ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮಳೆಯಾದರೆ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಮಂಗಳವಾರ ಬೆಂಗಳೂರಿನ ಹಲವೆಡೆ ಮಳೆಯಾಗಿದ್ದು, ಇದೀಗ ಏ.12ರಿಂದ 20ರವರೆಗೆ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು (ಏ.05): ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮಳೆಯಾದರೆ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಮಂಗಳವಾರ ಬೆಂಗಳೂರಿನ ಹಲವೆಡೆ ಮಳೆಯಾಗಿದ್ದು, ಇದೀಗ ಏ.12ರಿಂದ 20ರವರೆಗೆ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರವಾಸಕ್ಕೆ ಹೋಗುವವರಿಗೆ ಮಳೆ ಅಡ್ಡಿ ಉಂಟು ಮಾಡೋ ಸಾಧ್ಯತೆಯಿದ್ದು, ಸತತ ಎರಡು ವಾರಗಳ ಕಾಲ ಮಳೆಯಾಗುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಟ್ವೀಟ್ ಮಾಡಿ ಮಾಹಿತಿಯನ್ನು ಶೇರ್ ಮಾಡಿದೆ.
ಕರ್ನಾಟಕದ ಭೂಪಟವೊಂದನ್ನು ಪ್ರಕಟಿಸಿ ಅದರಲ್ಲಿ ಸಾಧಾರಣ ಮಳೆ ಬೀಳುವ ಪ್ರಾಂತ್ಯಗಳನ್ನು ಇಲಾಖೆ ಗುರುತಿಸಿದೆ. ಹೆಚ್ಚು, ಸಾಧಾರಣ, ಭಾರೀ ಮಳೆಯಾಗುವ ಪ್ರಾಂತ್ಯಗಳನ್ನು ಗುರುತಿಸಿ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆ, ತುಮಕೂರಿನ ಮಧ್ಯ ಹಾಗೂ ಪೂರ್ವ ಭಾಗದ ತಾಲೂಕುಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದ ಮಧ್ಯಭಾಗದಲ್ಲಿ ಭಾರೀ ಮಳೆಯಾಗಲಿದ್ದು, ಕೊಪ್ಪಳದ ಪೂರ್ವ ಭಾಗ, ರಾಯಚೂರಿನ ದಕ್ಷಿಣ ಭಾಗದ ತಾಲೂಕುಗಳಲ್ಲಿ ಬೀದರ್‌ನಲ್ಲಿ ಸಾಧಾರಣ, ಅಂದರೆ, 5 ಮಿ.ಮೀ.ನಿಂದ ಗರಿಷ್ಠ 16 ಮಿ.ಮೀ.ನಷ್ಟು ಮಳೆ ಸಾಧ್ಯತೆಯಿದೆ.
ಮುಖ್ಯಮಂತ್ರಿ ಆಗುವ ಸಿದ್ದು, ಡಿಕೆಶಿ ಕನಸು ನನಸಾಗಲ್ಲ: ಸಿಎಂ ಬೊಮ್ಮಾಯಿ
ಭಾರಿ ಗಾಳಿ-ಮಳೆ; 14 ವಿಮಾನಗಳ ಮಾರ್ಗ ಬದಲು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ಮಂಗಳವಾರ ಸಂಜೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲೂ ಮಳೆಯಾಗಿದ್ದು, ಹವಾಮಾನ ವೈಪರಿತ್ಯದ ಕಾರಣ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ವಿಮಾನ ನಿಲ್ದಾಣ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಒಟ್ಟು 14 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.
ಆ ಪೈಕಿ ಚೆನ್ನೈ ವಿಮಾನ ನಿಲ್ದಾಣಕ್ಕೆ 12, ಕೊಯಮತ್ತೂರು ವಿಮಾನ ನಿಲ್ದಾಣ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತಲಾ ಒಂದೊಂದು ವಿಮಾನಗಳನ್ನು ಮಾರ್ಗ ಬದಲಾಯಿಸಿ ಕಳುಹಿಸಲಾಗಿದೆ. ಇಂಡಿಗೋ ಸಂಸ್ಥೆಯ 7, ವಿಸ್ತಾರದ 3, ಆಕಾಸದ 2 ಮತ್ತು ಗೋ ಏರ್ ಸಂಸ್ಥೆಯ 1 ವಿಮಾನದ ಮಾರ್ಗ ಬದಲಾಯಿಸಲಾಗಿದೆ. ಜತೆಗೆ 4 ವಿಮಾನಗಳ ಸಂಚಾರ ವಿಳಂಬವಾಗಿದೆ ಎನ್ನಲಾಗಿದ್ದು, ಭಾರಿ ಗಾಳಿ, ಬಿರುಮಳೆ ಕಾರಣ ಸಂಜೆ 4 ರಿಂದ 5 ಗಂಟೆಯೊಳಗಿನ ಸಮಯದ ವಿಮಾನಗಳ ಹಾರಾಟ ವ್ಯತ್ಯಯವಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ವೈರಲ್: ಕಾಂಗ್ರೆಸ್ ವಿರುದ್ಧ ಕಿಡಿ
ಹೊಸ ಮೆಟ್ರೋ ನಿಲ್ದಾಣಕ್ಕೆ ನೀರು: ಇತ್ತೀಚೆಗೆ ಉದ್ಘಾಟನೆಯಾದ ಕೆ.ಆರ್.ಪುರ-ವೈಟ್‌ಫೀಲ್ಡ್ ಮಾರ್ಗದ ಕೆಲ ಮೆಟ್ರೋ ನಿಲ್ದಾಣಗಳ ಪ್ಲಾಟ್‌ಫಾಮ್‌ರ್‍ನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯ ನೀರು ಆವರಿಸಿ ಪ್ರಯಾಣಿಕರು ತೊಂದರೆಗೀಡಾದರು. ನಲ್ಲೂರುಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಳೆ ನೀರು ಸೋರಿ ಪ್ಲಾಟ್‌ಫಾಮ್‌ರ್, ಟಿಕೆಟ್ ಕೌಂಟರ್, ಭದ್ರತಾ ತಪಾಸಣೆ ಸ್ಥಳದಲ್ಲಿ ನೀರು ಒಳನುಗ್ಗಿತ್ತು. ಜೊತೆಗೆ ಪಟ್ಟಂದೂರು ಅಗ್ರಹಾರದ ಮೆಟ್ರೋ ನಿಲ್ದಾಣದಲ್ಲೂ ಕಾನ್‌ಕಾರ್ಸ್ ಮಟ್ಟದಲ್ಲಿ ನೀರು ಸೇರಿತ್ತು. ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ಮೆಟ್ರೋದ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಿ ಮಳೆ ನೀರನ್ನು ಹೊರಚೆಲ್ಲಲಾಯಿತು.
