ಅರಣ್ಯ ಇಲಾಖೆ ನೋಟಿಸ್‌ಗೆ ಚಿತ್ರನಟರು ಡೋಂಟ್ ಕೇರ್! ಉತ್ತರಿಸದ ದರ್ಶನ್, ನಿಖಿಲ್, ಜಗ್ಗೇಶ್, ರಾಕ್‌ಲೈನ್
ಹುಲಿ ಉಗುರಿನ ಆಭರಣ ಹೊಂದಿದ್ದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದರೂ ಚಲನಚಿತ್ರ ನಟರು ಉತ್ತರಿಸುವ ಗೋಜಿಗೆ ಹೋಗಿಲ್ಲ.

ಬೆಂಗಳೂರು (ಅ.27): ಹುಲಿ ಉಗುರಿನ ಆಭರಣ ಹೊಂದಿದ್ದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದರೂ ಚಲನಚಿತ್ರ ನಟರು ಉತ್ತರಿಸುವ ಗೋಜಿಗೆ ಹೋಗಿಲ್ಲ.
ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿ ಅಕ್ರಮವಾಗಿ ಹುಲಿ ಉಗುರಿನ ಆಭರಣ ಹೊಂದಿದ್ದಕ್ಕೆ ಸಂಬಂಧಿಸಿದಂತೆ ಬುಧವಾರ ಚಲನಚಿತ್ರ ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್ ಮತ್ತು ರಾಕ್‌ಲೈನ್ ವೆಂಕಟೇಶ್ ಮನೆಗಳಿಗೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಅವರ ಬಳಿಯಿದ್ದ ಹುಲಿ ಉಗುರಿನ ಮಾದರಿಯನ್ನು ವಶಕ್ಕೆ ಪಡೆದು ಪರೀಕ್ಷೆಗೊಳಪಡಿಸಿದ್ದಾರೆ.
ಅದರ ಜತೆಗೆ ಹುಲಿ ಉಗುರಿನ ಮಾದರಿಯನ್ನು ಇಟ್ಟುಕೊಂಡಿದ್ದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿ, ಉತ್ತರಿಸುವಂತೆಯೂ ತಿಳಿಸಿದ್ದರು. ಉತ್ತರವನ್ನು ಖುದ್ದು ಹಾಜರಾಗಿ ನೀಡಲು ಸಾಧ್ಯವಾಗದಿದ್ದರೆ ಲಿಖಿತ ರೂಪದಲ್ಲಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದ ಅಧಿಕಾರಿಗಳು ನಟರಿಗೆ ತಿಳಿಸಿದ್ದರು. ಆದರೆ, ಆ ನೋಟಿಸ್‌ಗೆ ತಲೆಕೆಡಿಸಿಕೊಳ್ಳದ ಚಲನಚಿತ್ರ ನಟರು ಅರಣ್ಯ ಇಲಾಖೆಗೆ ಉತ್ತರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗಿದೆ.
ಚಿತ್ರ ನಟರು ಹುಲಿ ಉಗುರು ಯಾಕೆ ಧರಿಸ್ಬಾರ್ದು? ಇವ್ರು ಕೊಟ್ಟಿದ್ದಾರೆ ಕಾರಣ ನೋಡಿ...