Asianet Suvarna News Asianet Suvarna News

Term End of 25 MLCs: ಮೇಲ್ಮನೆಯ 25 ಸದಸ್ಯರು ಇಂದು ನಿವೃತ್ತಿ, 20 ಹೊಸ ಎಂಟ್ರಿ: ಇಲ್ಲಿದೆ ಪಟ್ಟಿ!

*25 ಸದಸ್ಯರು ಇಂದು ನಿವೃತ್ತಿ
*25ರ ಪೈಕಿ ಐವರು ಮರು ಆಯ್ಕೆ
*20 ಹೊಸ ಮುಖಗಳು ಪರಿಷತ್‌ಗೆ

The terms of 25 elected members of the Karnataka Legislative Council come to end on January 5 mnj
Author
Bengaluru, First Published Jan 5, 2022, 3:35 AM IST

ಬೆಂಗಳೂರು(ಜ.5): ಕಳೆದ 24 ವರ್ಷಗಳಿಂದ ನಿರಂತರವಾಗಿ ಪರಿಷತ್‌ (Legislative Council) ಸದಸ್ಯರಾಗಿ, ಪ್ರತಿಪಕ್ಷದ ನಾಯಕರಾಗಿದ್ದ ಎಸ್‌.ಆರ್‌.ಪಾಟೀಲ್‌, ಎರಡು ಅವಧಿಗೆ ಸದಸ್ಯರಾಗಿದ್ದ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಪ್ರತಿಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ, ಶಾಸಕರಾಗಿ, ಪರಿಷತ್‌ ಸದಸ್ಯರಾಗಿ, ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್‌ ಪಕ್ಷದ ಕೆ. ಪ್ರತಾಪಚಂದ್ರ ಶೆಟ್ಟಿ ಜ.5 ರಂದು ನಿವೃತ್ತರಾಗಲಿದ್ದಾರೆ.

ಇನ್ನು ಹಿರಿಯ ಸದಸ್ಯ ಕೆ.ಸಿ. ಕೊಂಡಯ್ಯ, ಕೃಷಿ ಕುರಿತು ಪ್ರಭಾವಶಾಲಿಯಾಗಿ ಚರ್ಚೆ ಮಾಡುತ್ತಿದ್ದ ಬಸವರಾಜ ಪಾಟೀಲ್‌ ಇಟಗಿ, ಹಿಂದುಳಿದ ವರ್ಗದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುತ್ತಿದ್ದ ಶ್ರೀಕಾಂತ್‌ ಘೋಟ್ನೇಕರ್‌, ಆರ್‌. ಧರ್ಮಸೇನ, ಶಿಕ್ಷಣದ ಕುರಿತು ಗಮನ ಸೆಳೆಯುತ್ತಿದ್ದ ಜೆಡಿಎಸ್‌ ಸದಸ್ಯ ಎನ್‌. ಅಪ್ಪಾಜಿಗೌಡ ಸೇರಿದಂತೆ 25 ಸದಸ್ಯರು ನಿವೃತ್ತರಾಗಲಿದ್ದಾರೆ.

ಇದನ್ನೂ ಓದಿ: Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ

ಉಳಿದಂತೆ ವಿಜಯಸಿಂಗ್‌,ಜಿ. ರಘು ಆಚಾರ್‌, ಆರ್‌. ಪ್ರಸನ್ನಕುಮಾರ್‌, ಎಂ.ಎ. ಗೋಪಾಲಸ್ವಾಮಿ, ಕಾಂತರಾಜ್‌, ಸಿ.ಆರ್‌. ಮನೋಹರ್‌, ಎಂ.ಪಿ. ಸುನೀಲ್‌ ಸುಬ್ರಮಣಿ, ಎಸ್‌ ನಾಗರಾಜ್‌ (ಸಂದೇಶ ನಾಗರಾಜ್‌) ಅವರು ನಿವೃತ್ತರಾಗಲಿದ್ದಾರೆ. ಕಾಂಗ್ರೆಸ್‌ ಸದಸ್ಯರಾಗಿದ್ದ ಶ್ರೀನಿವಾಸ ಮಾನೆ ಹಾನಗಲ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ನಂತರ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಐವರ ಮರು ಆಯ್ಕೆ

ನಿವೃತ್ತರಾಗುತ್ತಿರುವವ ಪೈಕಿ ಐವರು ಮಾತ್ರ ಮರುಆಯ್ಕೆಯಾಗಿದ್ದಾರೆ. ಪರಿಷತ್‌ ಉಪಸಭಾಪತಿಯಾಗಿರುವ ಎಂ.ಕೆ. ಪ್ರಾಣೇಶ್‌, ಹಾಲಿ ಸಭಾನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯ ಪ್ರದೀಪ್‌ ಶೆಟ್ಟರ್‌, ಕಾಂಗ್ರೆಸ್‌ನ ಬಿ.ಜಿ. ಪಾಟೀಲ್‌, ಎಸ್‌.ರವಿ ಹಾಗೂ ಸುನೀಲ್‌ಗೌಡ ಪಾಟೀಲ್‌ ಮರು ಆಯ್ಕೆಯಾಗಿದ್ದಾರೆ.

ಹೊಸ ಮುಖಗಳು

20 ಸದಸ್ಯರು ಮೊದಲ ಬಾರಿಗೆ ವಿಧಾನ ಪರಿಷತ್‌ ಮೆಟ್ಟಿಲು ಹತ್ತುತ್ತಿರುವುದು ವಿಶೇಷವಾಗಿದೆ. ಈ ಪೈಕಿ ಅನೇಕರು ವಿವಿಧ ಪಕ್ಷಗಳಲ್ಲಿ ಇರುವ ಪ್ರಭಾವಿ ಮುಖಂಡರ ಸಂಬಂಧಿಗಳೇ ಆಗಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಮೊಮ್ಮಗ ಸೂರಜ್‌ ರೇವಣ್ಣ, ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಸೋದರ ಚೆನ್ನರಾಜ್‌ ಹಟ್ಟಿಹೊಳಿ, ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರ ಪುತ್ರ ಎಸ್‌.ಆರ್‌. ರಾಜೇಂದ್ರ, ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ ಸೋದರ ಸುಜಾ ಕುಶಾಲಪ್ಪ, ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರ ಪುತ್ರ ಡಿ.ಎಸ್‌.ಅರುಣ್‌ಕುಮಾರ್‌ ಹಾಗೂ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸೋದರ ಲಖನ್‌ ಜಾರಕಿಹೊಳಿ ಪ್ರಮುಖರಾಗಿದ್ದಾರೆ.

ಇದನ್ನೂ ಓದಿ: North Karnataka ಪ್ರತ್ಯೇಕ ರಾಜ್ಯ ಬೇಡ, ಸಮಗ್ರ ಕರ್ನಾಟಕವೇ ಇರಲಿ: ಹೊರಟ್ಟಿ

ಉಳಿದಂತೆ ಕಾಂಗ್ರೆಸ್‌ ಪಕ್ಷದ ಸಲೀಂ ಅಹಮದ್‌, ದಿನೇಶ್‌ ಜಿ.ಗೂಳಿಗೌಡ, ಡಾ. ತಿಮ್ಮಯ್ಯ, ಮಂಜುನಾಥ್‌ ಭಂಡಾರಿ, ಅನಿಲ್‌ಕುಮಾರ್‌, ಶರಣಗೌಡ ಬೈಯಾಪುರ, ಬಿಜೆಪಿಯ ಗೋಪಿನಾಥ್‌ ರೆಡ್ಡಿ , ಗಣಪತಿ ಉಳ್ವೇಕರ್‌, ವೈ,ಎಂ. ಸತೀಶ್‌, ಕೆ.ಎಸ್‌. ನವೀನ್‌, ಭೀಮರಾವ್‌ ಪಾಟೀಲ್‌, ಪಿ.ಎಚ್‌. ಪೂಜಾರ್‌ ಮೊದಲ ಬಾರಿಗೆ ಹಿರಿಯರ ಮನೆ ಪ್ರವೇಶಿಸಿದ್ದಾರೆ.

ಬೀಳ್ಗೊಡುಗೆ

ನಿವೃತ್ತಿಯಾಗಲಿರುವ 25 ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭ ಜ. 5ರಂದು ಬೆಳಗ್ಗೆ 11 ಗಂಟೆಗೆ ವಿಕಾಸಸೌಧದಲ್ಲಿ ನಡೆಯಲಿದೆ. ಸಭಾಪತಿ ಬಸವರಾಜ ಹೊರಟ್ಟಿಸೇರಿದಂತೆ ಅನೇಕ ಸಚಿವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೊರಟ್ಟಿಸ್ಥಾನ ಗಟ್ಟಿ

ಪಕ್ಷಗಳ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗಿದ್ದರೂ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಫಲವಾಗಿ ಪರಿಷತ್‌ ಸಭಾಪತಿಯಾಗಿರುವ ಹಿರಿಯ ಸದಸ್ಯ ಜೆಡಿಎಸ್‌ನ ಬಸವರಾಜ ಹೊರಟ್ಟಿಅವರೇ ಮುಂದುವರೆಯಲಿದ್ದಾರೆ. ಬರುವ ಜುಲೈ 4 ರಂದು ಅವರ ಸದಸ್ಯತ್ವ ಕೊನೆಗೊಳ್ಳಲಿದೆ. ಅವರ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರು, ಸದಸ್ಯರು ಒಲವು ಹೊಂದಿರುವುದರಿಂದ ಸಭಾಪತಿ ಸ್ಥಾನದಲ್ಲಿ ಅವರೇ ಮುಂದುವರೆಯಲಿದ್ದಾರೆ.

ಬಿಜೆಪಿಗೆ ಬಹುಮತದ ಕೊರತೆ

ಒಟ್ಟು 75 ಸದಸ್ಯತ್ವ ಹೊಂದಿರುವ ವಿಧಾನ ಪರಿಷತ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಸಭಾಪತಿ ಸ್ಥಾನ ಹೊರತು ಪಡಿಸಿದರೆ, ಬಿಜೆಪಿ 37, ಕಾಂಗ್ರೆಸ್‌ 26, ಜೆಡಿಎಸ್‌ 10 ಸದಸ್ಯರನ್ನು ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಮೇಲ್ಮನೆಯಲ್ಲಿ ಬಹುಮತ ಹೊಂದಲು ಬಿಜೆಪಿಗೆ ಕೇವಲ ಒಂದು ಸ್ಥಾನದ ಕೊರತೆ ಇದೆ.

Follow Us:
Download App:
  • android
  • ios