ಎಂಜಿನಿಯರ್‌ಗಳಿಲ್ಲದ ಜೀವನ ಊಹಿಸಲು ಅಸಾಧ್ಯ: ನಟ ಸತೀಶ ನೀನಾಸಂ
ಮಕ್ಕಳಿಗೆ ನೀನು ಎಂಜಿನಿಯರ್ ಆಗುತ್ತಿಯಾ? ಡಾಕ್ಟರ್ ಆಗುತ್ತಿಯಾ? ಎಂದು ಕೇಳುತ್ತಾರೆ. ಈ ಮಾತು ಕೇಳುವಾಗಲೇ ಎಂಜಿನಿಯರ್‌ಗಳ ಪಾತ್ರ ಎಂತಹದು ಎಂದು ಗೊತ್ತಾಗುತ್ತದೆ. ನಮ್ಮ ದೇಶದಲ್ಲಿ ಅಪಾರ ಸಂಖ್ಯೆಯ ಎಂಜಿನಿಯರ್‌ಗಳಿದ್ದಾರೆ. ಆದರೂ, ಸಾಕಾಗುವುದಿಲ್ಲ. ದೇಶ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ: ನಟ ಸತೀಶ ನೀನಾಸಂ

ಬೆಂಗಳೂರು(ಅ.29): ಎಂಜಿನಿಯರ್‌ಗಳೆಂದರೆ ನಂಬಿಕೆ. ಅವರಿಲ್ಲದ ನಮ್ಮ ದೈನಂದಿನ ಜೀವನವನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂದು ಖ್ಯಾತ ನಟ ಸತೀಶ ನೀನಾಸಂ ಅಭಿಪ್ರಾಯಪಟ್ಟರು.
ಪ್ರತಿಯೊಂದು ಕ್ಷೇತ್ರದಲ್ಲೂ ಎಂಜಿನಿಯರ್‌ಗಳು ಆವರಿಸಿಕೊಂಡಿದ್ದಾರೆ. ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೆಲ ನಿಮಿಷ ವಿದ್ಯುತ್ ಕಡಿತಗೊಂಡರೆ ಎದುರಾಗುವ ಸಮಸ್ಯೆಗಳ ಅರಿವಾದಾಗ ಎಂಜಿನಿಯರ್‌ಗಳ ಪಾತ್ರ ಏನೆಂದು ಗೊತ್ತಾಗುತ್ತದೆ. ಎಂಜಿನಿಯರ್‌ಗಳೆಂದರೆ ನಂಬಿಕೆ ಎಂದರ್ಥ. ಅವರು ನಿರ್ಮಿಸಿರುವ ಸೇತುವೆ ಮೇಲೆ ಓಡಾಡುತ್ತೇವೆ. ಕಾರು, ಬೈಕ್‌ನಲ್ಲಿ ಓಡಾಡುತ್ತೇವೆ. ಏಕೆಂದರೆ, ಅವರು ಜನರಿಗಾಗಿ ಒಳಿತನ್ನೇ ಮಾಡುತ್ತಾರೆ ಎಂದು ನಂಬುತ್ತೇವೆ. ಸಿನಿಮಾ ನಿರ್ಮಾಣದ ಹಿಂದೆಯು ಎಂಜಿನಿಯರ್‌ಗಳ ಪಾತ್ರ ದೊಡ್ಡದಿದೆ ಎಂದು ಅವರು ಹೇಳಿದರು.
ಎಮಿನೆಂಟ್ ಇಂಜಿನಿಯರ್ ಅವಾರ್ಡ್ ಕಾರ್ಯಕ್ರಮ: ಸಾಧನೆಗೈದ 25 ಇಂಜಿನಿಯರ್‌ಗಳಿಗೆ ಗೌರವ
‘ಮಕ್ಕಳಿಗೆ ನೀನು ಎಂಜಿನಿಯರ್ ಆಗುತ್ತಿಯಾ? ಡಾಕ್ಟರ್ ಆಗುತ್ತಿಯಾ? ಎಂದು ಕೇಳುತ್ತಾರೆ. ಈ ಮಾತು ಕೇಳುವಾಗಲೇ ಎಂಜಿನಿಯರ್‌ಗಳ ಪಾತ್ರ ಎಂತಹದು ಎಂದು ಗೊತ್ತಾಗುತ್ತದೆ. ನಮ್ಮ ದೇಶದಲ್ಲಿ ಅಪಾರ ಸಂಖ್ಯೆಯ ಎಂಜಿನಿಯರ್‌ಗಳಿದ್ದಾರೆ. ಆದರೂ, ಸಾಕಾಗುವುದಿಲ್ಲ. ದೇಶ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ’ ಎಂದು ನುಡಿದರು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ಪಡೆದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆನ್ನು ತಟ್ಟಿ ಸಾಧನೆ ಮಾಡಲು ಶಕ್ತಿಯಾಗಿ ನಿಲ್ಲುವ ಮಹತ್ವದ ಕೆಲಸ ಮಾಡುತ್ತಿರುವ ಕನ್ನಡ ಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸತೀಶ್ ಅವರು ಧನ್ಯವಾದ ಹೇಳಿದರು.