ಬಸ್‌ಗಾಗಿ ಕಾಯುತ್ತಿದ್ದ ವೃದ್ಧನ ಬಳಿ ಹಣ ಕಸಿದು ಪರಾರಿಯಾಗಿದ್ದ ಮೂವರು ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.   

ಬೆಂಗಳೂರು (ಜು.12) : ಬಸ್‌ಗಾಗಿ ಕಾಯುತ್ತಿದ್ದ ವೃದ್ಧನ ಬಳಿ ಹಣ ಕಸಿದು ಪರಾರಿಯಾಗಿದ್ದ ಮೂವರು ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಪೂಜಿನಗರ ನಿವಾಸಿಗಳಾದ ಸ್ನೇಹಾ, ಅವಿಷ್ಕಾ, ದೀಪಿಕಾ ಹಾಗೂ ಪ್ರಕಾಶ್‌ ಬಂಧಿತರು. ಆರೋಪಿಗಳು ಕೆಲಸಕ್ಕೆ ತೆರಳುವ ಉದ್ಯೋಗಿಗಳು ಹಾಗೂ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವವರ ಬಳಿ ಹಣ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದರು. ಜೂ.23ರ ಬೆಳಗ್ಗೆ 6.30ರ ಸುಮಾರಿಗೆ ಏರ್‌ಪೋರ್ಟಿಗೆ ತೆರಳಲು ಹೆಬ್ಬಾಳ ಮೇಲ್ಸೇತುವೆ ಸಮೀಪದ ಬಸ್‌ ನಿಲ್ದಾಣದಲ್ಲಿ 70 ವರ್ಷದ ವೃದ್ಧರೊಬ್ಬರು ನಿಂತಿದ್ದರು. ಈ ವೇಳೆ ಹಣ ಕೇಳಿದ ಲೈಂಗಿಕ ಅಲ್ಪಸಂಖ್ಯಾತರರಿಗೆ ವೃದ್ಧ ಚಿಲ್ಲರೆ ಹಣ ನೀಡಿದ್ದರು. ಚಿಲ್ಲರೆ ಬೇಡ ಎಂದು ವೃದ್ಧನ ಬಳಿ ಬಲವಂತವಾಗಿ .6 ಸಾವಿರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಭಿಕ್ಷಾಟನೆ ಬಿಟ್ಟು ರಾಬರಿಗಿಳಿದ ಮಂಗಳಮುಖಿಯರು: ಟೆಕ್ಕಿಗಳೇ ಇವರ ಟಾರ್ಗೆಟ್‌

ಆರೋಪಿ ಪ್ರಕಾಶ್‌ ಆಟೋ ಚಾಲಕನಾಗಿದ್ದು, ಲೈಂಗಿಕ ಅಲ್ಪ ಸಂಖ್ಯಾತರರು ಆತನ ಆಟೋದಲ್ಲಿ ಸುತ್ತಾಡುತ್ತಿದ್ದರು. ಪ್ರತಿ ದಿನ ಮುಂಜಾನೆ 5ರಿಂದ 8ರವರೆಗೆ ನಗರದ ವಿವಿಧೆಡೆ ಸುತ್ತಾಡಿ ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದರು. ಆರೋಪಿಗಳು ನಗರದ ಹಲವೆಡೆ ಸುಲಿಗೆ ಮಾಡಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.