ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ

ಕೆಲವರು ಪರಿಷತ್ತಿನ ಕಾರ್ಯಚಟುವಟಿಕೆಗಳು ಸುಸೂತ್ರವಾಗಿ ನಡೆಯಬಾರದೆಂಬ ಕಾರಣಕ್ಕೆ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಪರಿಷತ್ತಿನ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ವ್ಯವಸ್ಥಿತ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

There is a Conspiracy Against Me Says Dr Mahesh Joshi gvd

ಬೆಂಗಳೂರು (ಮಾ.24): ಕೆಲವರು ಪರಿಷತ್ತಿನ ಕಾರ್ಯಚಟುವಟಿಕೆಗಳು ಸುಸೂತ್ರವಾಗಿ ನಡೆಯಬಾರದೆಂಬ ಕಾರಣಕ್ಕೆ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಪರಿಷತ್ತಿನ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ವ್ಯವಸ್ಥಿತ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್‌ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಪರಿಷತ್ತಿನ ಚುನಾವಣೆಗೆ ನಿಂತಾಗಲೇ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್‌, ವಸುಂಧರಾ ಭೂಪತಿ, ಡಾ.ಕೆ.ಶರೀಫಾ, ಪುಷ್ಪಾ ಅವರನ್ನೊಳಗೊಂಡ ತಂಡ ತಮಗೆ ಮತ ಹಾಕದಂತೆ ಪ್ರಚಾರ ಮಾಡಿತ್ತು. ತಾವು ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಬಹುಮತದಿಂದ ಗೆದ್ದ ನಂತರವೂ ಕಾರ್ಯ ನಿರ್ವಹಿಸಲು ಅವಕಾಶ ನೀಡದೆ ಅಪಪ್ರಚಾರ ಮುಂದುವರಿಸಿದೆ ಎಂದು ಆರೋಪಿಸಿದರು.

ಏರುದನಿಯಲ್ಲಿ ಮಾತಾಡ್ಬೇಡಿ: ಕಸಾಪ ಮಾರ್ಗಸೂಚಿ ಹೊರಡಿಸಿದ ಮಹೇಶ್‌ ಜೋಶಿ

‘ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಗೆ ತಿದ್ದುಪಡಿ ತರಲು ನಿರ್ಧರಿಸಿದಾಗಲೂ ಈ ಗುಂಪು ಅಪಸ್ವರ ಎತ್ತಿ ಅಡ್ಡಿ ಪಡಿಸಿತ್ತು. ಆದರೆ ಕಸಾಪ ಸರ್ವ ಸದಸ್ಯರ ಸಭೆ ಬೈಲಾ ತಿದ್ದುಪಡಿಗೆ ಸರ್ವಾನುಮತದ ಒಪ್ಪಿಗೆ ನೀಡಿತು. ನಂತರ ಈ ತಂಡ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಲು ಅನೇಕ ರೀತಿಯಲ್ಲಿ ಷಡ್ಯಂತ್ರಗಳನ್ನು ಮಾಡಿತು ಎಂದು ಆಪಾದಿಸಿದರು. ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಯಲಿಗಾರ್‌ ಅವರು, ಹಾವೇರಿಯ ಸಮ್ಮೇಳನದಲ್ಲಿ ತಮಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಲಿಲ್ಲ ಎಂದು ಆರೋಪಿಸಿ ಗೊಂದಲ ಸೃಷ್ಟಿಸಿದ್ದಲ್ಲದೆ, ದೂರದರ್ಶನದಲ್ಲಿ ತಮ್ಮ ಸಹೋದ್ಯೋಗಿಗಳ ಜತೆ ಒಂದು ನಿಮಿಷದ ಮೌನಾಚರಣೆಯ ಮೂಲಕ ಕಸಾಪದ ವಿರುದ್ಧ ಪ್ರತಿಭಟನೆ ಮಾಡಿದರು. 

ಪರಿಷತ್ತಿಗೆ ಮಾಡಿದ ಅವಮಾನ ಖಂಡಿಸಿ, ಅವರ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಇಟ್ಟೆವು. ಜತೆಗೆ ಕಸಾಪ ಪದಾಧಿಕಾರಿಗಳ ಸಭೆಯ ತೀರ್ಮಾನದಂತೆ ‘ಪಂಕಜಶ್ರೀ’ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಹಿಂಪಡೆಯಲಾಯಿತು. ಪರಿಷತ್ತಿನ ಇತಿಹಾಸದಲ್ಲಿ ಅಮಾನತು ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಡಾ.ಜಿ. ವೆಂಕಟಸುಬ್ಬಯ್ಯ ಅವರು ಅಧ್ಯಕ್ಷರಾಗಿದ್ದಾಗ ಮತ್ತು ಹಂ.ಪ. ನಾಗರಾಜಯ್ಯ ಅವರ ಅವಧಿಯಲ್ಲಿಯೂ ತಲಾ ಒಬ್ಬೊಬ್ಬ ಸದಸ್ಯರನ್ನು ಅಮಾನತು ಮಾಡಲಾಗಿತ್ತು ಎಂದು ಹೇಳಿದರು. ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಟೇಲ್‌ ಪಾಂಡು, ಹಿಂದುಳಿದ ವರ್ಗದ ಪ್ರತಿನಿಧಿ ಸುನಿಲ್‌ ಹೆಳವರ, ಹಾವೇರಿ ಕಸಾಪ ಘಟಕ ಅಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಪರ್ಧೆ ಹೆಸರಲ್ಲಿ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ: ಬಿ.ಎಸ್‌.ಯಡಿಯೂರಪ್ಪ

ಹಾವೇರಿ ಸಮ್ಮೇಳನದ ಯಶಸ್ಸನ್ನು ಅರಗಿಸಿಕೊಳ್ಳಲು ಆಗದೆ, 2023ರ ಜನವರಿ 8ರಂದು ಜನ ಸಾಹಿತ್ಯ ಸಮ್ಮೇಳನ ಎಂಬ ಪರಾರ‍ಯಯ ಸಮ್ಮೇಳನ ಅಯೋಜಿಸಿತ್ತು. ಆದರೆ ಆ ಸಮ್ಮೇಳನಕ್ಕೆ ಸಾವಿರದಷ್ಟುಸಹ ಜನ ಬರಲಿಲ್ಲ.
- ಡಾ.ಮಹೇಶ್‌ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ

Latest Videos
Follow Us:
Download App:
  • android
  • ios