ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅರೆಸ್ಟ್ ಆಗಿರುವ ಹಿನ್ನೆಲೆ, ಹುಲಿ ಉಗುರು ಧರಿಸಿ ಒಳ ಹೋಗಲು ಅನುಮತಿ ನೀಡಿದ್ದಕ್ಕೆ ಆರ್‌ಟಿಐ ಕಾರ್ಯಕರ್ತನೊಬ್ಬ ಖಾಸಗಿ ಚಾನೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಅ.28) : ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅರೆಸ್ಟ್ ಆಗಿರುವ ಹಿನ್ನೆಲೆ, ಹುಲಿ ಉಗುರು ಧರಿಸಿ ಒಳ ಹೋಗಲು ಅನುಮತಿ ನೀಡಿದ್ದಕ್ಕೆ ಆರ್‌ಟಿಐ ಕಾರ್ಯಕರ್ತನೊಬ್ಬ ಖಾಸಗಿ ಚಾನೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ದಿಲೀಪ್ ಎಂಬುವವರಿಂದ ದೂರು. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರೂ ಬಿಗ್ ಬಾಸ್ ರಿಯಾಲಿಟಿ ಶೋ ಒಳಗೆ ಹೋಗಲು ಅನುಮತಿ ನೀಡಿರುವ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ರಾಮನಗರ ಎಸ್ ಪಿ ಗೆ ದೂರು ನೀಡಿರುವ ಕಾರ್ಯಕರ್ತ. 

ನಟ ದರ್ಶನ್‌ ಮನೆಗೆ ನುಗ್ಗಿದ ಅರಣ್ಯಾಧಿಕಾರಿಗಳ ತಂಡ: ಹುಲಿ ಉಗುರು ಪತ್ತೆಗೆ ಶೋಧ

ಸ್ವಂತ ವಸ್ತುಗಳನ್ನ ಬಳಸಬಾರದೆಂದು ನಿಯಮ ಇದೆ. ಖಾಸಗಿ ಸ್ವತ್ತುಗಳನ್ನ ರಿಯಾಲಿಟಿ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಸಂತೋಷ್ ಪರೀಕ್ಷೆಗೊಳಪಡಿಸದೇ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಒಳಹೋಗಲು ಬಿಟ್ಟಿದ್ದಾರೆ. ತಮಗೆ ಲಾಭ ಮಾಡಿಕೊಳ್ಳಲು ಸಂತೋಷ್ ನನ್ನ ಹುಲಿ ಉಗುರಿನ ಪೆಂಡೆಂಟ್‌ನೊಂದಿಗೆ ಒಳಗೆ ಹೋಗಲು ಬಿಟ್ಟಿದ್ದಾರೆ. ಖಾಸಗಿ ಚಾನೆಲ್ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಸಂಪೂರ್ಣವಾಗಿ ಉಲ್ಲಂಘಿಸಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಹಾಗು ಗಲಾಟೆಯಾಗಲು ಖಾಸಗಿ ಚಾನೆಲ್ ಕಾರಣವಾಗಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿರುವ ಆರ್‌ಟಿಐ ಕಾರ್ಯಕರ್ತ.

ಹುಲಿ ಉಗುರು ಪೆಂಡೆಂಟ್‌ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್‌: ನಿಖಿಲ್‌ ಕುಮಾರಸ್ವಾಮಿ ಬಚಾವ್‌!

ಕಳೆದ ವಾರ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾಗಲೇ ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಗೆ ನುಗ್ಗಿ ಹುಲಿ ಉಗುರು ಧರಿಸಿದ ಅರೋಪದ ಮೇಲೆ ವರ್ತೂರು ಸಂತೋಷ್‌ರನ್ನು ಬಂಧಿಸಿದ್ದರು. ಈ ಘಟನೆ ನಡೆದ ಬಳಿಕ ರಾಜ್ಯಾದ್ಯಂತ ಹುಲಿ ಉಗುರಿನ ಪ್ರಕರಣ ಸರಣಿಯಂತೆ ಫೋಟೊಗಳು ವೈರಲ್‌ ಆಗತೊಡಗಿದವು. ಸೆಲೆಬ್ರಿಟಿ ರಾಜಕಾರಣಿ ಸ್ವಾಮೀಜಿಗಳು ಸಹ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ವಿಚಾರನೆಗೊಳಪಡಿಸಲಾಯಿತು. ಚಿಕ್ಕಮಗಳೂರಿನ ಮಾರ್ಕಂಡೇಯ ದೇವಸ್ಥಾನದ ಇಬ್ಬರು ಅರ್ಚಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಿನನಿತ್ಯ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.