Asianet Suvarna News Asianet Suvarna News

ರಾಯಚೂರು ಗೌಸ್ ಪ್ರಕರಣ: ಇ​ನ್ನೊ​ಬ್ಬರು ಬೆದ​ರಿಕೆ ಹಾಕಿ​ದರೆ ಬೇಲ್‌ ರದ್ದತಿ ಇಲ್ಲ: ಹೈಕೋರ್ಟ್

ಮಿ​ನಲ್‌ ಪ್ರಕ​ರ​ಣ​ವೊಂದ​ರಲ್ಲಿ ಜಾಮೀನು ಪಡೆದಿರು​ವ ಆರೋ​ಪಿಯ ಸಂಬಂಧಿ​ಕ​ರು, ಮತ್ತೊಬ್ಬ ಆರೋ​ಪಿ​ಗೆ ತನಿ​ಖೆಗೆ ಸಹ​ಕ​ರಿ​ಸ​ದಂತೆ ಬೆದ​ರಿಕೆ ಹಾಕಿ​ದಲ್ಲಿ, ಮೊದಲ ಆರೋ​ಪಿ​ಗೆ ಮಂಜೂ​ರಾ​ಗಿದ್ದ ಜಾಮೀ​ನನ್ನು ರದ್ದು ಮಾಡುವ ಅಧಿ​ಕಾರವಿಲ್ಲ ಎಂದುಹೈಕೋರ್ಟ್ ಸ್ಪಷ್ಟ​ಪ​ಡಿ​ಸಿ​ದೆ.

There is no cancellation of bail if another person threatens say highcourt ravjkl
Author
First Published Nov 29, 2022, 9:22 PM IST

ಬೆಂಗಳೂರು (ನ.29) : ಕ್ರಿಮಿ​ನಲ್‌ ಪ್ರಕ​ರ​ಣ​ವೊಂದ​ರಲ್ಲಿ ಜಾಮೀನು ಪಡೆದಿರು​ವ ಆರೋ​ಪಿಯ ಸಂಬಂಧಿ​ಕ​ರು, ಮತ್ತೊಬ್ಬ ಆರೋ​ಪಿ​ಗೆ ತನಿ​ಖೆಗೆ ಸಹ​ಕ​ರಿ​ಸ​ದಂತೆ ಬೆದ​ರಿಕೆ ಹಾಕಿ​ದಲ್ಲಿ, ಮೊದಲ ಆರೋ​ಪಿ​ಗೆ ಮಂಜೂ​ರಾ​ಗಿದ್ದ ಜಾಮೀ​ನನ್ನು ರದ್ದು ಮಾಡುವ ಅಧಿ​ಕಾರವಿಲ್ಲ ಎಂದುಹೈಕೋರ್ಟ್ ಸ್ಪಷ್ಟ​ಪ​ಡಿ​ಸಿ​ದೆ.

ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರಾಯಚೂರು ಮೂಲದ ಅಬ್ದುಲ್‌ ಖಾದಿರ್‌ ಗೌಸ್‌ ಪೀರ್‌ಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಮಾದಕ ವಸ್ತುಗಳ ನಿಯಂತ್ರಣ ಕಚೇರಿಯ ಗುಪ್ತಚರ ಅಧಿಕಾರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಜಡ್ಜ್‌​ ನೇಮಕ ವಿಳಂಬ: ಸುಪ್ರೀಂ ಗರಂ; ಕೇಂದ್ರದಿಂದ ಮತ್ತೆ 20 ನ್ಯಾಯಮೂರ್ತಿಗಳ ಹೆಸರು ವಾಪಸ್..!

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ, ಪ್ರಕರಣದ ಮೊದಲನೆ ಆರೋಪಿ ಅಬ್ದುಲ್‌ ಖಾದಿರ್‌ ಗೌಸ್‌ ಪೀರ್‌ಗೆ ಜಾಮೀನು ನೀಡುವ ವೇಳೆ ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂದು ವಿಧಿಸಿರುವ ಷರತ್ತನ್ನು ಉಲ್ಲಂಘಿಸಿಲ್ಲ. ಆದರೆ ಆತನ ಸಹೋದರ ರಿಯಾಜ್‌ ಎಂಬಾತ ಪ್ರಕರಣದ ಎರಡನೇ ಆರೋಪಿ ಮತ್ತು ಆತನ ಪತ್ನಿಯನ್ನು ಹಲವು ಸಂಪರ್ಕಿಸಿ ಎನ್‌ಸಿಬಿ ತನಿಖಾಧಿಕಾರಿಯ ಮುಂದೆ ಹಾಜರಾಗುವುದನ್ನು ತಪ್ಪಿಸುವ ಮೂಲಕ ವಿಚಾರಣೆಗೆ ಸಹಕರಿಸದಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಇದು ಆರೋಪಿ ಗೌಸ್‌ಗೆ ನೀಡಿರುವ ಜಾಮೀನನ್ನು ರದ್ದುಪಡಿಸಲು ಸ್ವಯಂಚಾಲಿತವಾಗಿ ಅವಕಾಶ ಮಾಡಿಕೊಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇನ್ನು ಎರಡನೇ ಆರೋಪಿಗೆ ಗೌಸ್‌ ಸಹೋದರ ಬೆದರಿಕೆ ಹಾಕಿದ್ದಾನೆ ಎಂದಾದರೆ ಆತನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಗೌಸ್‌ ಅವರ ರಾಯಚೂರಿನ ಬಟ್ಟೆಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಂಚೆ ಮೂಲಕ ವಿದೇಶದಿಂದ ಮಾದಕ ದ್ರವ್ಯ ರವಾನೆಯಾಗಿತ್ತು. ಬೆಂಗಳೂರಿನ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ಭೇಟಿ ನೀಡಿದ್ದ ಎನ್‌ಸಿಬಿ ಅಧಿಕಾರಿಗಳು, ಸುಮಾರು 1.5 ಕೆ.ಜಿಯಷ್ಟುನಿಷೇಧಿತ ಎಂಡಿಎಂಎ(ಮಾದಕ ದ್ರವ್ಯ) ಅನ್ನು ವಶಪಡಿಸಿಕೊಂಡಿದ್ದರು. ಬಳಿಕ ರಾಯಚೂರಿಗೆ ಹೋಗಿ ಗೌಸ್‌ ಅನ್ನು ಬಂಧಿಸಿದ್ದರು. ಅದೇ ಪ್ರಕರಣದಲ್ಲಿ ಅವರ ಬಳಿ ಕೆಲಸ ಮಾಡುತಿದ್ದ ವ್ಯಕ್ತಿಯನ್ನು ಎರಡನೇ ಆರೋಪಿಯನ್ನಾಗಿ ಮಾಡಿದ್ದರು.

ಎಸ್ಸಿ-ಎಸ್ಟಿ ಗುತ್ತಿಗೆ ಮೀಸಲು ಗೊಂದಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

2021ರ ಅ.4ರಂದು ಗೌಸ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಎರಡನೇ ಆರೋಪಿಯನ್ನು 2021ರ ನ.5ರಂದು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಗೌಸ್‌ ಸಹೋದರ ರಿಯಾಜ್‌ ನನ್ನ ಮತ್ತು ನನ್ನ ಪತ್ನಿಯನ್ನು ಹಲವು ಬಾರಿ ಸಂಪರ್ಕಿಸಿ ಎಚ್‌ಸಿಬಿ ವಿಚಾರಣೆಗೆ ಹಾಜರಾಗುವುದನ್ನು ತಪ್ಪಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಎರಡನೇ ಆರೋಪಿ ವಿಚಾರಣೆ ಹೇಳಿಕೆ ನೀಡಿದ್ದ. ಅದನ್ನು ಆಧರಿಸಿ ಗೌಸ್‌ಗೆ ನೀಡಲಾಗಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಎನ್‌ಸಿಬಿ ಗುಪ್ತಚರ ಅಧಿಕಾರಿಗಳು ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು.

Follow Us:
Download App:
  • android
  • ios