Asianet Suvarna News Asianet Suvarna News

Weather Forecast: ಇನ್ನೂ 2 ದಿನ ಗುಡುಗು ಸಹಿತ ಮಳೆ: ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ಮುನ್ಸೂಚನೆ

ನಗರದ ಮೆಜೆಸ್ಟಿಕ್‌, ಗಾಂಧಿನಗರ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಸೋಮವಾರ ರಾತ್ರಿ 9ರ ಸುಮಾರಿಗೆ ಧಾರಾಕಾರ ಮಳೆ ಸುರಿದಿದ್ದು, ಬೇಸಿಗೆ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ನಗರ ತಂಪಾಯಿತು.

Chance of rain with thunder for two more days Meteorological department forecast rav
Author
First Published Apr 4, 2023, 10:59 AM IST

ಬೆಂಗಳೂರು (ಏ.4) : ನಗರದ ಮೆಜೆಸ್ಟಿಕ್‌, ಗಾಂಧಿನಗರ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಸೋಮವಾರ ರಾತ್ರಿ 9ರ ಸುಮಾರಿಗೆ ಧಾರಾಕಾರ ಮಳೆ ಸುರಿದಿದ್ದು, ಬೇಸಿಗೆ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ನಗರ ತಂಪಾಯಿತು.

ಹಲವು ದಿನಗಳಿಂದ ಬಿಸಿಲಿನ ತಾಪದಿಂದ ತತ್ತರಿಸಿದ್ದ ನಗರದಲ್ಲಿ ಸೋಮವಾರ ಸಂಜೆಯಿಂದ ಮೋಡ ಕವಿದ ವಾತಾವರಣ ಕಂಡುಬಂತು. ರಾತ್ರಿ 9ರ ಸುಮಾರಿಗೆ ಹಲವು ಪ್ರದೇಶಗಳಲ್ಲಿ ತುಂತುರು ಮಳೆ ಶುರುವಾಗಿತ್ತು. ನಂತರ ಬಹುತೇಕ ಕಡೆ ಗುಡುಗು-ಸಿಡಿಲು ಸಹಿತ ಮಳೆ ಸುರಿಯಿತು.

IPL 2023 ಎರಡನೇ ಪಂದ್ಯ ಮಳೆಗೆ ಆಹುತಿ, DLS ಮೂಲಕ ಕೆಕೆಆರ್ ವಿರುದ್ಧ ಪಂಜಾಬ್‌ಗೆ 7 ರನ್ ಗೆಲುವು!

ಮೆಜೆಸ್ಟಿಕ್‌, ರಾಜಾಜಿನಗರ, ಚಾಮರಾಜಪೇಟೆ, ಮಹಾಲಕ್ಷ್ಮಿ ಲೇಔಟ್‌, ಮಲ್ಲೇಶ್ವರ, ಗೋವಿಂದರಾಜ ನಗರ, ವಿಜಯ ನಗರ, ಕುರುಬರಹಳ್ಳಿ, ಸಂಜಯ ನಗರ, ಯಶವಂತಪುರ, ಶಿವಾನಂದ ವೃತ್ತ, ಶೇಷಾದ್ರಿಪುರಂ, ಹೆಬ್ಬಾಳ, ಮೈಸೂರು ರಸ್ತೆ, ಸಂಪಂಗಿರಾಮ ನಗರ, ಕುರುಬರಹಳ್ಳಿ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ ಅರ್ಧ ಗಂಟೆಗಿಂತ ಹೆಚ್ಚು ಸಮಯ ಜೋರಾದ ಮಳೆ ಸುರಿಯಿತು.

ಏಕಾಏಕಿ ಮಳೆ ಸುರಿದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು. ಮೇಲ್ಸೇತುವೆಗಳ ಕೆಳಗೆ, ಬಸ್‌ ನಿಲ್ದಾಣಗಳಲ್ಲಿ ಆಶ್ರಯ ಪಡೆದರು. ಮಳೆಯಿಂದಾಗಿ ಗಿಡ, ಮರಗಳು, ಕಟ್ಟಡಗಳ ಮೇಲೆ ಕುಳಿತಿದ್ದ ಧೂಳು ತೊಳೆಯಿತು. ಇನ್ನು ಕೆಲವೆಡೆ ಚರಂಡಿಗಳ ಹೂಳು ತೆಗೆದಿದ್ದರಿಂದ ನೀರು ಸರಾಗವಾಗಿ ಹರಿಯಿತು. ಕೆಲ ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ಸಮಸ್ಯೆ ತಂದೊಡ್ಡಿತು. ಸಂಜಯ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್‌ ಸ್ಥಗಿತಗೊಳಿಸಲಾಗಿತ್ತು.

ಇನ್ನೂ 2 ದಿನ ಮಳೆ ಸಾಧ್ಯತೆ

ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ. ಹವಾಮಾನ ವೈಪರೀತ್ಯದ ಪರಿಣಾಮ ನಗರದಲ್ಲಿ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂದು ಮಳೆ ಸಾಧ್ಯತೆ ಇದೆ. ಸುವರ್ಣನ್ಯೂಸ್ ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 
ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಭಾಗಗಳಿಗೆ ಮಳೆ ಸಾಧ್ಯತೆ. ಕರಾವಳಿ, ಉತ್ತರ ಒಳನಾಡಿನಲ್ಲಿ ಎರಡು ದಿನ ಒಣಹವೆ ಮುಂದುವರಿಕೆ 

ಕರ್ನಾಟಕದಲ್ಲಿ ಅಕಾಲಿಕ ಮಳೆ: ಸಿಡಿಲು ಬಡಿದು ಇಬ್ಬರ ಸಾವು

 

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರವೂ ಸಂಜೆ ಅಥವಾ ರಾತ್ರಿ ಸಂದರ್ಭದಲ್ಲಿ ಮೋಡದ ವಾತಾವರಣ ಇರಲಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ನಗರದ ಬಹುತೇಕ ಕಡೆ ಮಳೆ ಆಗಿದೆ. ಹಾನಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ 

 ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ 

Follow Us:
Download App:
  • android
  • ios