10 ಇದ್ದ ಟೊಮೆಟೋ ಭಾರೀ ದುಬಾರಿ: ಬೆಲೆ ಕೇಳಿ ದಂಗಾದ ಗ್ರಾಹಕ..!

*  ಬೆಲೆ ಈಗ 70ಗೆ ಏರಿಕೆ
*  3 ತಿಂಗಳ ಹಿಂದೆ ಕನಿಷ್ಠ ದರಕ್ಕೆ ಕುಸಿದಿದ್ದ ಬೆಲೆ
*  ಮಳೆಯಿಂದಾಗಿ ಬೆಳೆ ಹಾನಿ ಪೂರಕೈ ಇಳಿಕೆ
 

Tomato Price Rise in Bengaluru grg

ಬೆಂಗಳೂರು(ಮೇ.03): ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಟೊಮಟೋ(Tomato) ಬೆಳೆಗೆ ತೀವ್ರ ಹಾನಿಯಾಗಿದ್ದರಿಂದ ಟೊಮೆಟೋ ಬೆಲೆ ಏರಿಕೆಯಾಗಿದೆ. ಪ್ರತಿ ಕೆ.ಜಿ.ಗೆ 40-50 ಇದ್ದ ಉತ್ತಮ ಗುಣಮಟ್ಟದ ಟೊಮಟೋ ಈಗ 70ಕ್ಕೆ ಏರಿಕೆಯಾಗಿದೆ.

ನಗರಕ್ಕೆ  ಪ್ರತಿದಿನ ವಿವಿಧ ಕಡೆಗಳಿಂದ 60-70 ಲಾರಿ ಟೊಮಟೋ ಬೆಂಗಳೂರಿಗೆ(Bengaluru)ಬರುತ್ತಿತ್ತು. ಇದೀಗ ಇಳುವರಿ ಕಡಿಮೆಯಾಗಿದ್ದರಿಂದ ಕೇವಲ 20ರಿಂದ 30 ಲೋಡ್‌ಗಳಲ್ಲಿ ಬರುತ್ತಿದೆ. ಪ್ರಸ್ತುತ ಮಹಾರಾಷ್ಟ್ರ(Maharashtra) ನಾಸಿಕ್‌ನಿಂದ(Nasik) ಟೊಮಟೋ ಬೆಂಗಳೂರಿಗೆ ಬರುತ್ತಿರುವ ಕಾರಣ ಬೆಲೆ ಕೊಂಚ ನಿಯಂತ್ರಣದಲ್ಲಿದೆ. ಇಲ್ಲವಾದಲ್ಲಿ ಪ್ರತಿ ಕೆ.ಜಿ .100ಕ್ಕೆ ತಲುಪುತ್ತಿತ್ತು ಎಂದು ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದ್ದಾರೆ.

Tomato Price: ಕೋಲಾರದಲ್ಲಿ ಏರಿಕೆ ಕಂಡ ಟೊಮೆಟೊ ಬೆಲೆ: ದರ ಏರಿಕೆಯಿಂದ ರೈತರಿಗಿಲ್ಲ ಲಾಭ

ಕಳೆದ ಮೂರು ತಿಂಗಳ ಹಿಂದೆ ಟೊಮಟೋ ಬೆಲೆ ಕೇವಲ 10ಕ್ಕೆ ಕುಸಿತ್ತು. ಇದರಿಂದ ರೈತರು(Farmers) ಕೊಯ್ಲು ಮಾಡದೇ ಟೊಮೆಟೋವನ್ನು ತೋಟಗಳಲ್ಲಿ ಕೊಳೆಯುವುದಕ್ಕೆ ಬಿಟ್ಟಿದ್ದರು. ಆದರೆ ಇದೀಗ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಕೈ ಸುಡುವಂತೆ ಮಾಡುತ್ತಿದೆ. ಮಳೆಯಿಂದ ಟೊಮಟೋ ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿರುವುದರಿಂದ ತರಕಾರಿಗಳ ಬೆಲೆಯಲ್ಲಿಯೂ(Vegetables Price) ಏರಿಕೆಯಾಗುವ ಸಾಧ್ಯತೆಯಿದೆ.

70ಕ್ಕೆ ಮಾರಾಟ

ನಗರದ ಎಪಿಎಂಸಿ ಮಾರುಕಟ್ಟೆ ಮತ್ತು ಹಾಪ್‌ಕಾಮ್ಸ್‌ನಲ್ಲಿ ಉತ್ತಮ ಗುಣಮಟ್ಟದ ಟೊಮಟೋ ಬೆಂಗಳೂರು ನಗರದಲ್ಲಿ .60ಕ್ಕೆ ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್‌ದಲ್ಲಿ ಸೋಮವಾರ .70ಕ್ಕೆ ಮಾರಾಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ರೀತಿಯಲ್ಲಿ ಮಳೆ(Rain) ಮುಂದುವರಿದಲ್ಲಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸಾಸ್‌ ಸೇರಿದಂತೆ ಬೇರೆ ಉತ್ಪನ್ನಗಳಿಗೆ ಹಲವು ಕೈಗಾರಿಕೆಗಳು ಟೊಮೆಟೋವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ. ಹಾಗಾಗಿ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಕಿಡಿಗೇಡಿಗಳಿಂದ ಟೊಮೊಟೋ ಬೆಳೆ ನಾಶ

ನಾಗಮಂಗಲ: ಜಮೀನು ನಮಗೆ ಸೇರಬೇಕೆಂದು ದಬ್ಬಾಳಿಕೆಯಿಂದ ಏಕಾಏಕಿ ಟೊಮೆಟೋ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳ ಗುಂಪು ಕಟಾವಿಗೆ ಬಂದಿದ್ದ 8 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೋಟೊ ಬೆಳೆ ಹಾಗೂ ಹನಿ ನೀರಾವರಿ ಪೈಪ್‌ಗಳನ್ನು ನಾಶ ಮಾಡಿರುವ ಘಟನೆ ತಾಲೂಕಿನ ಹೊನ್ನಹಳ್ಳಿಯಲ್ಲಿ ಸಂಭವಿಸಿದೆ.

Kolar: ಟೊಮೆಟೊ ಬೆಲೆ ಕುಸಿತ: ರೈತರ ಗೋಳು ಕೇಳೋರಿಲ್ಲ!

ಗ್ರಾಮದ ಎಚ್‌.ಕೆ.ಸ್ವಾಮಿ ಮತ್ತು ಸುಶ್ಮಿತ ರೈತದಂಪತಿಗೆ ಸೇರಿರುವ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಲಕ್ಷಾಂತರ ಮೌಲ್ಯದ ಟೊಮೆಟೋ ಬೆಳೆ ಮತ್ತು ಹನಿನೀರಾವರಿ ಪೈಪ್‌ಗಳು ನಾಶವಾಗಿವೆ. ಚಿಣ್ಯ ಗ್ರಾಮದ ಕೃಷ್ಣಯ್ಯನ ಪುತ್ರ ಸಿ.ಕೆ.ಶಿವರಾಮು, ಈತನ ಮಗ ನವೀನ ಸೊಸೆಯಂದಿರಾದ ಶಿಲ್ಪ, ಭವ್ಯ ಸೇರಿದಂತೆ ಹತ್ತು ಮಂದಿ ಈ ಕೃತ್ಯ ಎಸಗಿದ್ದಾರೆಂದು ಬೆಳೆ ನಾಶದಿಂದ ಸಂಕಷ್ಟಕ್ಕೀಡಾಗಿರುವ ರೈತ ದಂಪತಿಗಳು ಆರೋಪಿಸಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ತಾಲೂಕಿನ ಖರಡ್ಯ ಗ್ರಾಮದ ಗೋವಿಂದೇಗೌಡ ಪುತ್ರ ನರಸಿಂಹೇಗೌಡರಿಂದ ತಾವು ಕಾನೂನಾತ್ಮಕವಾಗಿ ಶುದ್ಧ ಕ್ರಯಕ್ಕೆ ಖರೀದಿಸಿರುವ ಸೋಮಹಳ್ಳಿ ಸರ್ವೆ ನಂ.18/9ರ 0.25ಗುಂಟೆ ಜಮೀನು ಸೇರಿದಂತೆ ನಮ್ಮ ಪಿತ್ರಾರ್ಜಿತ 0.20 ಗುಂಟೆ ಜಮೀನಿನಲ್ಲಿ ಹನಿನೀರಾವರಿ ಆಶ್ರಯದೊಂದಿಗೆ ಲಕ್ಷಾಂತರ ರು.ಗಳ ಸಾಲ ಮಾಡಿ ಕಷ್ಟಪಟ್ಟು ಟೊಮೆಟೋ ಬೆಳೆ ಬೆಳೆದಿದ್ದೆವು ಅಂತ ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. 
 

Latest Videos
Follow Us:
Download App:
  • android
  • ios