ಬೆಂಗಳೂರು(ಮೇ.08):  ರಾಜ್ಯದ ಮೂರು ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದ್ದು, ಸಿಡಿಲ ಆರ್ಭಟಕ್ಕೆ ಬಾಲಕಿ ಸೇರಿ ಮೂವರು ಬಲಿಯಾಗಿದ್ದಾರೆ. 

ವಿಜಯಪುರ ಜಿಲ್ಲೆಯ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದ ಹೊರ ವಲಯದ ತುಕಾರಾಮ ಈಶ್ವರಪ್ಪ (32), ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಚಟ್ನಿಹಾಳ ಗ್ರಾಮದ ಬಾಲಕಿ ಮಲ್ಲಮ್ಮ ಕೋರಕೇರಿ(8), ಕಲಬುರಗಿಯ ಆಳಂದದ ಅರುಣ ಕಾಂತು ರಾಥೋಡ(18)ಮೃತಪಟ್ಟವರು.

ರಾಜ್ಯದ ಹಲವೆಡೆ ವರುಣನ ಅಬ್ಬರ: ಸಿಡಿಲು ಬಡಿದು 7 ಜನ ಸಾವು

ಕಲಬುರಗಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಸಂಜೆಯ ವೇಳೆಗೆ ಸುರಿದ ಈ ಅಕಾಲಿಕ ಮಳೆಯಿಂದಾಗಿ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಕೊಂಚ ನೆಮ್ಮದಿ ಮೂಡಿಸಿತು. ಇನ್ನು ಉಡುಪಿಯಲ್ಲಿ ಗುರುವಾರ ರಾತ್ರಿ ಭಾರೀ ಗಾಳಿಯೊಂದಿಗೆ ಕೆಲಕಾಲ ಉತ್ತಮ ಮಳೆಯಾಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.