚಕಾರ ತರುವಂತಹಾ ಅಪಾಯಕಾರಿ ಬಂಡೆಯ ಮೇಲೆ ಮಕ್ಕಳನ್ನ ಹತ್ತಿಸುತ್ತ ಹುಚ್ಚಾಟ ಮೆರೆಯುತ್ತಿದ್ದಾರೆ.ಅಲ್ಲದೆ ರಸ್ತೆಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಅಂಬುಲೆನ್ಸ್ ಗೂ ದಾರಿ ಬಿಡದೇ  ರೋಗಿಗಳ ಪಾಲಿಗೂ ಸಂಚಕಾರವನ್ನು ತರುತ್ತಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.23) : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದ್ದು, ಪೋಷಕರು ಜೀವಕ್ಕೆ ಸಂಚಕಾರ ತರುವಂತಹಾ ಅಪಾಯಕಾರಿ ಬಂಡೆಯ ಮೇಲೆ ಮಕ್ಕಳನ್ನ ಹತ್ತಿಸುತ್ತ ಹುಚ್ಚಾಟ ಮೆರೆಯುತ್ತಿದ್ದಾರೆ.ಅಲ್ಲದೆ ರಸ್ತೆಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಅಂಬುಲೆನ್ಸ್ ಗೂ ದಾರಿ ಬಿಡದೇ ರೋಗಿಗಳ ಪಾಲಿಗೂ ಸಂಚಕಾರವನ್ನು ತರುತ್ತಿದ್ದಾರೆ.

ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ: ಕೂದಲೆಳೆ ಅಂತರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಪಾರು

ಜೀವಕ್ಕೆ ಸಂಚಕಾರ ತರುವಂತಹ ಸ್ಥಳದಲ್ಲಿ‌ ಮೋಜು ಮಸ್ತಿ 

ದಕ್ಷಿಣಕನ್ನಡ(Dakshina kannada) ಮತ್ತು ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟ್(Charmadi ghat).22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿ ರಸ್ತೆ ಹಾವುಬಳುಕಿನ ಮೈಕಟ್ಟಿನಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಒಂದೆಡೆ ಪಾತಾಳ, ಮತ್ತೊಂದೆಡೆ ಮುಗಿಲೆತ್ತರದ ಬೆಟ್ಟಗಡ್ಡಗಳು. ಇಂತಹಾ ಸುಂದರ ಹಾಗೂ ಅಪಾಯದ ತಾಣದಲ್ಲಿ ಪ್ರವಾಸಿಗರು ಹೇಳೋರು-ಕೇಳೋರಿಲ್ಲದೆ ಹುಚ್ಚಾಟ ಮೆರೆಯುತ್ತಿದ್ದಾರೆ. 

ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವ ಪ್ರವಾಸಿಗರು(Tourists) ಹತ್ತಾರು ಅಡಿ ಎತ್ತರ ಕಲ್ಲುಬಂಡೆಗಳ ಮೇಲೆ ನಿಂತು ಪೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದಿದ್ದಾರೆ. ಈ ಕಲ್ಲುಬಂಡೆ ಹಾಗೂ ಗುಡ್ಡಗಳನ್ನ ಏರಿ ಇಳಿಯುವಾಗ ಒಂಚೂರು ಬ್ಯಾಲೆನ್ಸ್ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಇಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡವರು ಇದ್ದಾರೆ. ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವವರು ಇದ್ದಾರೆ.ಪ್ರಾಣ ಕಳೆದುಕೊಂಡವರು ಉಂಟು. ಕಳೆದ ಮೂರು ನಾಲ್ಕು ವರ್ಷಗಳಲ್ಲಿ 5ಕ್ಕೂ ಹೆಚ್ಚು ಜನರು ಪ್ರಾಣವನ್ನು ಕಳೆದುಕೊಂಡಿರುವ ನಿದರ್ಶನಗಳಿವೆ..ಆದರೆ, ಇಂತಹಾ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಮಕ್ಕಳನ್ನ ಕೂಡ ಹತ್ತಿಸುತ್ತಿರೋದು ಅನಾಹುತಕ್ಕೆ ಆಹ್ವಾನ ನೀಡುತ್ತಿರುವಂತಿದೆ. 

ಎಚ್ಚರಿಕೆ ನಾಮಫಲಕಗಳು ಇದ್ದರೂ ಡೋಂಟ್ ಕೇರ್ : 

ಘಾಟಿಯ ದಾರಿಯುದ್ಧಕ್ಕೂ ಅಲ್ಲಲ್ಲೇ ನೋ ಪಾರ್ಕಿಂಗ್ ಬೋರ್ಡ್(No parking board) ಕೂಡ ಇದೆ. ನೋ ಪಾರ್ಕಿಂಗ್ ಫಲಕದ ಬಳಿಯೇ ಅಡ್ಡಾದಿಡ್ಡಿ ವಾಹನಗಳನ್ನ ಪಾರ್ಕ್ ಮಾಡುವ ಪ್ರಯಾಣಿಕರು ಹೇಳೋರು-ಕೇಳೋರು ಇಲ್ಲದಂತೆ ವರ್ತಿಸುತ್ತಿದ್ದಾರೆ.ಅಲ್ಲದೆ ಘಾಟಿ ರಸ್ತೆ ಉದ್ದಕ್ಕೂ ಪ್ರವಾಸಿಗರು ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಆಂಬುಲೆನ್ಸ್ ಗಳಿಗೂ ಕೂಡ ದಾರಿ ಮಾಡಿಕೊಡದೆ ರೋಗಿಗಳ ಜೀವಕ್ಕೂ ಸಂಚುಕಾರ ತಂದೊಡುತ್ತಿದ್ದಾರೆ.

Charmadi Ghat: ನಾಪತ್ತೆಯಾಗಿದ್ದ ಚಾರಣಿಗ; ಚಾರ್ಮಾಡಿ ಅರಣ್ಯದಲ್ಲಿ ಪತ್ತೆ!

ಅಪಾಯದ ಸ್ಥಳಗಳಲ್ಲಿ ಪ್ರವಾಸಿಗರು, ಯುವಕ-ಯುವತಿಯರು, ಮಕ್ಕಳು ಜಾರುವ ಬಂಡೆ, ಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೋಜುಮಸ್ತಿ ಮಾಡ್ತಿದ್ದಾರೆ. ಏನಾದ್ರು ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಯಾರೆಂದು ಸ್ಥಳಿಯರು ಪ್ರಶ್ನಿಸಿದ್ದಾರೆ. ಹಾಗಾಗಿ, ಕೂಡಲೇ ಪೊಲೀಸರು ಚಾರ್ಮಾಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸೋ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ತುಂಬಾ ಇದೆ.