Chamarajanagar: ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ 20 ಸಾವಿರ ರೂ. ದಂಡ
ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಂದ ತಲಾ 10 ಸಾವಿರ ದಂಡ ವಸೂಲಿ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ಅಸನೂರು ಬಳಿ ನಡೆದಿದೆ.
ಚಾಮರಾಜನಗರ (ಜು.07): ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಂದ ತಲಾ 10 ಸಾವಿರ ದಂಡ ವಸೂಲಿ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ಅಸನೂರು ಬಳಿ ನಡೆದಿದೆ. ತೆಲಂಗಾಣ ನಿಜಾಂಪೇಟೆ ಮೂಲದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್ (31) ದಂಡ ಕಟ್ಟಿರುವ ಪ್ರವಾಸಿಗರು. ಬುಧವಾರ ಸಂಜೆ ಇವರಿಬ್ಬರು ಕಾರಿನಲ್ಲಿ ತೆರಳುವಾಗ ಆಸನೂರು ಬಳಿ ಆನೆ ನಿಂತಿದ್ದನ್ನು ಕಂಡು ಕಾಡಾನೆಯ ತೀರಾ ಸಮೀಪ ಹೋಗಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಗಮನಿಸಿ ಬಣ್ಣಾರಿ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಕಾರನ್ನು ಅಡ್ಡಹಾಕಿ ಇಬ್ಬರಿಗೂ ತಲಾ 10 ಸಾವಿರ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.
ಎನ್.ಆರ್.ಪುರ ಸಮೀಪ ಓಡಾಡುತ್ತಿರುವ ಕಾಡಾನೆ ಹಿಂಡು: ಮಳೆ ಕಡಿಮೆಯಾಗಿ ಭದ್ರಾ ಹಿನ್ನೀರು ಕಡಿಮೆಯಾದ ಪರಿಣಾಮ ಲಕ್ಕವಳ್ಳಿಯ ಭದ್ರಾ ವನ್ಯಜೀವಿ ವಲಯದಿಂದ ಕಾಡಾನೆಗಳ ಹಿಂಡು ಭದ್ರಾ ಹಿನ್ನೀರು ದಾಟಿ ಬರುತ್ತಿದ್ದು, ನರಸಿಂಹರಾಜಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರನ್ನು ಭಯ ಭೀತರನ್ನಾಗಿಸಿದೆ. ಕಳೆದ ನಾಲ್ಕಾರು ವರ್ಷದಿಂದಲೂ ಭದ್ರಾ ಹಿನ್ನೀರು ಭಾಗದ ಮುತ್ತಿನಕೊಪ್ಪ, ಕಡಹಿನಬೈಲು, ಹೊನ್ನೇಕೊಡಿಗೆ, ಬಾಳೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಕಾಡಾನೆಗಳು ಸಮೀಪದ ರೈತರ ಜಮೀನಿಗೆ ನುಗ್ಗಿ ಅಡಿಕೆ, ಭತ್ತ, ಬಾಳೆ, ತೆಂಗಿನ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಆದರೆ, ಈ ವರ್ಷ ಮಳೆ ಕಡಿಮೆಯಾದ ಪರಿಣಾಮವಾಗಿ ನರಸಿಂಹರಾಜಪುರ ಪಟ್ಟಣಕ್ಕೆ ಕೇವಲ 1 -2 ಕಿ.ಮೀ. ದೂರವಿರುವ ಹಿಳುವಳ್ಳಿ-ಲಿಂಗಾಪುರ ಗ್ರಾಮಗಳಿಗೆ ಕಾಡಾನೆಗಳ ಹಿಂಡು ನುಗ್ಗಿದ್ದು, ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ.
ಎತ್ತಿನಹೊಳೆ ಕಾಮಗಾರಿ ಸರ್ಕಾರ ಪೂರ್ಣಗೊಳಿಸಲಿದೆ: ವೀರಪ್ಪ ಮೊಯ್ಲಿ
15 ಆನೆಗಳ ಹಿಂಡು: ರಾತ್ರಿ ವಿಠಲ, ಮುದುಕೂರು ಗ್ರಾಮಗಳಿಗೆ ನುಗ್ಗಿ ಬಾಳೆ ತೋಟ ನಾಶ ಮಾಡಿತ್ತು. ನಂತರ ಪಟ್ಟಣ ಸಮೀಪದಲ್ಲೇ ಇರುವ ರಮೇಶ್, ಸಲೀಂ ಎಂಬುವರಿಗೆ ಸೇರಿದ ಅಡಿಕೆ ತೋಟ, ತೆಂಗಿನಮರ ನಾಶ ಮಾಡಿದೆ. ಮಂಗಳವಾರ ರಾತ್ರಿ ಪಟ್ಟಣದಿಂದ ಕೇವಲ 1 ಕಿ.ಮೀ. ದೂರವಿರುವ ಹಿಳುವಳ್ಳಿ ಗ್ರಾಮದ ರಾಘವೇಂದ್ರ ಎಂಬ ರೈತರಿಗೆ ಸೇರಿದ ಜಮೀನಿಗೆ ಆನೆಗಳ ಹಿಂಡು ನುಗ್ಗಿ 250 ಬಾಳೆ, 15ರಿಂದ 20 ಅಡಿಕೆ ಮರ ನಾಶ ಮಾಡಿ ಬೆಳಗಾಗುತ್ತಲೇ ಸಮೀಪದ ಕಾಡಿಗೆ ಹೋಗಿ ಅವಿತುಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಜಾಗೃತವಾದ ಅರಣ್ಯ ಇಲಾಖೆಯವರು ಎಲಿಫೆಂಟ್ ಟಾಸ್‌್ಕ ಫೋರ್ಸ್ ಕಳಿಸಿ ಆನೆಗಳು ಓಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ: ವಿಪಕ್ಷ ನಾಯಕನ ಆಯ್ಕೆ ಕುರಿತು ಸಿ.ಟಿ.ರವಿ ಹೇಳಿದ್ದೇನು?
ಕಳೆದ 1 ವಾರದಿಂದ ಮೂಡಿಗೆರೆಯಿಂದ ಎಲಿಫಂಟ್ ಟಾಸ್‌್ಕ ಫೋರ್ಸ್ ಅನ್ನು ನರಸಿಂಹರಾಜಪುರಕ್ಕೆ ಕರೆಸಲಾಗಿದ್ದು, ಈ ಪಡೆ ಇಲ್ಲೇ ಬೀಡುಬಿಟ್ಟಿದೆ. ಕಾಡಾನೆಗಳು ಗ್ರಾಮಕ್ಕೆ ಬಂದ ಸುದ್ದಿ ಸಿಕ್ಕಿದ ಕೂಡಲೇ ಅಲ್ಲಿ ಹೋಗಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಹಗಲು ಹೊತ್ತಿನಲ್ಲಿ ಕಾಡಲ್ಲೇ ಉಳಿಯುವ ಆನೆಗಳ ಗುಂಪು ರಾತ್ರಿ ಸಮಯದಲ್ಲಿ ಮತ್ತೆ ಯಾವುದಾದರೂ ಒಂದು ಗ್ರಾಮಕ್ಕೆ ನುಗ್ಗಿ ಅಡಿಕೆ, ಬಾಳೆ ತಿಂದು ಹಾಕುತ್ತಿದೆ. ಇದುವರೆಗೂ ಮನುಷ್ಯರಿಗೆ ಯಾವುದೇ ಹಾನಿ ಮಾಡಿಲ್ಲ. ಹಲಸಿನ ಹಣ್ಣಿನ ಸಮಯವಾಗಿದ್ದರಿಂದ ಕಾಡಾನೆಗಳು ಹಲಸಿನ ಹಣ್ಣಿಗಾಗಿಯೂ ನುಗ್ಗುತ್ತಿವೆ ಎನ್ನಲಾಗುತ್ತಿದೆ. ಒಂದು ರಾತ್ರಿ ಸಮಯದಲ್ಲಿ ಕನಿಷ್ಠ 25-30 ಕಿ.ಮೀ. ದೂರದವರಗೆ ಕಾಡಾನೆಗಳು ನಡೆದುಕೊಂಡು ಹೋಗುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.