Asianet Suvarna News Asianet Suvarna News

ಕೆಪಿಟಿಸಿಎಲ್‌ ಅಕ್ರಮ: ಮತ್ತೆ ಮೂವರ ಬಂಧನ

ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಇಲೆಕ್ಟ್ರಾನಿಕ್‌ ಡಿವೈಸ್‌ ಮತ್ತು ಮೈಕ್ರೋಚಿಪ್‌ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು. 

Three Arrested Again on KPTCL Scam in Belagavi grg
Author
First Published Jan 5, 2023, 7:08 PM IST

ಬೆಳಗಾವಿ(ಜ.05):  ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಇಲೆಕ್ಟ್ರಾನಿಕ್‌ ಡಿವೈಸ್‌ ಮತ್ತು ಮೈಕ್ರೋಚಿಪ್‌ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಮತ್ತೆ ಮೂವರನ್ನು ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇದರಿಂದ ಈ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದ್ದು, ಇನ್ನೂ ಹಲವರು ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ. 

ಗೋಕಾಕ ತಾಲೂಕಿನ ಮಲ್ಲಾಪುರ ಪಿ.ಜಿ.ಗ್ರಾಮದ ಅಣ್ಣಪ್ಪ ಮಾರವಾಡಿ (31), ಶಿವಾಪೂರ ಗ್ರಾಮದ ಜಾನ್‌ರಾಬರ್ಚ್‌ ಬಂಗೆನ್ನವರ (26) ಹಾಗೂ ಮೂಡಲಗಿ ತಾಲೂಕಿನ ರಾಜಾಪೂರದ ಚಿದಾನಂದ ಮಾಡಲಗಿ (27) ಬಂಧಿತರು.

ಕೆಪಿಟಿಸಿಲ್ ನೌಕರರಿಗೆ ಸಂಬಳದಲ್ಲಿ ಮೋಸ: ಪ್ರತಿ ತಿಂಗಳು ಕೊಡಬೇಕು ಹಫ್ತಾ

2022 ಆಗಸ್ಟ್‌ 7ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆದ ಕೆಪಿಟಿಸಿಎಲ್‌ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಆರೋಪಿಗಳು ಪರೀಕ್ಷಾ ಅಕ್ರಮ ಎಸಗಿದ್ದರು. ಈ ಕುರಿತು ಗೋಕಾಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios