Asianet Suvarna News Asianet Suvarna News

Karnataka Rains Effect: 100 ರ ಗಡಿಗೆ ತಲುಪಿದ ಟೊಮೆಟೋ ಬೆಲೆ..!

*   ಆಲಿಕಲ್ಲು ಮಳೆಯಿಂದ ಹಾಳಾದ ತರಕಾರಿ
*  ಮಾರುಕಟ್ಟೆಗೆ ತರಕಾರಿ ಪೂರೈಕೆ ಕುಸಿತ
*  ಮಳೆ ಮುಂದುವರಿದರೆ ಮತ್ತಷ್ಟು ಬೆಲೆ ಏರಿಕೆ?
 

Tomato Price Likely Crosses 100 Rs Per KG Due to Rain in Karnataka grg
Author
Bengaluru, First Published May 12, 2022, 4:46 AM IST

ಬೆಂಗಳೂರು(ಮೇ.12):  ರಾಜ್ಯದ(Karnataka) ವಿವಿಧ ಭಾಗಗಳಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಆಲಿಕಲ್ಲು ಸಹಿತ ಮಳೆಯಿಂದ(Rain) ಟೊಮೆಟೋ ಬೆಳೆ ಹಾಳಾಗಿರುವ ಪರಿಣಾಮ ಪ್ರತಿ ಕೆ.ಜಿ. ಟೊಮೆಟೋ ಬೆಲೆ 80-95ಕ್ಕೆ ಏ​ರಿಕೆಯಾಗಿದೆ.

ಮಳೆಯಿಂದಾಗಿ ಅನೇಕ ದಿನಗಳಿಂದ ಪ್ರತಿ ಕೆ.ಜಿಗೆ .60-70 ಇದ್ದ ಟೊಮೆಟೋ(Tomato) ಬೆಳೆ ಈಗ ಇನ್ನಷ್ಟು ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಬೆಲೆ 100 ದಾಟಬಹುದು ಎಂದು ಹೇಳಲಾಗಿದೆ.

10 ಇದ್ದ ಟೊಮೆಟೋ ಭಾರೀ ದುಬಾರಿ: ಬೆಲೆ ಕೇಳಿ ದಂಗಾದ ಗ್ರಾಹಕ..!

ಕಳೆದ ವಾರ ಆನೇಕಲ್‌, ಹೊಸಕೋಟೆ ಮತ್ತಿತರ ಕೆಲವೆಡೆ ಆಲಿಕಲ್ಲು ಸಹಿತ ಬಿದ್ದ ಮಳೆಯಿಂದ ಟೊಮೆಟೋ ಬೆಳೆ ಸಾಕಷ್ಟು ಹಾನಿಯಾಗಿತ್ತು. ಹೀಗಾಗಿ ಮಾರುಕಟ್ಟೆಗೆ(Market) ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಈ ನಡುವೆ ಮದುವೆ, ಗೃಹ ಪ್ರವೇಶ, ಊರ ಹಬ್ಬ, ಜಾತ್ರೆ ಇತ್ಯಾದಿಗಳು ನಡೆಯುತ್ತಿರುವುದರಿಂದ ಎಲ್ಲೆಡೆ ಅನ್ನ ದಾಸೋಹಗಳು ನಡೆಯುತ್ತಿವೆ. ಹೋಟೆಲ್‌ಗಳು ಕೂಡ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿವೆ. ಹೀಗಾಗಿ, ಅಡುಗೆಗೆ ಟೊಮೆಟೋ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿರುವುದರಿಂದ ಬೆಲೆಗಳು ಏರಿಕೆಯಾಗಿವೆ.

ಹಾಪ್‌ಕಾಮ್ಸ್‌ನಲ್ಲಿ ಪ್ರತಿ ಕೆ.ಜಿ ಟೊಮೆಟೊಗೆ 75ಕ್ಕೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಸುಮಾರು .70 ರಿಂದ 80 ರವರೆಗೂ ವ್ಯಾಪಾರವಾಗುತ್ತಿದೆ. ಆದರೆ, ಆನ್‌ಲೈನ್‌ನಲ್ಲಿ ಉತ್ತಮ ಗುಣಮಟ್ಟದ ಟೊಮೆಟೋ ಬೆಲೆ .95 ರವರೆಗೆ ಮಾರಾಟವಾಗುತ್ತಿದೆ.

Tomato Price: 10ಕ್ಕೆ ಇಳಿದ ಕೇಜಿ ಟೊಮೆಟೋ: ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ

ರಾಜ್ಯದಲ್ಲಿ ಮಳೆಯಿಂದಾಗಿ ಟೊಮೆಟೋ ಬೆಳೆ ನೆಲ ಕಚ್ಚಿದೆ. ಹೀಗಾಗಿ ಮಹಾರಾಷ್ಟ್ರದಿಂದ(Maharshtra) ಪ್ರತಿ ದಿನ ಟೊಮೆಟೋ ರಾಜ್ಯಕ್ಕೆ ಬರುತ್ತಿದೆ. ಪ್ರತಿ ದಿನ 15 ಲೋಡ್‌ ಬರುತ್ತಿತ್ತು. ಇದೀಗ 12 ಲೋಡ್‌ ಮಾತ್ರ ಬರುತ್ತಿದ್ದು, ಸಗಟು ವ್ಯಾಪಾರದಲ್ಲಿ(Business) 22 ಕೆ.ಜಿ.ಯ ಟೊಮೆಟೋ ಬಾಕ್ಸ್‌ಗೆ .1100ಕ್ಕೆ ಮಾರಾಟವಾಗುತ್ತಿದೆ. ಆದರೆ ವ್ಯಾಪಾರಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದರು.

90ಕ್ಕೆ ಏರಿದ ಬೀನ್ಸ್‌

ಟೊಮೆಟೋ ಜತೆಗೆ ಬೀನ್ಸ್‌, ಕ್ಯಾರೆಟ್‌, ಹಸಿ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳ ದರದಲ್ಲಿ ಏರಿಳಿಕೆಯಾಗಿದೆ. ಬೀನ್ಸ್‌ ದರ ಕೆ.ಜಿ.ಗೆ .90ಕ್ಕೆ ತಲುಪಿದೆ.

ಹಾಪ್‌ಕಾಮ್ಸ್‌ನಲ್ಲಿ ತರಕಾರಿ ದರ

ಟೊಮೆಟೋ .75
ಬೀನ್ಸ್‌ .94
ಹಾಗಲಕಾಯಿ .87
ಕ್ಯಾರೆಟ್‌ .67
ಏಲಕ್ಕಿ ಬಾಳೆ .70
ಬಿಳಿ ಬದನೆಕಾಯಿ .46
ಹಾಗಲಕಾಯಿ .54
ದಪ್ಪ ಮೆಣಸಿನಕಾಯಿ .75
ಹಸಿಮೆಣಸಿನಕಾಯಿ/ಬಜ್ಜಿ ಮೆಣಸಿನಕಾಯಿ .75
ಎಲೆಕೋಸು .20
ನುಗ್ಗೆಕಾಯಿ .44
ಮೂಲಂಗಿ .32
 

Follow Us:
Download App:
  • android
  • ios