Asianet Suvarna News Asianet Suvarna News

ಅನ್ನಕ್ಕಾಗಿ ಕ್ಷೌರಿಕನಾದ ನಾಟಕಕಾರನಿಗೆ ರಾಜ್ಯೋತ್ಸವ ಪುರಸ್ಕಾರ!

ಅನ್ನಕ್ಕಾಗಿ ಕ್ಷೌರಿಕ ವೃತ್ತಿ ಹಾಗೂ ಬ್ರೈನ್‌ ಟ್ಯೂಮರ್‌ ಕಾಯಿಲೆ ಇವೆರಡರ ನಡುವೆ ಸಾಹಸ ಜೀವನವನ್ನು ನಡೆಸುತ್ತಿರುವ ನಾಟಕ ರಚನೆಕಾರ ಎಸ್‌. ಎನ್‌. ರಂಗಸ್ವಾಮಿಯವರಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದು ಬಂದಿದೆ.

theatre artist SN Rangaswamy who became Barber later selected for Rajyotsava Award
Author
Davanagere, First Published Nov 29, 2018, 12:17 PM IST

ದಾವ​ಣ​ಗೆರೆ[ನ.29]: ಒಂದೆಡೆ ತುತ್ತು ಅನ್ನಕ್ಕಾಗಿ ಕ್ಷೌರಿಕ ವೃತ್ತಿ, ಮತ್ತೊಂದೆಡೆ ಬಾಧಿಸುತ್ತಿರುವ ಬ್ರೈನ್‌ ಟ್ಯೂಮರ್‌ ಕಾಯಿಲೆ. ಇವೆರಡರ ನಡುವೆ ಸಾಹಸ ಜೀವನವನ್ನು ನಡೆಸುತ್ತಿರುವ ಅದ್ಭುತ ನಾಟಕ ರಚನೆಕಾರನೊಬ್ಬನಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದು ಬಂದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿಯ ಎಸ್‌. ಎನ್‌. ರಂಗಸ್ವಾಮಿ ಈ ಅಪರೂಪದ ಸಾಧಕ.

ನಾಲ್ಕು ದಶ​ಕ​ಗಳ ಹಿಂದೆ ಮುಳು​ಗು​ತ್ತಿದ್ದ ನಾಟಕ ಕಂಪ​ನಿ​ಯೊಂದಕ್ಕೆ ಭರ್ಜರಿ ಆದಾಯ ತಂದು​ಕೊಡುವಂತಹ ಅದ್ಭು​ತ ನಾಟ​ಕ​ ರಚಿ​ಸಿ​ಕೊ​ಟ್ಟಿದ್ದರು. ಅಲ್ಲದೆ ತಾನೇ ಬರೆದ ನಾಟ​ಕ​ವನ್ನು ಕಾಸು ಕೊಟ್ಟು ನೋಡಿ​ದ್ದಂತಹ ಕಲಾ ಪ್ರೋತ್ಸಾ​ಹಕ. ಆದರೆ ಇಂದು 70ರ ಇಳಿ ವಯ​ಸ್ಸಿ​ನ​ಲ್ಲಿ ಕುಟುಂಬದ ನೊಗ ಹೊರ​ಬೇ​ಕಾದ ಅನಿ​ವಾ​ರ್ಯತೆ. ಚಿರಡೋಣಿ ಗ್ರಾಮದ ಪುಟ್ಟಶೆಡ್ಡಿನಂತಹ ಕ್ಷಾೌರದಂಗಡಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಇವರದ್ದು ನಿತ್ಯ ಕಣ್ಣೀರಿನ ಬದುಕು.

ಬ್ರೈನ್‌ ಟ್ಯೂಮರ್‌ಗೆ ಅವರಿಗೆ ಈಗಾಗಲೇ ಮಣಿಪಾಲ ಆಸ್ಪ​ತ್ರೆ​ಯಲ್ಲಿ ಶಸ್ತ್ರ ಚಿಕಿ​ತ್ಸೆ​ ಆಗಿದೆ. ಪ್ರತಿ 3 ತಿಂಗ​ಳಿ​ಗೊಮ್ಮೆ ಮಣಿ​ಪಾಲ ಆಸ್ಪ​ತ್ರೆಗೆ ಹೋಗಿ ತಪಾ​ಸಣೆ ಮಾಡಿ​ಸಿ​ಕೊಂಡು, ಚಿಕಿತ್ಸೆ ಮಾಡಿ​ಸಿ​ಕೊ​ಳ್ಳ​ಬೇಕು. ಇವೆಲ್ಲದರ ನಡುವೆ ಮಾಸಾ​ಶನ ಪಡೆ​ಯು​ವ ಎಲ್ಲಾ ಅರ್ಹತೆ ಇದ್ದರೂ ಜಿಲ್ಲಾ​ಡ​ಳಿತ ಮಾತ್ರ ಇಂತ​ಹ​ದ್ದೊಂದು ಅವ​ಕಾಶ ಮಾಡಿ​ಕೊ​ಟ್ಟಿಲ್ಲ. ಕ್ಷೌರಿಕ ವೃತ್ತಿ ಮಾಡ​ಬೇಕು. ತನ್ನ ಚಿಕಿ​ತ್ಸೆಗೆ, ಕುಟುಂಬ ನಿರ್ವ​ಹ​ಣೆಗೆ ಹಣ ಹೊಂದಿ​ಸ​ಬೇ​ಕಾದ ಸ್ಥಿತಿ ರಂಗ​ಸ್ವಾ​ಮಿ​ಯದ್ದು.

ನಾಟಕ ರಚನೆಯಲ್ಲಿ ಎತ್ತಿದ ಕೈ

ನಾಲ್ಕು ದಶ​ಕ​ಗಳ ಹಿಂದೆ ಪ್ರಸಿದ್ಧ ನಾಟಕ ಕಂಪ​ನಿಯೊಂದು ಸಂಕಷ್ಟಕ್ಕೆ ಸಿಲು​ಕಿತ್ತು. ಅಂದು ರಂಗ​ಸ್ವಾಮಿ ‘ದುಡುಕಿ ಹೋದ ಮಗ-ಹುಡುಕಿ ಬಂದ ಸೊಸೆ’ ಎಂಬ ನಾಟ​ಕ​ ಬರೆ​ದು ನಾಟಕ ಕಂಪನಿಗೆ ನೀಡಿದ್ದರು. ಆ ನಾಟಕ ವೃತ್ತಿ ರಂಗ​ಭೂಮಿ ಚರಿ​ತ್ರೆ​ಯಲ್ಲೇ ದಾಖಲೆ ಮಾಡು​ತ್ತದೆ. ಬೆಳ​ಗಾವಿ ಗಡಿ​ನಾ​ಡಿ​ನಲ್ಲಿ 400 ಭರ್ಜರಿ ಪ್ರಯೋಗ ಕಾಣು​ತ್ತದೆ. ಇಂದಿಗೂ ಆ ನಾಟ​ಕಕ್ಕೆ ಅದೇ ಮಹ​ತ್ವ​ವಿದೆ. ಅದ​ರಿಂದ ನಾಟಕ ಕಂಪ​ನಿಗೆ ಭರ​ಪೂರ ಆದಾಯ ಬರು​ತ್ತದೆ. ಆದರೆ ರಂಗಸ್ವಾಮಿ ಮಾತ್ರ ಆ ಕಂಪನಿ ಮಾಲೀಕರಿಗೆ ಕೊಟ್ಟಮಾತಿನಂತೆ ಆ ನಾಟಕವನ್ನು ಬೇರೆ ಯಾರಿಗೂ ನೀಡಲಿಲ್ಲ. ಮಾತ್ರವಲ್ಲ ಮುದ್ರಿಸಲೂ ಇಲ್ಲ. ಒಂದುವೇಳೆ ಈ ಎರಡರಲ್ಲಿ ಒಂದು ಕೆಲಸ ಮಾಡಿದ್ದರೂ ಅವರು ಭರಪೂರ ಹಣ ಗಳಿಸಬಹುದಿತ್ತು.

Follow Us:
Download App:
  • android
  • ios