ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ: ವಿಪಕ್ಷ ನಾಯಕನ ಆಯ್ಕೆ ಕುರಿತು ಸಿ.ಟಿ.ರವಿ ಹೇಳಿದ್ದೇನು?

ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿಯೂ ಈ ಪ್ರಶ್ನೆಗೆ ಉತ್ತರ ಇಲ್ಲ. ಗೊಂದಲ ಇಲ್ಲ, ಬಹಳ ಹುಡುಕಬೇಕಾದ ಸ್ಥಿತಿಯೂ ಇಲ್ಲ. ಇಬ್ಬರು ವೀಕ್ಷಕರು ಈಗಾಗಲೆ ಬಂದು ವರದಿ ತೆಗೆದೊಯ್ದಿದ್ದಾರೆ. ಬಹುಶಃ ಬೇರೆನಾದರು ಯೋಚನೆ ಇರಬಹುದೆಂದು ಎಂದು ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಸಿ.ಟಿ.ರವಿ ಹೇಳಿದರು.

CT Ravi Gave a Hint of a New Face for the position of BJP Opposition Leader gvd

ಚಿತ್ರದುರ್ಗ (ಜು.07): ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿಯೂ ಈ ಪ್ರಶ್ನೆಗೆ ಉತ್ತರ ಇಲ್ಲ. ಗೊಂದಲ ಇಲ್ಲ, ಬಹಳ ಹುಡುಕಬೇಕಾದ ಸ್ಥಿತಿಯೂ ಇಲ್ಲ. ಇಬ್ಬರು ವೀಕ್ಷಕರು ಈಗಾಗಲೆ ಬಂದು ವರದಿ ತೆಗೆದೊಯ್ದಿದ್ದಾರೆ. ಬಹುಶಃ ಬೇರೆನಾದರು ಯೋಚನೆ ಇರಬಹುದೆಂದು ಎಂದು ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಸಿ.ಟಿ.ರವಿ ಹೇಳಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸ್ಥಾನಕ್ಕೆ ಸಿ.ಟಿ ರವಿ ಹೊಸಮುಖದ ಸುಳಿವು ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದಿದ್ದಾರೆ. 

ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭದಿಂದಲೇ ಗೊಂದಲದಲ್ಲಿದೆ. ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆ ಎಲ್ಲರಿಗೂ ಫ್ರೀ ಎಂದಿದ್ದರು. ಈಗ ಗ್ಯಾರಂಟಿ ಯೋಜನೆಗೆ ಕಂಡಿಷನ್ಸ್ ಹಾಕ‌ ತೊಡಗಿದ್ದಾರೆ. ಬೆಲೆ ಏರಿಕೆ ಬರೆ ಹಾಕಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ವಿದ್ಯುತ್ ದರ ಏರಿಸುವ ಕೆಲಸ ಮಾಡಿದೆ. ಜನರ ಗಮನ ಡೈವರ್ಟ್ ಮಾಡಲು ಬೇರೆ ವಿಚಾರಗಳ ಮೊರೆ ಹೋಗಿದೆ. ಮೂಲ ಸೌಕರ್ಯದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಅಭಿವೃದ್ಧಿಯಲ್ಲೇ ಉದ್ಯೋಗ ಸಿಗುವುದು. ಮಾಜಿ ಸಿಎಂ ಎಚ್‌ಡಿ‌ಕೆಗೆ ನಾವು ಬೆಂಬಲಿಸಿದ್ದೇವೆ. 

ಸುಮ್ಮನೆ ಪೆನ್‌ಡ್ರೈವ್‌ ತೋರಿಸಬೇಡಿ, ಸಾಕ್ಷಿ ಕೊಡಿ: ಎಚ್‌ಡಿಕೆ ವಿರುದ್ಧ ಹರಿಹಾಯ್ದ ಸಚಿವ ಕೆ.ಜೆ.ಜಾರ್ಜ್‌

ಕಾಂಗ್ರೆಸ್ ಸರ್ಕಾರದ ವಿರುದ್ಧ ಆಧಾರವಿಟ್ಟುಕೊಂಡು ಮಾತಾಡ್ತಿದ್ದಾರೆ. ಆಧಾರ ಏನೆಂಬುದು ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಪಡಿಸಬೇಕು. ಬಿಜೆಪಿ ಹೊಡೆದಾಳುತ್ತದೆಂದು ಕಾಂಗ್ರೆಸ್, ಕಮುನಿಷ್ಟರು ಹೇಳುತ್ತಾರೆ. ಏಕರೂಪ ನಾಗರಿಕ ಸಂಹಿತೆ ಎಲ್ಲರನ್ನೂ ಒಂದಾಗಿ ಕಾಣುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನೇಕೆ ವಿರೋಧಿಸುತ್ತಾರೆ ಎಂದರು. ಸಿಎಂ ಸಿದ್ಧರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ, ಆರ್.ಅಶೋಕ್ ಭೇಟಿ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಸಹಜವಾಗಿ ಮುಖಾಮುಖಿ ಆಗುವುದು ಅಪರಾಧ ಅಲ್ಲ. 

ಏಕವಚನದಲ್ಲಿ ಎಚ್‌.ಡಿ.ಕುಮಾರಸ್ವಾಮಿ-ಚೆಲುವರಾಯಸ್ವಾಮಿ ಕಿತ್ತಾಟ

ಮತಾಂತರ ಪಿಡುಗು ಹಿಂದೂ ಸಮಾಜಕ್ಕೆ ಗೆದ್ದಲು ಹುಳುವಿನ ರೀತಿ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕುಟುಂಬ ಜೀವಂತ ಉದಾಹರಣೆ. ಬಲವಂತದ ಮತಾಂತರವನ್ನು ನಮ್ಮ ಸರ್ಕಾರ ನಿಷೇಧಿಸಿತ್ತು. ಕಾಂಗ್ರೆಸ್ ಸರ್ಕಾರ ಮೋಸ, ಆಮಿಷದ ಮತಾಂತರ ಸರಿ ಎನ್ನುತ್ತದೆಯೇ ಉತ್ತರಿಸಲಿ.ಎಲ್ಲಾ ಸಮುದಾಯದ ಮುಖಂಡರು, ಮಠಾಧೀಶರು ಚರ್ಚಿಸಬೇಕು. ಮಹಾ ಪಂಚಾಯತಿಯನ್ನೇ ಕರೆದು ಚರ್ಚಿಸಬೇಕಾಗುತ್ತದೆ. ಎಲ್ಲಾ ಜನ ಮತಾಂತರ ಆದರೆ ಮಠಕ್ಕೆ ಹೋಗುವವರು ಯಾರು ಎಂದು ಹೇಳಿದರು.

Latest Videos
Follow Us:
Download App:
  • android
  • ios