Asianet Suvarna News Asianet Suvarna News

ಭವಿಷ್ಯದ ಎಂಜಿನಿಯರ್‌ಗಳಿಗೆ ಈ ಪ್ರಶಸ್ತಿ ಸ್ಫೂರ್ತಿ: ವಿದ್ಯಾಶಂಕರ್‌

ಜಲಾಶಯ, ವಿದ್ಯುತ್ ಉತ್ಪಾದನೆ, ಉಕ್ಕಿನ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಭಾರತ ರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಅವರಂತಹ ದೂರದೃಷ್ಟಿಯ ಪ್ರತಿಭಾನ್ವಿತ ಎಂಜಿನಿಯರನ್ನು ಈ ದೇಶಕ್ಕೆ ಕರ್ನಾಟಕ ನೀಡಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ. ಕರ್ನಾಟಕದಿಂದಲೇ 1 ಲಕ್ಷ ಜನ ಪದವೀಧರರಾಗುತ್ತಿದ್ದಾರೆ: ಡಾ. ವಿದ್ಯಾಶಂಕರ್ 

This Award is an Inspiration for Future Engineers Says Chancellor of VTU Dr Vidyashankar grg
Author
First Published Oct 29, 2023, 10:21 AM IST

ಬೆಂಗಳೂರು(ಅ.29): ಸಾಧನೆ ಮಾಡಿರುವ ಎಂಜಿನಿಯರ್‌ಗಳಿಗೆ ಪ್ರಶಸ್ತಿ ನೀಡುವ ಮೂಲಕ ಭವಿಷ್ಯದ ಎಂಜಿನಿಯರ್‌ಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ‘ಎಮಿನೆಂಟ್ ಎಂಜಿನಿಯರ್ ಅವಾರ್ಡ್-2023’ ಮೂಲಕ ಕನ್ನಡಪ್ರಭ ಪತ್ರಿಕೆ ಮತ್ತು ಸುವರ್ಣ ನ್ಯೂಸ್ ಸುದ್ದಿ ವಾಹಿನಿಯಿಂದ ಆಗಿದೆ ಎಂದು ವಿಟಿಯು ಕುಲಪತಿ ಡಾ. ವಿದ್ಯಾಶಂಕರ್ ಹೇಳಿದರು.

‘ಜಲಾಶಯ, ವಿದ್ಯುತ್ ಉತ್ಪಾದನೆ, ಉಕ್ಕಿನ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಭಾರತ ರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಅವರಂತಹ ದೂರದೃಷ್ಟಿಯ ಪ್ರತಿಭಾನ್ವಿತ ಎಂಜಿನಿಯರನ್ನು ಈ ದೇಶಕ್ಕೆ ಕರ್ನಾಟಕ ನೀಡಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ. ಕರ್ನಾಟಕದಿಂದಲೇ 1 ಲಕ್ಷ ಜನ ಪದವೀಧರರಾಗುತ್ತಿದ್ದಾರೆ’ ಎಂದು ಡಾ. ವಿದ್ಯಾಶಂಕರ್ ತಿಳಿಸಿದರು.

ಎಂಜಿನಿಯರ್‌ಗಳಿಲ್ಲದ ಜೀವನ ಊಹಿಸಲು ಅಸಾಧ್ಯ: ನಟ ಸತೀಶ ನೀನಾಸಂ

ಎಂಜಿನಿಯರಿಂಗ್ ಕ್ಷೇತ್ರದಲ್ಲೇ ಅತಿ ಹೆಚ್ಚು ಸಂಖ್ಯೆಯ ಅವಿಷ್ಕಾರಗಳು, ಸಾಧನೆಗಳಾಗಿವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂಜಿನಿಯರುಗಳಿಗೆ ಪ್ರಶಸ್ತಿ ನೀಡುವ ಜೊತೆಗೆ ಭವಿಷ್ಯದ ಹೊಸ ಎಂಜಿನಿಯರ್‌ಗಳಿಗೆ ಪ್ರೋತ್ಸಾಹ ನೀಡುವ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗಿದೆ. ಪ್ರಶಸ್ತಿ ಪಡೆದ ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಸಾಧನೆ ಗುರುತಿಸಿ ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ನೀಡಿದ ಕನ್ನಡ ಪ್ರಭ - ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಮೂಲಕವೂ ಎಂಜಿನಿಯರ್‌ಗಳಿಗೆ ಅವಾರ್ಡ್ ನೀಡಬೇಕು ಎನ್ನುವ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನಮಗೆ ನೀಡಲಾಗಿದೆ ಎಂದು ಡಾ.ವಿದ್ಯಾಶಂಕರ್ ಹೇಳಿದರು.

Follow Us:
Download App:
  • android
  • ios