Asianet Suvarna News Asianet Suvarna News

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಯ್ತು ಹುಲಿ ಉಗುರು, ಶ್ರೀಗಂಧದ ಕೊರಡು: ಇವರೇನು ಬೆಸ್ಕಾಂ ಅಧಿಕಾರಿಯಾ? ಕಾಡುಗಳ್ಳನಾ?

ಬೆಂಗಳೂರಿನ ಬೆಸ್ಕಾಂ ಅಧಿಕಾರಿ ಮನೆಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಸಿಕ್ತು ಹುಲಿ ಉಗುರು ಹಾಗೂ ಶ್ರೀಗಂಧದ ಕೊರಡು. ಇವರೇನು ಬೆಸ್ಕಾಂ ಅಧಿಕಾರಿಯಾ ಅಥವಾ ಕಾಡುಗಳ್ಳನೋ ಎಂದು ಲೋಕಾಯುಕ್ತ ಅಧಿಕಾರಿಗಳು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

Tiger claw sandalwood stick found in Lokayukta raid he was BESCOM officer Or Forest robber sat
Author
First Published Jan 9, 2024, 3:44 PM IST

ಬೆಂಗಳೂರು (ಜ.09): ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬೆಸ್ಕಾಂ ಅಧಿಕಾರಿ ನಾಗರಾಜು ಅವರ ಮನೆಯ ಮೇಳೆ ದಾಳಿ ಮಾಡಿದ್ದಾರೆ. ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ  ನಿರ್ವಹಿಸುತ್ತಿರುವ  ನಾಗರಾಜ್ ಅವರ ಮನೆಯಲ್ಲಿ ಹುಲಿ ಉಗುರು ಹಾಗೂ ಕೆ.ಜಿ. ಗಟ್ಟಲೇ ಶ್ರೀಗಂಧದ ಕೊರಡು ಪತ್ತೆಯಾಗಿವೆ. ಇವರೇನು ಬೆಸ್ಕಾಂ ಅಧಿಕಾರಿಯೋ ಅಥವಾ ಕಾಡುಗಳ್ಳನೋ ಎಂದು ಲೋಕಾಯುಕ್ತ ಸಿಬ್ಬಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಇಂದಿರಾ ನಗರದಲ್ಲಕರುವ ಬೆಸ್ಕಾಂ ಕ್ವಾಟ್ರಸ್‌ನಲ್ಲಿರುವ ಬೆಸ್ಕಾಂ ಅಧಿಕಾರಿ ನಾಗರಾಜು ಮನೆ ಮೇಲೆ ಲೋಕಯುಕ್ತ ದಾಳಿ ಮಾಡಿದ್ದಾರೆ. ಬೆಸ್ಕಾಂನಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ನಾಗರಾಜ್ ಕೆಲಸ  ನಿರ್ವಹಿಸುತ್ತಿದ್ದಾರೆ. ಕೆಲಸದಲ್ಲಿ ಅಕ್ರಮವಾಗಿ ಹಣ ಗಳಿಕೆ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ 6 ಅಧಿಕಾರಿಗಳ ತಂಡ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅಧಿಕಾರಿ ನಾಗರಾಜ್‌ ಈ ಮನೆಯಲ್ಲಿ ಕುಟುಂಬ ಸದಸ್ಯರನ್ನು ಇಟ್ಟುಕೊಳ್ಳದೇ ಎಲ್ಲರನ್ನೂ ಬೇರೆ ಮನೆಯಲ್ಲಿಟ್ಟು ಅವರು ಒಬ್ಬರೇ ವಾಸ ಮಾಡುತ್ತಿರುತ್ತಾರೆ. 

ಬೆಂಗಳೂರಿನಲ್ಲಿ ನಡೆಯುತ್ತಿದೆ ವಿದೇಶಿ ಹುಡುಗಿಯರ ವೇಶ್ಯಾವಾಟಿಕೆ ದಂಧೆ!

ಬೆಸ್ಕಾಂ ಕ್ವಾಟರ್ಸ್ ನಲ್ಲಿ ಏಕಾಂಗಿಯಾಗಿ ವಾಸ ವಾಗಿರುವ ನಾಗರಾಜ್, ಮನೆಯಲ್ಲಿ ಇಲ್ಲದ ಕಾರಣ ಅವರ ಸಹೋದರಿಯ ಸಮುಖದಲ್ಲಿ ಲೋಕಾಯುಕ್ತ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಇಡೀ‌ಮನೆ ತುಂಬಾ ನಾಗರಾಜ್‌ ದಾಖಲೆಗಳನ್ನು ತುಂಬಿದ್ದಾರೆ. ಕೆಲವು ದಾಖಲೆಗಳು, ಪೇಪರ್ ಕಸ ಹಾಗೂ ಧೂಳಿನಿಂದ ತುಂಬಿದೆ. ಇನ್ನು ಮನೆಯನ್ನು ಶೋಧನೆ ಮಾಡುತ್ತಿರುವ ಅಧಿಕಾರಿಗಳು ಧೂಳು ತಡೆಯಲಾಗದೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪರಿಶೀಲನೆ ಮಾಡುತ್ತಿದ್ದಾರೆ.

ಬೆಸ್ಕಾಂ ಅಧಿಕಾರಿ ನಾಗರಾಜ್ ಮನೆಯಲ್ಲಿ‌ ತಪಾಸಣೆ ವೇಳೆ ಗಂಧದ ಮರದ ತುಂಡುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಮನೆಗೆ ಅರಣ್ಯಾಧಿಕಾರಿಗಳ ಆಗಮಿಸಿದ್ದಾರೆ. ಕೆಆರ್ ಪುರಂ ಅರಣ್ಯ ಸಂಚಾರಿ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು, 3ಕೆಜಿ 800 ಗ್ರಾಂ ಗಂಧದ ಮರದ ಕೊರಡುಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಲೋಕಯುಕ್ತ ದಾಳಿ ವೇಳೆ ನಾಗರಾಜ್ ಮನೆಯಲ್ಲಿ ಹುಲಿ ಉಗುರು ಪತ್ತೆಯಾಗಿದೆ. ದಾಳಿ ವೇಳೆ ಸಿಕ್ಕ ಎರಡು ಹುಲಿ ಉಗುರುಗಳನ್ನು ಪುನಃ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಎರಡು ಹುಲಿ ಉಗುರುಗಳನ್ನು ಕಪ್ಪು ದಾರದಲ್ಲಿ ಕಟ್ಟಿ ಇಟ್ಟಿದ್ದರು. ಈ ದಾರವನ್ನು ಬಿಡಿಸಿ ನೋಡಿದಾಗ ಹುಲಿ ಉಗುರುಗಳು ಸಿಕ್ಕಿವೆ. ಹುಲಿ ಉಗುರನ್ನು ವಶಕ್ಕೆ ಪಡೆದ ಕೆಆರ್ ಪುರಂ ವಲಯ ಅರಣ್ಯಾಧಿಕಾರಿಗಳು ಕೇಸ್‌ ದಾಖಲಿಸಿದ್ದಾರೆ.

ಬೆಂಗಳೂರಿನ ಜನರೇ ಹುಷಾರ್, ಕಿಲ್ಲರ್ ಬಿಎಂಟಿಸಿ ನಿಮ್ಮ ಪ್ರಾಣವನ್ನೂ ಹೊತ್ತೊಯ್ಯಬಹುದು!

ರಾಜ್ಯದಲ್ಲಿ ಬಿಗ್‌ಬಾಸ್‌ ಮನೆಯ ಸ್ಪರ್ಧಿ ವರ್ತೂರು ಸಂತೋಷ್‌ ಅವರು ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದಕ್ಕೆ ಅವರನ್ನು ಅರಣ್ಯಾಧಿಕಾರಿಗಳು ರಾತ್ರೋ ರಾತ್ರಿ ಬಂಧಿಸಿದ್ದರು. ಇನ್ನು ಒಂದು ವಾರಗಳ ಕಾಲ ಬಂಧನದಲ್ಲಿಟ್ಟು, ಜಾಮೀನು ಲಭ್ಯವಾದಾಗ ಅವರನ್ನು ಬಿಡುಗಡೆ ಮಾಡಿದ್ದರು. ನಂತರ, ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ನಟ ದರ್ಶನ್, ಜಗ್ಗೇಶ್, ರಾಕ್‌ಲೈನ್‌ ವೆಂಕಟೇಶ್ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ಮಾಡಿದ್ದರು. ಈಗ ಬೆಸ್ಕಾಂ ಅಧಿಕಾರಿಯ ಮನೆಯಲ್ಲಿ ಹುಲಿ ಉಗುರು ಲಭ್ಯವಾಗಿದ್ದು, ಇವರನ್ನು ಬಂಧಿಸುತ್ತಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ.

Follow Us:
Download App:
  • android
  • ios