ಸನಾತನ ಧರ್ಮ ನಾಶ ಮಾಡ್ತೇವೆ ಎನ್ನುವವರಿಗೆ ಪಾಠ ಕಲಿಸಬೇಕು: ಆರೆಸ್ಸೆಸ್ ಮುಖಂಡ ಪಟ್ಟಾಭಿರಾಮ
ಸನಾತನ ಧರ್ಮ ನಾಶ ಪಡಿಸುತ್ತೇವೆ ಎಂದವರಿಗೆ ಪಾಠ ಕಲಿಸಬೇಕು. ವಿಶ್ವಕ್ಕೆ ಹಿಂದೂ ಧರ್ಮದ ಉತ್ತಮ ಸಂದೇಶ ಸಾರಬೇಕು ಎಂದು ಪಟ್ಟಾಭಿರಾಮ ಹೇಳಿದರು. ಆರ್ ಎಸ್ ಎಸ್ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ ಹೇಳಿದರು.
ಚಿತ್ರದುರ್ಗ (ಸೆ.26): ಸನಾತನ ಧರ್ಮ ನಾಶ ಪಡಿಸುತ್ತೇವೆ ಎಂದವರಿಗೆ ಪಾಠ ಕಲಿಸಬೇಕು. ವಿಶ್ವಕ್ಕೆ ಹಿಂದೂ ಧರ್ಮದ ಉತ್ತಮ ಸಂದೇಶ ಸಾರಬೇಕು ಎಂದು ಪಟ್ಟಾಭಿರಾಮ ಹೇಳಿದರು. ಆರ್ ಎಸ್ ಎಸ್ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ ಹೇಳಿದರು.
ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಸೋಮವಾರ ಶೌರ್ಯ ಜಾಗರಣಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶೌರ್ಯ ರಥಯಾತ್ರೆ ಚಿತ್ರದುರ್ಗದಲ್ಲಿ ಆರಂಭವಾಗಿ ಉಡುಪಿಯಲ್ಲಿ ಅಂತ್ಯವಾಗುತ್ತದೆ. ಚಿತ್ರದುರ್ಗ ವೀರ ವನಿತೆ ಒನಕೆ ಓಬವ್ವಳ ಶೌರ್ಯ ಮೆರೆದ ನಾಡು, ಶಾಂತಿ ಮೆರೆದ ನಾಡು ಉಡುಪಿ.ಓಬವ್ವ ಹಿಂದೂ ಸಮಾಜದಲ್ಲಿ ಶೌರ್ಯ ಕಲಿತಿದ್ದಾಳೆ.
ಓಬವ್ವನ ಹರಕೆಯಿಂದ ಶೌರ್ಯ ಯಾತ್ರೆ ಯಶಸ್ವಿ ಆಗಲಿದೆ. ಹಿಂದೂ ಸಮಾಜ ಶೌರ್ಯ, ಶಾಂತಿ ಸಂಪನ್ನದ ಸಮಾಜ ಆಗಬೇಕು. ಶೌರ್ಯದಿಂದ ಶಾಂತಿ ಸ್ಥಾಪನೆ ನೆಲೆಸಬೇಕು. ಮಹಾಭಾರತ ಯುದ್ಧಕ್ಕೂ ಮುನ್ನ ಕೃಷ್ಣ ಶಾಂತಿ ಮಂತ್ತ ಪಠಿಸುತ್ತಾನೆ. ಕೌರವರ ಜತೆ ಶಾಂತಿ ಮಾತುಕತೆ ನಡೆಸುತ್ತಾನೆ ಮಾತುಕತೆ ವಿಫಲ ಆದಾಗ ಧರ್ಮಯುದ್ಧ ನಡೆಯುತ್ತದೆ. ಕೃಷ್ಣ ನೀತಿ ಪಾಲಿಸಿದರೆ ಹಿಂದೂ ವಿರೋಧಿಗಳು ಉಳಿಯುತ್ತಾರೆ ಇಲ್ಲವಾದರೆ ಉಳಿಯಲ್ಲ. ಮತಾಂತರ, ಉಗ್ರಗಾಮಿ ಚಟುವಟಿಕೆ ಲವ್ ಜಿಹಾದ್ ತಡೆಯಬೇಕು ಎಂದರು.
ಸನಾತನ ಧರ್ಮ ಉಳಿದರೆ ಮಾತ್ರ ಭಾರತದ ಉಳಿವು ಸಾಧ್ಯ: ಯತ್ನಾಳ
ಭಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಗಾಗಿ ಭಜರಂಗದಳ ಸ್ಥಾಪನೆ ಆಗಿತ್ತು. 30ವರ್ಷದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ನಮ್ಮ ಜತೆಗೆ ಆಂಜನೇಯ ಕೆಲಸ ಮಾಡುತ್ತಿದ್ದಾನೆ ಎಂದರು.
ದೇಶದಲ್ಲಿ ಶೇ 30ರಷ್ಟು ಯುವ ಸಮೂಹ ಇದೆ. ಆ ಪೈಕಿ ಕೇವಲ ಶೇ.10ರಷ್ಟು ಜನರಲ್ಲಿ ಧರ್ಮಶ್ರದ್ಧೆ, ದೇಶಭಕ್ತಿ ಇದ್ದು, ಇನ್ನುಳಿದ ಶೇ.20ರಷ್ಟು ಯುವಕರನ್ನು ಜಾಗೃತಗೊಳಿಸಬೇಕಿದೆ. ದೇಶದಲ್ಲಿ ಹಿಂದೂ ಸಮಾಜದ ಮೇಲಿನ ಅಪಮಾನ, ಆಕ್ರಮಣ ಮೆಟ್ಟಿ ನಿಲ್ಲಬೇಕು. ನಾನೊಬ್ಬ ಹಿಂದೂ ಎಂದು ಗರ್ವದಿಂದ ಹೇಳುವಂತಾಗಬೇಕು. ಯುವಕರಿಗೆ ದೇಶಭಕ್ತಿಯ ಪಾಠ ಹೇಳಿಕೊಡಬೇಕಿದೆ. ಡ್ರಗ್ ಜಿಹಾದ್ ಹಿಂದೆ ರಾಷ್ಟ್ರ ವಿರೋಧಿಗಳ ಕೈವಾಡ ಇದೆ. ಪಾಕಿಸ್ತಾನ, ಬಾಂಗ್ಲಾದಿಂದ ಡ್ರಗ್ಸ್ ದೇಶದೊಳಗೆ ನುಗ್ಗುತ್ತಿದೆ. ಅಯೋಗ್ಯರು, ಅವಿವೇಕಿಗಳು ಹಿಂದೂ ಧರ್ಮ ನಾಶ ಮಾಡಬೇಕೆಂದು ಹೇಳುತ್ತಿದ್ದಾರೆಂದರು.
ಹಿಂದೂ ಧರ್ಮದ ಅಧ್ಯಯನ ಇಲ್ಲದವರು ಮಾತಾಡುತ್ತಿದ್ದಾರೆ. ರಾಜ್ಯದಲ್ಲಿ ಮಹಿಷಾಸುರ ದಸರಾ ಮಾಡಲು ಹೊರಟಿದ್ದಾರೆ. ಟಿಪ್ಪು ಸುಲ್ತಾನನ ವೈಭವೀಕರಿಸುವ ಷಡ್ಯಂತ್ರ ನಡೆಯುತ್ತಿದೆ. ಪಕ್ಷ, ವ್ಯಕ್ತಿ ನೋಡಿ ಯಾರಿಗೆ ಬೇಕಾದರೂ ಮತ ಹಾಕಿ. ಹಿಂದೂ ಎಂಬ ವಿಚಾರದಲ್ಲಿ ನಾವೆಲ್ಲಾ ಒಂದಾಗಬೇಕು ಎಂದರು.
ಸನಾತನ ಧರ್ಮ ವಿರುದ್ಧ ಹೇಳಿಕೆ: ಉದಯನಿಧಿ, ರಾಜಾಗೆ ಸುಪ್ರೀಂಕೋರ್ಟ್ ನೋಟಿಸ್
ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದಲ್ಲಿನ ವರ್ಗ, ತಾರತಮ್ಯ ವ್ಯವಸ್ಥೆ ದೂರಾಗಿಸಬೇಕಿದೆ. ಹಿಂದುಳಿದ, ದಲಿತ ಸಮುದಾಯದ ಜನ ಮತಾಂತರ ಆಗುತ್ತಿದ್ದಾರೆ. ಯಾವ್ಯಾವುದೋ ಕಾರಣಕ್ಕೆ ಕೆಳವರ್ಗದ ಜನ ಮತಾಂತರ ಆಗುತ್ತಿದ್ದಾರೆ. ಕೆಳವರ್ಗಕ್ಕೆ ಮಾತ್ರ ಮತಾಂತರ ಸೀಮಿತ ಆಗಿಲ್ಲ. ವೀರಶೈವ ಲಿಂಗಾಯತ ಸಮಾಜ ಸೇರಿ ಎಲ್ಲಾ ವರ್ಗಕ್ಕೂ ವ್ಯಾಪಿಸಿದೆ. ಮತಾಂತರ ತಡೆದರೆ ಸನಾತನ ಧರ್ಮ ಮತ್ತಷ್ಟು ಗಟ್ಟಿ ಆಗಲಿದೆ. ಅಸಮಾನತೆ ನಿರ್ಮೂಲನೆಗೆ ಎಲ್ಲರೂ ಕಂಕಣ ಬದ್ಧರಾಗುವ ಅಗತ್ಯವಿದೆ ಎಂದು ಮಾದಾರಶ್ರೀ ಹೇಳಿದರು.
ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಯುಕ್ತವಾಗಿ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಿವೆ.5