ಐದು ಗ್ಯಾರಂಟಿ ಖುಷಿ ನಡುವೆ ಜನತೆಗೆ ಟೊಮೆಟೊ ದರ ಶಾಕ್: ನೂರರ ಸನಿಹಕ್ಕೆ 1 ಕೆ.ಜಿ ಟೊಮೆಟೊ
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಖುಷಿ ನಡುವೆ ಟೊಮೆಟೊ ದರ ಏರಿಕೆಯಾಗಿದ್ದು ಜನತೆಗೆ ಶಾಕ್ ಕೊಟ್ಟಂತಾಗಿದೆ. ಹೌದು! ಟೊಮೆಟೊ ದರ ನೂರು ರೂಪಾಯಿ ಸನಿಹಕ್ಕೆ ಏರಿಕೆಯಾಗಿದ್ದು, 15 Kg ಟೊಮೆಟೊ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ.
ಬೆಂಗಳೂರು (ಜೂ.25): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಖುಷಿ ನಡುವೆ ಟೊಮೆಟೊ ದರ ಏರಿಕೆಯಾಗಿದ್ದು ಜನತೆಗೆ ಶಾಕ್ ಕೊಟ್ಟಂತಾಗಿದೆ. ಹೌದು! ಟೊಮೆಟೊ ದರ ನೂರು ರೂಪಾಯಿ ಸನಿಹಕ್ಕೆ ಏರಿಕೆಯಾಗಿದ್ದು, 15 Kg ಟೊಮೆಟೊ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ. ಅಲ್ಲದೇ ಇನ್ನೆರಡು ದಿನದಲ್ಲಿ ಟಮೋಟಾ ದರ ಗಗನಕ್ಕೆ ಏರಲಿದೆ. ಇತರೆ ರಾಜ್ಯಗಳಲ್ಲಿ ಭಾರಿ ಮಳೆಯಿಂದಾಗಿ ಟೊಮೆಟೊ ಬಾಂಗ್ಲಾ ದೇಶಕ್ಕೆ ರಫ್ತು ಮಾಡಲಾಗುತ್ತಿದೆ.
ಇದೇ ಮೊದಲ ಬಾರಿಗೆ ರಾಜ್ಯದ ಟೊಮೆಟೊ ಬಾಂಗ್ಲಾಕ್ಕೆ ರಫ್ತು ಆಗುತ್ತಿದ್ದು, ರಾಜ್ಯದಲ್ಲಿ ಟೊಮೆಟೊ ದರ ಏರಿಕೆಯಾಗಿದೆ. ಕೋಲಾರದಿಂದ ಹೊರರಾಜ್ಯಗಳಿಗೆ ರಫ್ತು ಹೆಚ್ಚಾಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಟೊಮೆಟೊಗೆ ಭಾರೀ ಡಿಮ್ಯಾಂಡ್ ಇದೆ. ಇದರಿಂದ ಬೆಂಗಳೂರಿಗೆ ಬಿಸಿ ತಟ್ಟಿದ್ದು, ಟೊಮೆಟೊ ಖರೀದಿ ಮಾಡಲು ಜನರು ಹಿಂದೇಟು ಹಾಕ್ತಿದ್ದಾರೆ. ಇನ್ನು ನಿನ್ನೆ ಟೊಮೆಟೊ ದರ ಕೆಜಿಗೆ 50 ರಿಂದ 60 ರೂಪಾಯಿಯಿದ್ದು, ಇವತ್ತು 70-80 ರೂಪಾಯಿ ಪ್ರತಿ ಕೆಜಿಗೆ ಇದೆ.
ಹಾವೇರಿ ಸಂಸತ್ ಟಿಕೆಟ್‌ಗೆ ಪುತ್ರ ಆಕಾಂಕ್ಷಿ: ಕೆ.ಎಸ್.ಈಶ್ವರಪ್ಪ
ಟೊಮೆಟೋ ಬೆಳೆ ರಕ್ಷಣೆಗೆ ತಜ್ಞರ ಸಲಹೆ: ಸತತ ಮಳೆಯಾಗುವ ಸಂದರ್ಭದಲ್ಲಿ ಟೊಮೊಟೋ ಬೆಳೆಗೆ ನೈಟ್ರೋಜನ್ ಗೊಬ್ಬರ ನೀಡುವುದರಿಂದ ಅಂಗಮಾರಿ, ಎಲೆ ಚುಕ್ಕಿ ರೋಗ ತೀವ್ರತೆ ಜಾಸ್ತಿ ಆಗಬಹುದೆಂದು ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಸ್.ಅನಿಲ್‌ಕುಮಾರ್ ಎಚ್ಚರಿಸಿದ್ದಾರೆ. ಟೊಮೊಟೊ ಬೆಳೆಯಲ್ಲಿ ವಿಲ್ಟ್ ತೊಂದರೆಯಿದ್ದಲ್ಲಿ ಮಳೆ ನೀರು ಹರಿದರೆ ರೋಗವು ಹರಡುವ ಸಾಧ್ಯತೆಗಳಿದ್ದು ಇದಕ್ಕೆ ಬ್ಯಾಕ್ಟೀರಿಯಾ ನಾಶಕ ಬುಡಕ್ಕೆ ಹಾಕುವುದು, ಮಳೆಗಾಲದಲ್ಲಿ ಔಷಧ ಸಿಂಪಡಣೆ ಮಾಡುವಾಗ ಗಮ್ ಬಳಸುವುದು.
6-2 ಅಡಿ ಅಂತರದಲ್ಲಿ ಟಮೋಟೊ ಬೆಳೆಗೆ ಹಾಕುವುದು, ಗೊಬ್ಬರ ಡ್ರಿಪ್‌ನಲ್ಲಿ ಕೊಡಲು ಸಾಧ್ಯವಿಲ್ಲದಿದ್ದಾಗ ಸೂಕ್ಷ್ಮ ಪೋಷಕಾಂಶಗಳಾದ ಕ್ಯಾಲ್ಸಿಯಂ, ಸಲರ್, ಮೆಗ್ನೀಷಿಯಂ, ಬೋರಾನ್, ಜಿಂಕ್, ಐರನ್ ಸಿಂಪಡಣೆ ಮಾಡಬೇಕಿದೆ. ಮಳೆ ನೀರನ್ನು ಜಮೀನಿನಲ್ಲಿ ನಿಲ್ಲದಂತೆ ಕ್ರಮವಹಿಸುವುದು ಸೇರಿ ಹಲವು ಕ್ರಮಗಳನ್ನು ಅನುಸರಿಸಿದಲ್ಲಿ ಟೊಮೊಟೊ ಬೆಳೆಯಲ್ಲಿ ಕಂಡುಬರುವ ಸಮಸ್ಯೆ, ರೋಗ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದ್ದಾರೆ.
ಗ್ರಾಹಕರ ಜೇಬು ಸುಡುತ್ತಿದೆ ತರಕಾರಿ ಬೆಲೆ: ತರಕಾರಿ ಅಭಾವ ನಗರದಲ್ಲಿ ಒಂದೇ ವಾರದಲ್ಲಿ ಮತ್ತೆ ಕಾಯಿಪಲ್ಲೆಗಳ ದರ ಗಗನಕ್ಕೇರುವಂತೆ ಮಾಡಿದೆ. ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರ ದುಪ್ಪಟ್ಟಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಇತ್ತೀಚೆಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ತರಕಾರಿ ಕೊಳೆತಿರುವುದು ಪೂರೈಕೆ ತೀರಾ ಕಡಿಮೆಯಾಗಿದೆ. ಹೀಗಾಗಿ ಕೆ.ಆರ್.ಮಾರ್ಕೆಟ್, ಯಶವಂತಪುರ, ಮಲ್ಲೇಶ್ವರ, ಜಯನಗರ ಮಾರುಕಟ್ಟೆಗಳಲ್ಲಿ ದರ ಹೆಚ್ಚಿದೆ.
ನನ್ನ ರಾಜಕೀಯ ಜೀವನದ 2ನೇ ಇನ್ನಿಂಗ್ಸ್ ಶುರು: ಜಗದೀಶ್ ಶೆಟ್ಟರ್
ಕಳೆದ ವಾರ ಒಂದು ಕೇಜಿಗೆ . 40 ಇದ್ದ ಬದನೇಕಾಯಿ ಹಾಗೂ ಮೆಣಸಿನಕಾಯಿ ದರ ಸೋಮವಾರ . 80 ತಲುಪಿತ್ತು. ಬಟಾಣಿ . 100ರಿಂದ . 150 ಗೆ ಏರಿಕೆಯಾಗಿದೆ. ಅದೇ ರೀತಿ ಬೀನ್ಸ್ ಹಾಗೂ ನುಗ್ಗಿಕಾಯಿ ಕಳೆದ ವಾರದಂತೆ . 100-120 ದರದಲ್ಲೇ ಮುಂದುವರಿದಿದೆ. ಕ್ಯಾರೆಟ್ ಕಳೆದ ವಾರಕ್ಕಿಂತ . 20 ಕಡಿಮೆಯಾಗಿ . 80 ಮಾರಾಟವಾಗಿದೆ. ಲಿಂಬು ದರ ಕೂಡ ಹೆಚ್ಚಾಗಿದೆ. ಬೆಳ್ಳುಳ್ಳಿ, ಬೀಟ್ರೂಟ್, ಆಲೂಗಡ್ಡೆ, ಹಾಗಲ ಕಾಯಿ, ಟೊಮೆಟೋ ದರ . 5-.10 ನಷ್ಟುಹೆಚ್ಚಾಗಿದೆ.