Asianet Suvarna News Asianet Suvarna News

Sahitya Akademi Award: ಕನ್ನಡದ ಮೂವರು ಲೇಖಕರಿಗೆ ಒಲಿದ ಪ್ರಶಸ್ತಿ

*  ನಾಗಭೂಷಣ್‌ರ 'ಗಾಂಧಿ ಕಥನ' ಕೃತಿಗೆ ವರ್ಷದ ಪುಸ್ತಕ ಪ್ರಶಸ್ತಿ
*  ಬಸು ಬೇವಿನಗಿಡದರ 'ಓಡಿ ಹೋದ ಹುಡುಗ' ಮಕ್ಕಳಿಗಾಗಿ ಬರೆದ ಕಾದಂಬರಿ ಆಯ್ಕೆ
* 'ಯುವ ಪುರಸ್ಕಾರ' ಕ್ಕೆ ಎಚ್. ಲಕ್ಷೀನಾರಾಯಣ ಸ್ವಾಮಿ ಅವರ 'ತೊಗಲ ಚೀಲದ ಕರ್ಣ' ಮಹಾ ಕಾವ್ಯ ಅಯ್ಕೆ 
 

Three Kannada Writers Bag Sahitya Akademi Award grg
Author
Bengaluru, First Published Dec 30, 2021, 1:00 PM IST

ನವದೆಹಲಿ(ಡಿ.30):  ಕೇಂದ್ರ ಸಾಹಿತ್ಯ ಅಕಾಡೆಮಿಯು(Sahitya Akademi) ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು(Awards) ಇಂದು(ಗುರುವಾರ) ಘೋಷಿಸಲಾಗಿದ್ದು ಕನ್ನಡದ(Kannada) ಪ್ರಮುಖ ಲೇಖಕರಾದ ಡಿ.ಎಸ್.ನಾಗಭೂಷಣ್(DS Nagabhushan) ಅವರ 'ಗಾಂಧಿ ಕಥನ' ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. 'ಬಾಲ ಪುರಸ್ಕಾರ' ಕ್ಕೆ ಬಸು ಬೇವಿನಗಿಡದ(Basu Bevinagidad) ಅವರ 'ಓಡಿ ಹೋದ ಹುಡುಗ' ಮಕ್ಕಳಿಗಾಗಿ ಬರೆದ ಕಾದಂಬರಿ ಆಯ್ಕೆಯಾಗಿದೆ. ಅಕಾಡೆಮಿಯು ನೀಡುವ 'ಯುವ ಪುರಸ್ಕಾರ' ಕ್ಕೆ ಎಚ್. ಲಕ್ಷೀನಾರಾಯಣ ಸ್ವಾಮಿ(H Lakshiminayarana) ಅವರ 'ತೊಗಲ ಚೀಲದ ಕರ್ಣ' ಮಹಾ ಕಾವ್ಯವು ಆಯ್ಕೆಯಾಗಿದೆ.

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಯುವ ಹಾಗೂ ಬಾಲ ಪುರಸ್ಕಾರಗಳು ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿರುತ್ತವೆ.

ಕನ್ನಡ ಪುಸ್ತಕ ಪ್ರೇಮಿ ಮೈಸೂರಿನ ಸೈಯದ್ ಇಸಾಕ್‌ಗೆ ರಾಜರತ್ನಂ ಪ್ರಶಸ್ತಿ

ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಕೆಲಸ ನಿರ್ವಹಿಸಿದ್ದರೆ ಬಾಲ ಸಾಹಿತ್ಯ ಪ್ರಶಸ್ತಿಗೆ ಟಿ.ಪಿ. ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್.ದಿವಾಕರ ಅವರು ಜ್ಯೂರಿಗಳಾಗಿದ್ದರು. ಪ್ರಮುಖ ಕೃತಿ ಆಯ್ಕೆಯ ಜ್ಯೂರಿಗಳಾಗಿ ಬೊಳುವಾರ್ ಮಹಮ್ಮದ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು. ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದಿದೆ. 

ಪ್ರಶಸ್ತಿಗಳನ್ನು ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ವಿಜೇತರರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ(Chandrashekhara Kambara) ಅವರು ಅಭಿನಂದಿಸಿದ್ದಾರೆ.

ಸುಬ್ರಾಯ ಚೊಕ್ಕಾಡಿ ಸೇರಿ 6 ಮಂದಿಗೆ ಮಾಸ್ತಿ ಪ್ರಶಸ್ತಿ 2020

ಬೆಂಗಳೂರು: ಸಾಹಿತ್ಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳಿಗೆ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೊಡಮಾಡುವ 2020ನೇ ಸಾಲಿನ ‘ಮಾಸ್ತಿ ಪ್ರಶಸ್ತಿ’ (Masti Award) ಪುರಸ್ಕೃತರ ಪಟ್ಟಿ ಡಿ.16 ರಂದು ಬಿಡುಗಡೆಯಾಗಿತ್ತು.

ಹಿರಿಯ ಲೇಖಕರಾದ ಡಾ.ಸಂಧ್ಯಾ ಎಸ್.ಪೈ (ಶಿಶು ಸಾಹಿತ್ಯ), ಎಸ್.ಆರ್.ವಿಜಯ್‌ಶಂಕರ್ (ವಿಮರ್ಶೆ), ಪ್ರೊ.ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಸುಬ್ರಾಯ ಚೊಕ್ಕಾಡಿ (ಕಾವ್ಯ), ಕೇಶವರೆಡ್ಡಿ ಹಂದ್ರಾಳ (ಕಥೆ), ಸ.ರಘುನಾಥ (ಸೃಜನಶೀಲ) ಅವರು 2020ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಶಸ್ತಿ ಪುರಸ್ಕೃತರಿಗೆ ಮಾರ್ಚ್ 27ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಮಾಸ್ತಿ ಪ್ರಶಸ್ತಿ ಮತ್ತು ಫ ಲಕ, ತಲಾ25 ಸಾವಿರ ರು.ಗಳ ನಗದು ನೀಡಿ ಸತ್ಕರಿಸಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದರು.

Kannada Book: ಎಂಜಿನಿಯರಿಂಗ್‌, ವೈದ್ಯಕೀಯ ಪಠ್ಯ ಕನ್ನಡದಲ್ಲೇ ಸಿದ್ಧಪಡಿಸಿ: ಜ್ಞಾನೇಂದ್ರ

ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಾವಿನಕೆರೆ ರಂಗನಾಥನ್, ಸದಸ್ಯರಾಗಿ ಪ್ರೊ.ಎಂ.ಎಚ್.ಕೃಷ್ಣಯ್ಯ, ಜಿ.ಎನ್.ರಂಗನಾಥ್ ರಾವ್, ಬಿ.ಆರ್.ಲಕ್ಷ್ಮಣರಾವ್ ಕಾರ್ಯದರ್ಶಿ ಡಿ.ಎಂ.ರವಿಕುಮಾರ್ ಮತ್ತಿರರು ಇದ್ದರು.

ತಾಂಬೂಲದೊಂದಿಗೆ ಪುಸ್ತಕ ನೀಡುವ ಪರಂಪರೆ ಸೃಷ್ಟಿಯಾಗಲಿ: ಸೋಮೇಶ್ವರ

ಬೆಂಗಳೂರು: ಗ್ರಂಥದಾನ ಶ್ರೇಷ್ಠ ದಾನವಾಗಿದ್ದು ತಾಂಬೂಲ ಕೊಡುವಾಗ ವೀಳ್ಯದೆಲೆ, ಅಡಕೆಯ ಜೊತೆಗೆ ಪುಸ್ತಕವನ್ನು ಕೊಡುವ ಹೊಸ ಪರಂಪರೆ ಸೃಷ್ಟಿಯಾಗಬೇಕು ಎಂದು ಖ್ಯಾತ ಬರಹಗಾರ ಡಾ. ನಾ.ಸೋಮೇಶ್ವರ(Dr.Na Someshwara) ಹೇಳಿದ್ದರು. 

ನ.21 ರಂದು  ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದ 12ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪುಸ್ತಕೋತ್ಸವದಲ್ಲಿ ‘ಕನ್ನಡಪ್ರಭ’(Kannada Prabha) ಪುರವಣಿ ಪ್ರಧಾನ ಸಂಪಾದಕ ಎಚ್‌.ಗಿರೀಶ್‌ರಾವ್‌ (ಜೋಗಿ)(Girish Rao Hatwar) ಅವರ ‘ಐ ಹೇಟ್‌ ಮೈ ವೈಫ್‌’(I Hate My Wife) ಹಾಗೂ ಉಪ ಸುದ್ದಿಸಂಪಾದಕ ಮಹಾಬಲ ಸೀತಾಳಭಾವಿ ಅವರ ‘ಮ್ಯಾನೇಜ್‌ಮೆಂಟ್‌ ಭಗವದ್ಗೀತೆ’(Management Bhagavad Gita) ಸೇರಿದಂತೆ ಒಟ್ಟು ಹತ್ತು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು. 
 

Follow Us:
Download App:
  • android
  • ios