Bengaluru crime: ತ್ರಿಕೋನ ಪ್ರೇಮ, ಯುವಕನ ಅಪಹರಿಸಿ ಇರಿದು ಹತ್ಯೆ!
ತನ್ನ ನೆರೆಮನೆಯ ಯುವತಿ ಜತೆ ಸ್ನೇಹ ಮಾಡಿದ ಎಂಬ ಕಾರಣಕ್ಕೆ ಡೆಲವರಿ ಬಾಯ್‌ನನ್ನು ಅಪಹರಿಸಿ ಕೊಲೆ ಮಾಡಿದ ಬಳಿಕ ತಾವೇ ಚಂದ್ರಾಲೇಔಟ್ ಠಾಣೆಗೆ ಬಂದು ಮೂವರು ಕಿಡಿಗೇಡಿಗಳು ಶರಣಾಗಿರುವ ಘಟನೆ ಮಂಗಳವಾರ ನಸುಕಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು (ಜು.12): ತನ್ನ ನೆರೆಮನೆಯ ಯುವತಿ ಜತೆ ಸ್ನೇಹ ಮಾಡಿದ ಎಂಬ ಕಾರಣಕ್ಕೆ ಡೆಲವರಿ ಬಾಯ್‌ನನ್ನು ಅಪಹರಿಸಿ ಕೊಲೆ ಮಾಡಿದ ಬಳಿಕ ತಾವೇ ಚಂದ್ರಾಲೇಔಟ್ ಠಾಣೆಗೆ ಬಂದು ಮೂವರು ಕಿಡಿಗೇಡಿಗಳು ಶರಣಾಗಿರುವ ಘಟನೆ ಮಂಗಳವಾರ ನಸುಕಿನಲ್ಲಿ ಬಂಧಿಸಿದ್ದಾರೆ.
ಗಂಗೊಂಡನಹಳ್ಳಿಯ 4ನೇ ಕ್ರಾಸ್ ನಿವಾಸಿ ಮೊಹಮ್ಮದ್ ತಾಹೀರ್ (19) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಟಿಪ್ಪು ನಗರದ ನಿವಾಸಿ ನಿಯಾಮತ್, ನದೀಮ್ ಹಾಗೂ ಸಮೀರ್ ಬಂಧಿತರಾಗಿದ್ದಾರೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಇರ್ಫಾನ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Bhimatira Rowdy Sheeter Murder: ಬಡ್ಡಿ ದಂಧೆಗೆ ಹಾಡಹಗಲೇ ಭೀಮಾತೀರದಲ್ಲಿ ಬಿತ್ತು ರೌಡಿಶೀಟರ್ ಹೆಣ!
ತ್ರಿಕೋನ ಪ್ರೇಮ ಕತೆಗೆ ಕೊಲೆ:
ಹಿಂದೂಸ್ತಾನ್ ಕಂಪನಿಯಲ್ಲಿ ಡೆಲವರಿ ಬಾಯ್ ಆಗಿದ್ದ ತಾಹೀರ್, ತನ್ನ ಪೋಷಕರ ಜತೆ ಗಂಗೊಂಡನಹಳ್ಳಿಯಲ್ಲಿ ವಾಸವಾಗಿದ್ದ. ಹಲವು ದಿನಗಳಿಂದ ಆತನಿಗೆ ಟಿಪ್ಪು ನಗರದ ನಿಯಾಮತ್ ಮನೆ ಹತ್ತಿರದ ಯುವತಿ ಜತೆ ಸ್ನೇಹವಿತ್ತು. ಈ ಗೆಳೆತನ ತಿಳಿದು ಕೆರಳಿದ ನಿಯಾಮತ್, ಯುವತಿಯ ಸ್ನೇಹ ಕಡಿದುಕೊಳ್ಳುವಂತೆ ತಾಹೀರ್‌ಗೆ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಬೆಳೆದು ಗಲಾಟೆಗಳು ಆಗಿದ್ದವು. 2022ರಲ್ಲಿ ನಿಯಾಮತ್ ಮೇಲೆ ತಾಹೀರ್ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿದ್ದ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ಬಳಿಕ ತಾನು ನಿಯಾಮತ್‌ಗೆ ಹೊಡೆದಿದ್ದಾಗಿ ಹೇಳಿಕೊಂಡು ಗೆಳೆಯರ ಬಳಿ ತಾಹೀರ್ ಗೇಲಿ ಮಾಡಿದ್ದ. ಈ ಸಂಗತಿ ತಿಳಿದು ಮತ್ತಷ್ಟುಸಿಟ್ಟಿಗೆದ್ದ ನಿಯಾಮತ್, ಇದಕ್ಕೆ ಪ್ರತಿಕಾರ ತೀರಿಸಲು ಹೊಂಚು ಹಾಕುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ದ್ವೇಷದ ಹಿನ್ನೆಲೆಯಲ್ಲಿ ತಾಹೀರ್ ಹತ್ಯೆಗೆ ನಿಯಾಮತ್ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಆತನ ಸ್ನೇಹಿತರಾದ ನದೀಮ್, ಸಮೀರ್ ಹಾಗೂ ಇರ್ಫಾನ್ ಸಾಥ್ ನೀಡಿದ್ದಾರೆ. ಅಂತೆಯೇ ಇರ್ಫಾನ್ ಮೂಲಕ ರಾತ್ರಿ 10 ಗಂಟೆಯಲ್ಲಿ ಮಾತುಕತೆ ನೆಪದಲ್ಲಿ ತಾಹೀರ್‌ಗೆ ನಿಯಾತಮ್ ಕರೆ ಮಾಡಿಸಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ ತಾಹೀರ್, ಗೆಳೆಯನ ಕರೆ ಮೇರೆಗೆ ತಂದೆಗೆ ಸ್ಪಲ್ಪ ಹೊತ್ತು ಹೊರಗೆ ಹೋಗಿ ಬರುವುದಾಗಿ ಹೇಳಿ ಬಂದಿದ್ದಾನೆ. ಆಗ ಆತನನ್ನು ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಆಟೋದಲ್ಲಿ ಆರೋಪಿಗಳು ಅಪಹರಿಸಿದ್ದರು. ಬಳಿಕ ಕೆಂಗೇರಿಗೆ ಕರೆದೊಯ್ದು ಚಾಕುವಿನಿಂದ ಇರಿದು ಹತ್ಯೆಗೈದು ಉತ್ತರಹಳ್ಳಿ ರಸ್ತೆಯ ಲಕ್ಷ್ಮೇ ದೇವಾಲಯ ಸಮೀಪ ಮೃತದೇಹ ಎಸೆದು ಪರಾರಿಯಾಗಿದ್ದರು.
ಕೊಲೆಗಡುಕರ ರಕ್ಷಣೆಗೆ ನಿಂತ ಕಾಂಗ್ರೆಸ್ ಸರ್ಕಾರ: ನಳೀನ್ ಕುಮಾರ ಕಟೀಲ್ ಆರೋಪ
ತಂದೆ ಮಾತನ್ನೂ ಕೇಳದೆ ಕೊಂದ
ಇತ್ತ ಮನೆಯಿಂದ ಹೊರಹೋದ ಮಗ ಮರಳದೆ ಹೋದಾಗ ಆತಂಕಗೊಂಡ ತಾಹೀರ್ ತಂದೆ ಸೈಯದ್ ಮೊಹಮ್ಮದ್ ಅವರು, ಮಗನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಅಷ್ಟರಲ್ಲಿ ತಾಹೀರ್ ತನ್ನ ಸೋದರಿ ಮತ್ತು ಕಂಪನಿ ಮಾಲಿಕ ತಬ್ರೇಜ್ ಅವರಿಗೆ ಕರೆ ಮಾಡಿ ನನ್ನನ್ನು ನಾಲ್ಕೈದು ಮಂದಿ ಹಿಡಿದುಕೊಂಡು ನಾಯಂಡಹಳ್ಳಿ ಮೆಟ್ರೋ ನಿಲ್ದಾಣ ಬಳಿ ಕರೆದೊಯ್ದಿದ್ದಾರೆ ಎಂದಿದ್ದಾನೆ. ಈ ವಿಷಯ ತಿಳಿದ ತಾಹೀರ್ ತಂದೆ, ಕೆಲ ತಿಂಗಳ ಹಿಂದೆ ತನ್ನ ಮಗನೊಟ್ಟಿಗೆ ಗಲಾಟೆ ಮಾಡಿಕೊಂಡಿದ್ದ ನಿಯಾಮತ್ ಮೇಲೆ ಅನುಮಾನಗೊಂಡು ಆತನ ಮನೆಗೆ ದೌಡಾಯಿಸಿದ್ದಾರೆ. ಆಗ ನಿಯಾಮತ್ ತಂದೆ ಜಲಾಲ್ ಅವರು, ಮಗನಿಗೆ ಕರೆ ಮಾಡಿ ವಿಚಾರಿಸಿದಾಗ ತಾನು ಕೆಂಗೇರಿಯಲ್ಲಿದ್ದೇನೆ. ನನ್ನೊಟ್ಟಿಗೆ ತಾಹೀರ್ ಇದ್ದಾನೆ ಎಂದಿದ್ದ. ಆಗ ತಾಹೀರ್‌ಗೆ ಅಪಾಯ ಮಾಡದಂತೆ ತಂದೆ ಹೇಳಿದರೂ ಕೇಳದೆ ನದೀಮ್ ಕರೆ ಸ್ಥಗಿತಗೊಳಿಸಿದ್ದ. ಇದರಿಂದ ಮತ್ತಷ್ಟುಆತಂಕಗೊಂಡ ತಾಹೀರ್ ತಂದೆ, ನಾಯಂಡಹಳ್ಳಿ ಹಾಗೂ ಕೆಂಗೇರಿ ಮೆಟ್ರೋ ನಿಲ್ದಾಣಗಳ ಬಳಿಗೆ ತೆರಳಿ ಹುಡುಕಾಡಿದರೂ ಮಗ ಪತ್ತೆಯಾಗದೆ ಆಘಾತಗೊಂಡಿದ್ದರು. ಕೊನೆಗೆ ಚಂದ್ರಾಲೇಔಟ್ ಠಾಣೆಗೆ ಅವರು ದೂರು ನೀಡಿದ್ದಾರೆ. ಅಷ್ಟರಲ್ಲಿ ಮುಂಜಾನೆ 5.30 ಗಂಟೆಗೆ ಚಂದ್ರಾಲೇಔಟ್ ಠಾಣೆಗೆ ಬಂದು ಆರೋಪಿಗಳು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.