*  ಮಾರುಕಟ್ಟೆಗೆ ಹೆಚ್ಚಿದ ಟೊಮೆಟೋ ಪೂರೈಕೆ: ದರದಲ್ಲಿ ಭಾರೀ ಇಳಿಕೆ* 30ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೋ ಈಗ 10ರಿಂದ 15ಕ್ಕೆ ಮಾರಾಟ*  ಗ್ರಾಮೀಣ ಪ್ರದೇಶದಿಂದ ಲಾರಿಗಟ್ಟಲೇ ಮಾರುಕಟ್ಟೆಗೆ ಪೂರೈಕೆ ಹಿನ್ನೆಲೆ 

ಶಂಕರ್‌.ಎನ್‌.ಪರಂಗಿ

ಬೆಂಗಳೂರು(ಫೆ.17): ಉತ್ತಮ ಮಳೆಯಿಂದ(Rain) ಹೆಚ್ಚಾದ ಇಳುವರಿ, ರಫ್ತು ಪ್ರಮಾಣ ಕುಸಿತದ ಪರಿಣಾಮ ಮಾರುಕಟ್ಟೆಗಳಿಗೆ ಸಿಕ್ಕಾಪಟ್ಟೆ ಪೂರೈಕೆ ಅಗುತ್ತಿದೆ. ಇದರಿಂದ ಟೊಮೆಟೋ(Tomato) ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಎರಡು ವಾರಗಳ ಹಿಂದೆ ಕೇಜಿಗೆ 30 ಮಾರಾಟವಾಗುತ್ತಿದ್ದ ಟೊಮೆಟೋ ಈಗ 10ರಿಂದ 15ಕ್ಕೆ ಮಾರಾಟವಾಗುತ್ತಿದೆ. ನಗರದ ಮಾರುಕಟ್ಟೆಗಳಿಗೆ ಕೋಲಾರ(Kolar), ಚಿಂತಾಮಣಿ, ಚಿಕ್ಕಬಳ್ಳಾಪುರ, ರಾಮನಗರ, ಶ್ರೀನಿವಾಸಪುರ, ಮಾಲೂರು, ಹೊಸಕೋಟೆ, ಶಿರಾ, ತುಮಕೂರು, ಶಿಡ್ಲಘಟ್ಟ, ಮುಳಬಾಗಿಲು ಮತ್ತಿತರ ಗ್ರಾಮೀಣ ಪ್ರದೇಶಗಳಿಂದ ಲಾರಿಗಟ್ಟಲೇ ಪೂರೈಕೆ ಆಗುತ್ತಿದೆ. ಇದರಿಂದ ಟೊಮೆಟೋ ದರ ಸಿಕ್ಕಾಪಟ್ಟೆ ಇಳಿಕೆಯಾಗಿದೆ.

ಎರಡು ವಾರದ ಹಿಂದಷ್ಟೇ ಕೇಜಿಗೆ .30ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೋ ಬುಧವಾರ ನಾಟಿ .10 ಮತ್ತು ಹೈಬ್ರೀಡ್‌ .15ಕ್ಕೆ ಮಾರಾಟವಾಗಿದೆ. ಟೊಮೆಟೋ ಸಗಟು ಕೇಜಿಗೆ ನಾಟಿ .5 ಇದ್ದು, ಹೈಬ್ರೀಡ್‌(Hybrid) ಸಗಟು ದರ .7-9ಕ್ಕೆ ಏರಿದೆ. ಆದರೆ ಚಿಲ್ಲರೆ ದರ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ ಎನ್ನುತ್ತಾರೆ ತರಕಾರಿ ವರ್ತಕ ತರುಣ್‌.

Kolar Tomato Crops : ರೈತರೇ ಟೊಮೆಟೋ ಪುನಃ ಪುನಃ ಬೆಳೆಯಬೇಡಿ

ಕಡಿಮೆಯಾದ ಟೊಮೆಟೋ ರಫ್ತು:

ರಾಜ್ಯಕ್ಕೆ(Karnataka) ತರಕಾರಿಗಳನ್ನು(Vegetable) ಪೂರೈಸುವ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ನೆರೆರಾಜ್ಯಗಳಲ್ಲೂ ಇಂಥದ್ದೆ ಪರಿಸ್ಥಿತಿ ನಿರ್ಮಾಣವಾಗಿದೆ. ಆ ರಾಜ್ಯಗಳಲ್ಲೂ ಸಹ ಟೊಮೆಟೋ ಹೆಚ್ಚು ಬೆಳೆಯಲಾಗಿದೆ. ಇದರಿಂದ ರಾಜ್ಯಗಳ ನಡುವೆ ಟೊಮೆಟೋ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಎಲ್ಲ ಉತ್ಪನ್ನವನ್ನು ಆಯಾ ಸ್ಥಳಿಯ ಮಾರುಕಟ್ಟೆಗಳಲ್ಲೇ ಮಾರಾಟವಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಸಹ ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದೆ.

ಮೆಣಸಿನಕಾಯಿ ದುಬಾರಿ

ಮಳೆಗಾಲದಲ್ಲಿ(Rainy Season) ಬಯಲು ಸೀಮೆ ಮತ್ತು ಮಹಾರಾಷ್ಟ್ರ, ಬಿಜಾಪುರ, ರಾಯಚೂರು, ಚಿತ್ರದುರ್ಗ, ಶಿರಾ, ತುಮಕೂರಿನ ಕೆಲವು ಭಾಗದಿಂದ ಮೆಣಸಿನಕಾಯಿ ಪೂರೈಕೆಯಾಗುತ್ತಿತ್ತು. ಇದೀಗ ಬೇಸಿಗೆ ಹಿನ್ನೆಲೆ ಕೇವಲ ನೀರಾವರಿ ಪ್ರದೇಶದ ರೈತರು ಹಸಿ ಮೆಣಸಿನಕಾಯಿ ಬೆಳೆದಿದ್ದಾರೆ. ಹೀಗಾಗಿ ಹಸಿ ಮೆಣಸಿನಕಾಯಿ ದಿನಗಳ ಹಿಂದೆ .60 ಆಸುಪಾಸಿಗೆ ಸಿಗುತ್ತಿತ್ತು. ಇದೀಗ .70-90ರಷ್ಟಕ್ಕೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದರು.

Vegetable Price in Chennai : ನಗರದಲ್ಲಿ ಕೈ ಸುಡುತ್ತಿದೆ ಟೊಮೆಟೋ ಬೆಲೆ

ನೀರಾವರಿ ಭಾಗದ ರೈತರು ಹೆಚ್ಚೆಚ್ಚು ಟೊಮೆಟೋ ಬೆಳೆದ ಹಿನ್ನೆಲೆಯಲ್ಲಿ ದಾಸನಪುರ ಮಾರುಕಟ್ಟೆಯೊಂದಕ್ಕೆ ನಿತ್ಯ ಸುಮಾರು 200 ಲೋಡ್‌ ಬರುತ್ತಿದೆ. ರಾಜ್ಯದಿಂದ ಬೇರೆಡೆಗೆ ಹೆಚ್ಚು ರಫ್ತಾಗದ ಟೊಮೆಟೋ ಸಗಟು ಪ್ರತಿ ಕೇಜಿಗೆ .5-7ಗೆ ಮಾರಾಟವಾಗುತ್ತಿದೆ. ಇನ್ನು ಕೆಲ ದಿನಗಳು ಹೀಗೆ ಮುಂದುವರಿಯಲಿದ್ದು, ಟೊಮೆಟೋ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಅಂತ ದಾಸನಪುರ ಎಪಿಎಂಸಿ ಕೆಂಪೇಗೌಡ ಮಾರುಕಟ್ಟೆ ವರ್ತಕ ಗೋವಿಂದಪ್ಪ ತಿಳಿಸಿದ್ದಾರೆ.
ದರಪಟ್ಟಿ(.ಕೆ.ಜಿಗೆ)

ತರಕಾರಿ ಹಾಪ್‌ಕಾಮ್ಸ್‌ ಚಿಲ್ಲರೆ

ಟೊಮೆಟೋ 20 13-15
ನಾಟಿ ಟೊಮೆಟೋ 16 10
ಕ್ಯಾರೆಟ್‌ 94 70-90
ಹಸಿಮೆಣಸಿನಕಾಯಿ 108 70-90

ಟೊಮೊಟೋ ಬೆಲೆ ದಿಢೀರ್‌ ಭಾರೀ ಕುಸಿತ

ಬೆಂಗಳೂರು: ಮಹಾರಾಷ್ಟ್ರದಿಂದ (Maharashtra) ಟೊಮೆಟೋ (tomato) ನಗರಕ್ಕೆ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಶತಕ ದಾಟಿದ್ದ ಟೊಮೆಟೋ ಬೆಲೆ (Price) ಇದೀಗ ದಿಢೀರ್‌ ಇಳಿಕೆ ಕಂಡಿದೆ. ಕಳೆದ ವರ್ಷದ ನ.29 ರಂದು ಕೇಜಿಗೆ .110ರಿಂದ .125ರವರೆಗೂ ಇದ್ದ ಬೆಲೆ 40 ರು. ಕ್ಕೆ ತಲುಪಿತ್ತು. ಇತ್ತೀಚೆಗೆ ನಿರಂತರ ಮಳೆಯಿಂದಾಗಿ (Heavy Rain) ಬೆಳೆ ನಷ್ಟ ಉಂಟಾಗುವುದರ ಜೊತೆಗೆ ರೋಗ ಬಾಧೆಯೂ ಕಾಡಿದ್ದರಿಂದ ಮಾರುಕಟ್ಟೆಗೆ (market) ಸರಬರಾಜಾಗುತ್ತಿದ್ದ ತರಕಾರಿ (vegetable) ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿ ಬೆಲೆಯಲ್ಲಿ ಬಹಳಷ್ಟು ಹೆಚ್ಚಾಗಿತ್ತು. ಆದರೆ ಮೂರ್ನಾಲ್ಕು ದಿನದಿಂದ ಮಳೆ ಬಾರದೇ ಇರುವುದರಿಂದ ಬೆಳೆಯು ಬಂದಿದೆ. ಜೊತೆಗೆ ಮಹಾರಾಷ್ಟ್ರದಿಂದ ಸಹ ಟೊಮೆಟೋ ಪೂರೈಕೆ ಆಗುತ್ತಿರುವುದರಿಂದ ಬೆಲೆ ಸ್ವಲ್ಪ ಇಳಿಕೆಯಾಗಿದೆ.