ಆಪ್‌ ಆಡಳಿತ ಭ್ರಷ್ಟಾಚಾರಕ್ಕೆ ಬಳಸುತ್ತಿದೆ, ಕೇಜ್ರಿವಾಲ್‌ ಬಗ್ಗೆ ನನಗೆ ತೀವ್ರ ನಿರಾಶೆಯಾಗಿದೆ: ಸಂತೋಷ್ ಹೆಗ್ಡೆ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಗ್ಗೆ ನಾನು ನಿರಾಶನಾಗಿದ್ದೇನೆ. ಈ ಹಿಂದೆ ಅಣ್ಣಾ ಹಜಾರೆ ಅವರು ಭಾರತದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು. ಅದಕ್ಕೆ ನಾನು ಹಾಗೂ ಕೇಜ್ರಿವಾಲ್‌ ಸಾಥ್‌ ನೀಡಿದ್ದೆವು. ಆದರೆ  ಈಗ ಭ್ರಷ್ಟಾಚಾರವೇ ತೀವ್ರ ಗಮನ ಸೆಳೆಯುತ್ತಿದೆ ಎಂದು ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.

Totally disappointed with Arvind Kejriwal  says Former Supreme Court Judge N Santosh Hegde  gow

ಬೆಂಗಳೂರು (ಮಾ.23): ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಗ್ಗೆ ನಾನು ನಿರಾಶನಾಗಿದ್ದೇನೆ. ಈ ಹಿಂದೆ ಅಣ್ಣಾ ಹಜಾರೆ ಅವರು ಭಾರತದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು. ಅದಕ್ಕೆ ನಾನು ಹಾಗೂ ಕೇಜ್ರಿವಾಲ್‌ ಸಾಥ್‌ ನೀಡಿದ್ದೆವು. ಅವರ ಹೋರಾಟಕ್ಕೆ ಸಾಥ್‌ ನೀಡಿದ್ದ ಕೇಜ್ರಿವಾಲ್‌ ಉತ್ತಮ ಆಡಳಿತ ನೀಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ಆಡಳಿತದಲ್ಲಿ ಈಗ ಭ್ರಷ್ಟಾಚಾರವೇ ತೀವ್ರ ಗಮನ ಸೆಳೆಯುತ್ತಿದೆ. ಅಧಿಕಾರ ಹಾಗೂ ದುರಾಸೆ ಕೇಜ್ರಿವಾಲ್‌ರನ್ನು ಹಿಂದಿಕ್ಕುತ್ತದೆ ಎಂಬುದು ಅವರ ಪ್ರಕರಣದಿಂದ ಸಂಪೂರ್ಣವಾಗಿ ತಿಳಿಯುತ್ತಿದೆ. ಆಪ್ ಆಡಳಿತವು ಅಧಿಕಾರವನ್ನು ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ಬಳಸುತ್ತಿದೆ ಎಂದು ಕರ್ನಾಟಕ ಮಾಜಿ ಲೋಕಾಯುಕ್ತ ನ್ಯಾ। ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಕೇಜ್ರಿವಾಲ್‌ ಸಿಎಂ ಮುಂದುವರಿಕೆ ಸಂವಿಧಾನಕ್ಕೆ ಅವಮಾನ, ರಾಜೀನಾಮೆಗೆ ಆಗ್ರಹ
ನವದೆಹಲಿ: ಬಂಧನ ಆದ ನಂತರವೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡದೇ ಜೈಲಿನಿಂದ ಸರ್ಕಾರ ನಡೆಸುವುದು ಕಾನೂನು, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಪತ್ನಿ ಸುನಿತಾಗೆ ಕೇಜ್ರಿವಾಲ್‌ ಉತ್ತರಾಧಿಕಾರಿ ಪಟ್ಟ? ಸಿಎಂ ರೇಸ್‌ನಲ್ ...

ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕೇಜ್ರಿವಾಲ್ ತಮ್ಮನ್ನು ಕಾನೂನಿಗಿಂತ ಹೆಚ್ಚು ಎಂದು ಪರಿಗಣಿಸುತ್ತಾರೆಯೇ, ಅವರು ಕೂಡಲೇ ಹುದ್ದೆ ಬಿಡಬೇಕು ಎಂದು ಕಿಡಿಕಾರಿದರು.

ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರತಿಕ್ರಿಯಿಸಿ, ಹಗರಣದ ವಿಷಯದಲ್ಲಿ ಎಎಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು ಜೈಲಿಗೆ ಹೋಗುತ್ತಾರೆ ಎಂದರು. ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗೆ ನೀಡಿದ ಬೆಂಬಲವನ್ನು ಕಳ್ಳರ ನಡುವಿನ ಸಹೋದರತ್ವದ ಪ್ರದರ್ಶನ ಎಂದೂ ವ್ಯಂಗ್ಯವಾಡಿದರು.

ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ಕಿಂಗ್‌ಪಿನ್‌: ಕೋರ್ಟ್‌ಗೆ ಇ.ಡಿ. ವರದಿ

ಬಂಧನದ ಕಾರಣ ಸಿಎಂ ಹುದ್ದೆಯಿಂದ ವಜಾ ಮಾಡಬೇಕೆಂದು ಅರ್ಜಿ
ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ ಬಂಧಿತನಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಪದವಿಯಿಂದ ವಜಾ ಮಾಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಾಗಿದೆ.

ಸುರ್ಜಿತ್‌ ಸಿಂಗ್‌ ಯಾದವ್‌ ಎನ್ನುವವರು ಸಲ್ಲಿಸಿರುವ ಅರ್ಜಿಯಲ್ಲಿ, ‘ಕೇಂದ್ರ ಸರ್ಕಾರ, ದೆಹಲಿ ರಾಜ್ಯ ಸರ್ಕಾರ ಮತ್ತು ದೆಹಲಿ ಉಪರಾಜ್ಯಪಾಲರ ಕಾರ್ಯದರ್ಶಿಯು ಅರವಿಂದ್‌ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆದಿರುವುದರ ಕುರಿತು ಸ್ಪಷ್ಟೀಕರಣ ನೀಡಬೇಕು ಮತ್ತು ಅವರನ್ನು ಮುಖ್ಯಮಂತ್ರಿ ಪದವಿಯಿಂದ ತೆರವು ಮಾಡಬೇಕು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Latest Videos
Follow Us:
Download App:
  • android
  • ios