ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿರುವ ‘ಪ್ಲಾಟ್‌ಫಾರಂ- 65’ ಹೋಟೆಲ್‌ ಪ್ರತಿ ಟೇಬಲ್‌ಗೂ ಒಂದೊಂದು ನಿಲ್ದಾಣದ ಹೆಸರು ಕಿಚನ್‌ನಿಂದಲೇ ಪ್ರತಿ ಟೇಬಲ್‌ಗೆ ಹಳಿಗಳ ಜೋಡಣೆ

ಬೆಂಗಳೂರು (ಜೂ.9) : ರೊಬೋಟ್‌ ಮೂಲಕ ಗ್ರಾಹಕರಿಗೆ ಊಟ, ತಿಂಡಿ ಸರಬರಾಜು ಮಾಡುವುದು ಟ್ರೇಂಡ್‌ ಆದ ಬೆನ್ನಲ್ಲೇ ಇದೀಗ ನಗರದಲ್ಲೇ ಮೊಟ್ಟಮೊದಲ ಬಾರಿಗೆ ಅಟಿಕೆ ರೈಲುಗಳ ಮೂಲಕ ನಿಮ್ಮ ನಿಮ್ಮ ಟೇಬಲ್‌ಗೆ ಊಟ, ತಿಂಡಿ ತರುವ ವಿನೂತನ ಹೋಟೆಲ್‌ವೊಂದು ಕಾರ್ಯಾರಂಭ ಮಾಡಿದೆ.

ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್‌ ಮತ್ತು ತಮಿಳುನಾಡಿನಲ್ಲಿ ಹಾಗೂ ರಾಜ್ಯದ ಹುಬ್ಬಳ್ಳಿಯಲ್ಲಿ ಈಗಾಗಲೇ ಅಟಿಕೆ ಟ್ರೈನ್‌ಗಳ ಮೂಲಕ ಆಹಾರ ತಲುಪಿಸುವ ಹೋಟೆಲ್‌ಗಳಿವೆ. ಇದೇ ಮೊದಲ ಬಾರಿಗೆ ನಗರದಲ್ಲಿ ಇಂತಹ ಹೋಟೆಲ್‌ ಬನ್ನೆರುಘಟ್ಟಮುಖ್ಯ ರಸ್ತೆಯಲ್ಲಿರುವ ಕ್ರೈಸ್ಟ್‌ ವಿವಿಯ ಮುಂಭಾಗದಲ್ಲಿ ಪ್ರಾರಂಭಗೊಂಡಿದೆ. ಹೆಸರು- ‘ಪ್ಲಾಟ್‌ಫಾರಂ 65’.

Uttara Kannada; ರಾಜ್ಯಕ್ಕೆ ಮಾದರಿ ಈ ಕೃಷಿ ಪಾಠದ ಶಾಲೆ!

ಈ ಹೊಟೇಲ್‌ನಲ್ಲಿ ನಿಮ್ಮ ಆರ್ಡರ್‌ ಅನ್ನು ನಿಮ್ಮ ಟೇಬಲ್‌ಗೆ ಉಗಿಬಂಡಿ ತಂದು ಕೊಡುತ್ತದೆ. ಈ ಹೊಟೇಲ್‌ನ ಪ್ರತಿ ಟೇಬಲ್‌ಗೂ ಒಂದೊಂದು ರೈಲು ನಿಲ್ದಾಣದ ಹೆಸರನ್ನಿಡಲಾಗಿದೆ. ಪ್ರತಿ ಟ್ರ್ಯಾಕ್‌ಗೂ ಮಹಾನಗರಗಳ ಹೆಸರಿಡಲಾಗಿದೆ. ಯಾವುದೇ ಟೇಬಲ್‌ನಲ್ಲಿ ಕುಳಿತರೂ ನಿರ್ದಿಷ್ಟಹಳಿಯ ಮೂಲಕ ಚಲಿಸುವ ರೈಲು ಅಲ್ಲಿಗೆ ಆಹಾರ ತಲುಪಿಸುತ್ತದೆ. ಇದಕ್ಕಾಗಿ ಕಿಚನ್‌ ರೂಮ್‌ ನಿಂದ ರೈಲಿನ ಮೇಲೆ ಆಹಾರವನ್ನಿಟ್ಟು ಮಾರ್ಗ ಮತ್ತು ಟೇಬಲ್‌ಗೆ ನಿಗದಿ ಪಡಿಸಿದ ಕೋಡ್‌ ಇರುವ ಬಟನ್‌ ಒತ್ತಲಾಗುತ್ತದೆ.

ಸುಮಾರು 1,100 ಅಡಿಗಳಷ್ಟುಉದ್ದದ ರೈಲ್ವೇ ಹಳಿ ಇದೆ. ಹಳಿಯನ್ನು ತಾಮ್ರ ಮತ್ತು ಹಿತ್ತಾಳೆ ಬಳಸಿ ನಿರ್ಮಿಸಲಾಗಿದೆ. ವಿದ್ಯುತ್‌ ಚಾಲಿತ ಇಂಜಿನ್‌ ಅನ್ನು ನಾವೇ ನಿರ್ಮಿಸಿದ್ದೇವೆ ಎಂದು ಸಂಸ್ಥೆಯ ಕಾರ್ಪೋರೇಟ್‌ ಜನರಲ್‌ ಮ್ಯಾನೇಜರ್‌ ಶ್ರಿಕಾಂತ್‌ ಹೇಳುತ್ತಾರೆ.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ, Tumakuruನಲ್ಲಿ ಜೂ. 9ರಂದು ವಿವಿಧ ಸ್ಪರ್ಧೆಗಳು

ಮಾಲೂರು ಶಾಸಕನ ಬರ್ತಡೇಯಲ್ಲಿ ಬಿರಿಯಾನಿಗಾಗಿ ಹೋರಾಟ! : 

ಇವತ್ತು ಆ ಕ್ಷೇತ್ರದ ಶಾಸಕನ ಹುಟ್ಟಿದ ಹಬ್ಬದ ಸಂಭ್ರಮ, ಹುಟ್ಟು ಹಬ್ಬದ ಸಂಭ್ರಮದಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರು ಒಂದೆಡೆ ಕುಣಿದು ಕುಪ್ಪಳಿಸುತ್ತಿದ್ದರೆ, ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರು ಬಿರಿಯಾನಿಗಾಗಿ (Biriyani) ನಾಮುಂದು ತಾ ಮುಂದು ಎಂದು ಹೋರಾಟ ಮಾಡಿದ್ರೆ, ಸಾಮಾನ್ಯ ಜನರು ಟ್ರಾಫಿಕ್​ ಜಾಮ್​ನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಒಂದೆಡೆ ರಸ್ತೆ ಮಧ್ಯದಲ್ಲಿ ಶಾಸಕರಿಗೆ ಹೂವಿನ ಸುರಿಮಳೆ ಸುರಿಸಿ ಪಟಾಕಿ ಸಿಡಿಸಿ ಮನೆಯವರೆಲ್ಲಾ ಕುಣಿದು ಕುಪ್ಪಳಿಸುತ್ತಿದ್ದರೆ, ಇನ್ನೊಂದೆಡೆ ಟ್ರಾಫಿಕ್​ನಿಂದ ಸಾಲುಗಟ್ಟಿ ನಿಂತಿರುವ ವಾಹನಗಳು, ಇನ್ನೊಂದೆಡೆ ಬಿರಿಯಾನಿಗಾಗಿ ಮುಗಿಬಿದ್ದಿರುವ ಜನರು ಇಂಥಾದೊಂದು ದೃಶ್ಯ ಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ. 

ಹೌದು ಇವತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಹುಟ್ಟಿದ ಹಬ್ಬ. ಅದರ ಪ್ರಯುಕ್ತ ಶಾಸಕರ ಬೆಂಬಲಿಗರು ಹಾಗೂ ಕಾರ್ಯಕರ್ತರು ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಇಂದು ಬೆಳಿಗ್ಗೆ ಯಿಂದಲೇ ಸಾವಿರಾರು ಜನರು ಶಾಸಕ ನಂಜೇಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದಿದ್ದರು. ಅದಕ್ಕಾಗಿ ಮಾಲೂರು ಪಟ್ಟಣದ ಇಂದಿರಾ ಕ್ಯಾಂಟೀನ್​ ಬಳಿ ಬೃಹತ್​ ವೇದಿಕೆಯನ್ನು ಹಾಕಲಾಗಿತ್ತು.

ಇನ್ನು ವೇದಿಕೆಗೆ ಶಾಸಕರನ್ನು ಕರೆ ತರುವ ಮಾರ್ಗ ಮಧ್ಯದಲ್ಲಿ ದಾರಿಯುದ್ದಕ್ಕೂ ಹೂವಿನ ಸುರಿಮಳೆ ಸರಿಸಿಕೊಂಡು ಪಟಾಕಿ ಸಿಡಿಸಿ, ಬೃಹತ್​ ಸೇಬಿನಹಾರ ಹಾಕಿ, ಹೀಗೆ ವಿವಿಧ ವಿಧವಾಗಿ ಶಾಸಕರಿಗೆ ಕಾರ್ಯಕರ್ತರು ಖುಷಿ ಪಡಿಸುತ್ತಿದ್ದರು. ಇನ್ನು ಶಾಸಕರು ಈ ಮೆರವಣಿಗೆ ಮಾಲೂರಿನ ಪ್ರಮುಖ ಬೀದಿಗಳಲ್ಲಿ ಬರುತ್ತಿದ್ದರೆ ಮಾಲೂರಿನ ಮುಖ್ಯ ರಸ್ತೆಯಲ್ಲಿ ಗಂಟೆಕಾಲ ಟ್ರಾಫಿಕ್ ಜಾಮ್​ ಆಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇದೊಂದು ಕಡೆಯಾದರೆ ಬರ್ತಡೇ ಪ್ರಯುಕ್ತ ಬೃಹತ್​ ವೇದಿಕೆಯಲ್ಲಿ ಶಾಸಕರ ಬೆಂಬಲಿಗರು, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ, ಆಶಾ ಕಾರ್ಯಕರ್ತೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೀರೆ ಉಡುಗೊರೆ, ಎಸ್​ಎಸ್​ಎಲ್​ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಧನ ಹಾಗೂ ಸನ್ಮಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಇದೇ ವೇಳೆ ಮಾತನಾಡಿದ ಶಾಸಕ ನಂಜೇಗೌಡ ಇದ್ಯಾವುದು ಚುನಾವಣಾ ಗಿಮಿಕ್​ ಅಲ್ಲಾ ಎಂದ್ರು.

ಇನ್ನು ಒಂದೆಡೆ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಸಾವಿರಾರು ಸಂಖ್ಯೆಯ ಜನರು ಜಮಾಹಿಸಿದ್ದರು, ಕಾರ್ಯಕ್ರಮದಲ್ಲಿ ವಿಧಾನಪರಿಷತ್​ ಸದಸ್ಯ ಅನಿಲ್​ ಕುಮಾರ್​, ಸೇರಿದಂತೆ ಸ್ಥಳೀಯ ಮುಖಂಡರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಶಾಸಕರ ಸಾಧನೆಗಳನ್ನು ಹಾಗೂ ಕಾಂಗ್ರೆಸ್​ ಪಕ್ಷದ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದರೆ, ವೇದಿಕೆಯ ಪಕ್ಕದಲ್ಲೇ ಇನ್ನೊಂದು ಕಡೆ ಕಾರ್ಯಕರ್ತರಿಗಾಗಿ ಚಿಕನ್​ ಬಿರಿಯಾನಿ ಮಾಡಿಸಲಾಗುತ್ತಿತ್ತು. 

ಕಾರ್ಯಕ್ರಮದ ಮಧ್ಯದಲ್ಲೇ ಬಿರಿಯಾನಿ ವಾಸನೆ ಮೂಗಿಗೆ ಬಡಿದದ್ದೇ ಅಲ್ಲಿದ್ದ ಕಾರ್ಯಕರ್ತರೆಲ್ಲರೂ ಪಕ್ಕದ ಬಿರಿಯಾಗಿ ಸುತ್ತ ಜಮಾಯಿಸಿದ್ದರು. ಕೈಗಳಲ್ಲಿ ಪ್ಲೇಟ್​ ಹಿಡಿದುಕೊಂಡು ನನಗೊಂದು ಪೀಸ್​, ನನಗೆ ಮೊದಲು ,ಇಲ್ಲೊಂದು ಚೂರು ಹಾಕಿ, ಅಂತ ಮುಗಿ ಬೀಳು ಶುರು ಮಾಡಿಕೊಂಡಿದ್ದರು, ಅಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದರಾದರೂ ಅದು ಬಿರಿಯಾನಿ ಮುಂದೆ ಸಾಧ್ಯವಾಗದೇ ಅವರೇ ಸುಸ್ತು ಹೊಡೆದು ಹಿಂದೆ ಬಿದ್ದರು.